spot_img
spot_img

ಬಸವಣ್ಣನವರ ವಿಚಾರಧಾರೆಗಳು ಹೊರದೇಶಕ್ಕೂ ತಲುಪಿದ್ದು ಹೆಮ್ಮೆಯ ವಿಚಾರ – ಲಿಂಗಣ್ಣ ಕಲಬುರ್ಗಿ

Must Read

- Advertisement -

ಸಿಂದಗಿ– ಬಸವಣ್ಣನವರ ವಿಚಾರ ಧಾರೆಗಳು ಭಾರತ ಅಲ್ಲದೆ ಹೊರ ರಾಷ್ಟ್ರದಲ್ಲಿ ಪಸರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ನ್ಯೂಜಿಲೆಂಡಿನ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರ್ಗಿ ಅಭಿವ್ಯಕ್ತ ಪಡಿಸಿದರು.

ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖೇನ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ವಚನಗಳಲ್ಲಿ ವೈಜ್ಞಾನಿಕ ಜ್ಞಾನವಿದೆ. ಶರಣರ ಸಂದೇಶಗಳನ್ನು ಅರ್ಥೈಸಿಕೊಳ್ಳುವದರಿಂದ ನಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬಹುದು. ನ್ಯೂಜಿಲೆಂಡನಲ್ಲಿ ಬಸವ ಸಮಿತಿಯನ್ನು ಸ್ಥಾಪಿಸಿ ಬಸವಣ್ಣನವರ ಮತ್ತು ಶರಣರ ವಿಚಾರಗಳನ್ನು ಅಲ್ಲಿಯ ಜನತೆಗೆ ನೀಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.

ಸಿಂದಗಿಯ ಎಚ್.ಜಿ. ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಅವರು ಗೋಲಗೇರಿಯ ಶ್ರೀ ಗೋಲ್ಲಾಳೇಶ್ವರ ಕುರಿತಾಗಿ ಮಾತನಾಡಿ, ಗೋಲಗೇರಿ ಗೊಲ್ಲಾಳ ಒಬ್ಬ ಮುಗ್ದ ಭಕ್ತ. ತನ್ನ ಭಕ್ತಿಯ ಮನೋಭಾವದಿಂದ ಶಿವನನ್ನು ಒಲಿಸಿಕೊಂಡು ಮಾದರಿಯಾದವನು ಅವರ ವಚನಗಳು ಕೆಲವೇ ಕೆಲವು ಲಭ್ಯವಾದರೂ ಅವುಗಳ ಸಂದೇಶಗಳ ಸಾರ ವಿಸ್ತಾರವಾಗಿದೆ ಎಂದು ತಿಳಿಸಿದರು.

- Advertisement -

ಈ ಸಂದರ್ಭದಲ್ಲಿ ಜಾನಪದ ಸಾಹಿತಿ ಡಾ.ಎಂ.ಎಂ ಪಡಶೆಟ್ಟಿ ಅವರು ತಿಂಥಿಣಿ ಮೌನೇಶ್ವರ ವಚನಗಳ ಕುರಿತಾಗಿ ಮಾತನಾಡಿ, ತಿಂಥಿಣಿ ಶ್ರೀ ಮೌನೇಶ್ವವರರು ಕೇವಲ ಒಬ್ಬ ಮಹಿಮಾಪುರುಷರಲ್ಲಿ ಅವರೊಬ್ಬ ಕಾಲಜ್ಞಾನಿಗಳು ಹಾಗೂ ವಚನಕಾರರು, ಅವರ ವಚನಗಳಲ್ಲಿ ಭಾವೈಕ್ಯತೆಯ ಸಾರವಿದೆ. ಹಿಂದೂ ಮುಸ್ಲಿಂ ಸಾಮರಸ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಿಂಥಿಣಿ ಮೌನೇಶ್ವರರು ತಮ್ಮ ಮಹಿಮೆಯಿಂದಲೆ ಎಲ್ಲರನ್ನೂ ಆಕರ್ಷಿಸಿದ್ದರು ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಡಾ.ಶರಣಬಸವ ಜೋಗೂರ ಅವರು ಮಾತನಾಡಿದರು. 

ಈ ಸಂದರ್ಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಪರವಾಗಿ ನ್ಯೂಜಿಲೆಂಡಿನ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರ್ಗಿ ಅವರಿಗೆ ಗೌರವಿಸಲಾಯಿತು. 

- Advertisement -

ವೇದಿಕೆ ಮೇಲೆ ದತ್ತಿದಾನಿಗಳಾದ ಶಿವಪ್ಪ ಗವಸಾನಿ, ಬಿ.ಎಸ್.ಹಣಮಶೆಟ್ಟಿ, ಪ್ರಾಚಾರ್ಯ ಜೆ.ಸಿ.ನಂದಿಕೋಲ ಅವರು ಇದ್ದರು.

ಕಾರ್ಯಕ್ರಮದಲ್ಲಿ ಡಾ.ಚನ್ನಪ್ಪ ಕಟ್ಟಿ, ಎಮ್.ಎಸ್.ಹೈಯಾಳಕರ, ಶಿವಾನಂದ ಕಲಬುರ್ಗಿ, ಸಂಗಪ್ಪ ಕತ್ತಿ, ಶರಣಗೌಡ ಪಾಟೀಲ, ಶಿವುಕುಮಾರ ಶಿವಶಿಂಪಿಗೇರ, ಮಹಾನಂದಾ ಬಮ್ಮಣ್ಣಿ, ಡಾ.ಸೀಮಾ ವಾರದ, ಸುಜಾತಾ ಕಿಣಗಿ, ದ್ರಾಕ್ಷಾಯಣಿ ಪಾಟೀಲ, ಜಗದೀಶ ಕಲಬುರ್ಗಿ, ಬಸಯ್ಯ ಮಠಪತಿ, ಭೀಮಾಶಂಕರ ಅರಳಗುಂಡಗಿ, ಎಸ್.ಎಮ್.ಪೂಜಾರಿ, ಪ್ರಸನ್ನ ಜೋಗೂರ, ವಿಶ್ವನಾಥ ನಂದಿಕೋಲ, ಕಲ್ಲಪ್ಪ ತಾರಾಪೂರ, ಸಿದ್ದಲಿಂಗ ಕಿಣಗಿ, ದಾನಯ್ಯ ಮಠಪತಿ, ಆರ್.ಎ.ಹಾಲಕೇರಿ, ಪ್ರಶಾಂತ ಕುಲಕರ್ಣಿ, ಸಿ.ಜಿ.ಕತ್ತಿ, ವಿದ್ಯಾ ಮೊಗಲಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group