spot_img
spot_img

ಮೂಡಲಗಿ ಪಿಕೆಪಿಎಸ್ ನಲ್ಲಿ ಅವ್ಯವಹಾರ; ತನಿಖೆಗೆ ಸದಸ್ಯರ ಆಗ್ರಹ

Must Read

spot_img
- Advertisement -

ಮೂಡಲಗಿ – ಮೂಡಲಗಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಿಂದಿನ ಕಾರ್ಯದರ್ಶಿ ಮಲ್ಲಿಕಾರ್ಜುನ ನಿಡಸೋಸಿ ನಡೆಸಿದ ಅವ್ಯವಹಾರದ ಬಗ್ಗೆ ತನಿಖೆ, ಸದಸ್ಯರ ಡಿವಿಡೆಂಡ್, ಕಟ್ಟಡ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸಂಘದ ಕೆಲವು ಸದಸ್ಯರು ಸಹಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ, ಸಚಿವಾಲಯಕ್ಕೆ ದೂರು ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹೊಳೆಪ್ಪಾ ಬಾಳಪ್ಪಾ ಶಿವಾಪೂರ ಅವರು, ಸನ್ ೨೦೧೫ ರಿಂದ ೨೦೧೨೧ ರ ವರೆಗೆ ಸಂಘದ ಲೆಕ್ಕಪತ್ರದ ಪುನರ್ ಪರಿಶೀಲನೆ ( ರಿ ಅಡಿಟ್ ) ಆಗಬೇಕೆಂದು ಆಗ್ರಹಿಸಿದರು.

ಈ ಮೊದಲು ಸಂಘದ ಕಾರ್ಯದರ್ಶಿ ಯಾಗಿದ್ದ ಮಲ್ಲಿಕಾರ್ಜುನ ನಿಡಸೋಸಿ ಲೆಕ್ಕಪತ್ರದಲ್ಲಿ ಅಪರಾತಪರಾ ಮಾಡಿದ್ದು ಆತನಿಂದ ಈಗಾಗಲೇ ಸುಮಾರು ೨೪.೯೦ ಲಕ್ಷ ರೂ.ಗಳ ಪಾವತಿ ಮಾಡಿಸಿಕೊಳ್ಳಲಾಗಿದೆ. ಇದರಂತೆ ಇನ್ನೂ ಎಷ್ಟು ಪ್ರಮಾಣದಲ್ಲಿ ಅವ್ಯವಹಾರ ನಡೆದಿರಬಹುದೆಂಬ ಬಗ್ಗೆ ಗುಮಾನಿ ಇದೆ.

- Advertisement -

ಇದಲ್ಲದೆ ಸಂಘದ ನೂತನ ಕಟ್ಟಡ ಕಾಮಗಾರಿಯಲ್ಲಿ ಹೆಚ್ಚುವರಿಯಾಗಿ ೫ ಲಕ್ಷ ರೂ. ಖರ್ಚು ವೆಚ್ಚ ತೋರಿಸಿದ್ದಾರೆ, ಸುಮಾರು ೭.೨೨ ಲಕ್ಷ ರೂ. ಗಳ ರಾಸಾಯನಿಕ ಗೊಬ್ಬರ ಹಾನಿಯಾಗಿರುವ ಬಗ್ಗೆ ಹಾಗೂ ಸದಸ್ಯರ ಡಿವಿಡೆಂಡ್ ನೀಡುವಲ್ಲಿಯೂ ಅವ್ಯವಹಾರ ನಡೆದಿದೆ. ಮೃತರಾದ ಕೆಲವು ಸದಸ್ಯರ ಡಿವಿಡೆಂಡ್ ಮೊತ್ತ ರೂ. ೧೦.೯೮ ಲಕ್ಷಗಳಷ್ಟು ಹಣವನ್ನು ಖರ್ಚು ಹಾಕಿ ತೆಗೆದುಕೊಂಡಿದ್ದು ಈ ಬಗ್ಗೆ ಕೂಲಂಕುಷ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೊಂದು ಆಶ್ಚರ್ಯವೆಂದರೆ, ಸನ್ ೨೦೧೧ ರಿಂದ ೨೦೧೪ ರವರೆಗೆ ಡಿವಿಡೆಂಡ್ ವಿಷಯ ಯಾವುದೇ ಸಭೆಯಲ್ಲಿ ಚರ್ಚೆಯಾಗಿಲ್ಲ. ಕೆಲವು ಶೇರುದಾರರ ಡಿವಿಡೆಂಡ್ ಪಾವತಿ ಮಾಡಿದ್ದರೂ ಅದರ ರಶೀದಿಗಳಲ್ಲಿ ಆ ಶೇರುದಾರರ ಸಹಿಗಳಿಲ್ಲ ! ಈ ಬಗ್ಗೆಯೂ ತನಿಖೆ ನಡೆಯಬೇಕಾಗಿದೆ. ಇನ್ನು ಕೆಲವು ಅಂಶಗಳೆದರೆ ; ರೇಷನ್ ಕಮಿಷನ್ ಜಮಾ ಆಗದಿರುವ ಬಗ್ಗೆ, ಖಾಲಿ ಚೀಲಗಳ ಹಣ ಜಮಾ ಆಗದಿರುವ ಬಗ್ಗೆ ಕಟ್ಟಡಕ್ಕೆ ೧೦ ಲಕ್ಷ ರೂ. ಹೆಚ್ಚುವರಿ ಖರ್ಚು ಮಾಡಿರುವ ಬಗ್ಗೆ….. ಹೀಗೆ ಅನೇಕ ರೀತಿಯಲ್ಲಿ ಸದರಿ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.

ಸದಸ್ಯರಿಂದ ಹಲ್ಲೆಗೆ ಯತ್ನ:

ಮೂಡಲಗಿ ಪಿಕೆಪಿಎಸ್ ನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತಾನು ಪ್ರಶ್ನಿಸಲು ಹೋದಾಗ ತನ್ನ ಮೇಲೆ ಸದಸ್ಯರು ಹಾಗೂ ಅಧ್ಯಕ್ಷರು ಹಲ್ಲೆ ಮಾಡಲು ಯತ್ನಿಸಿದರು ಎಂದು ಹೊಳೆಪ್ಪ ಶಿವಾಪೂ ಅವರು ನೇರ ಆರೋಪ ಮಾಡಿದರು.

- Advertisement -

ಇನ್ನೂ ಆದರೂ ಕೂಡ ತನ್ನ ಜೀವಕ್ಕೆ ಇವರಿಂದ ಅಪಾಯವಿದ್ದು ಇಷ್ಟರಲ್ಲಿಯೇ ತಾನು ಮೂಡಲಗಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲು ಮಾಡಲಿರುವುದಾಗಿ ಹೊಳೆಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅವರ ಜೊತೆ ಸಾಮಾಜಿಕ ಕಾರ್ಯಕರ್ತ ಮಹಾಲಿಂಗಯ್ಯ ನಂದಗಾವಿಮಠ ಇದ್ದರು.

ಹೊಳೆಪ್ಪ ಅವರು ನೀಡಿರುವ ಲಿಖಿತ ದೂರಿನಲ್ಲಿ ಸಂಘದ ಅನೇಕ ಸದಸ್ಯರು ಸಹಿ ಹಾಕಿದ್ದು ಸಂಘದಲ್ಲಿ ಇದೇ ರೀತಿಯಾಗಿ ಅವ್ಯವಹಾರ ನಡೆದಿದ್ದು ಸದಸ್ಯರ ಗಮನಕ್ಕೂ ಬಂದಿದ್ದು ಎಲ್ಲರೂ ಸೇರಿ ಸಹಕಾರ ಸಚಿವಾಲಯ, ಜಿಲ್ಲಾಧಿಕಾರಿಗಳು, ಸಹಕಾರಿ ಸಂಘಗಳ ನಿಬಂಧಕರು, ಶಾಸಕರಿಗೆ… ದೂರು ನೀಡಿದ್ದಾರೆ. ಊರಿನ ಪ್ರಥಮ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದ ಬಗ್ಗೆ ಪ್ರಥಮ ಬಾರಿಗೆ ಸದಸ್ಯರು ಬಹಿರಂಗವಾಗಿ ಸಿಡಿದೆದ್ದಿದ್ದು ಸರ್ಕಾರ, ಜಿಲ್ಲಾಡಳಿತ ಕ್ರಮ ಕೈಗೊಳ್ಳುವುದೋ ಅಥವಾ ಈ ಹಿಂದೆ ಮಾಡಿದಂತೆ ಪ್ರಕರಣವನ್ನು ಅಲ್ಲಿಯೇ ಮುಚ್ಚಿಹಾಕುವರೋ ಕಾದು ನೋಡಬೇಕು.

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group