spot_img
spot_img

ಪುರಾಣ ಪ್ರವಚನ ಆಲಿಸುವುದರಿಂದ ಮನಸು ಶುದ್ಧ – ನಾನಗೌಡ ಪಾಟೀಲ

Must Read

- Advertisement -

ಸಿಂದಗಿ: ಇಂದಿನ ಆಡಂಬರಿಕ ಜೀವನದಲ್ಲಿ ಮನೆಗಳು ದೊಡ್ಡವಾಗುತ್ತಿವೆ ಆದರೆ ಮನಸ್ಸು ಮಾತ್ರ ಸಣ್ಣದಾಗಿಸಿಕೊಂಡಿದ್ದೇವೆ. ನೀರು, ಶುದ್ಧ ಗಾಳಿಗಾಗಿ ಏನೆಲ್ಲ ಮಾರ್ಗಗಳನ್ನು ಕಂಡುಕೊಂಡಿದ್ದೇವೆ ಮಲೀನವಾದ ಮನಸ್ಸನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕಾದರೆ ಇಂತಹ ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸು ಶುದ್ಧವಾಗಿಟ್ಟುಕೊಳ್ಳಲು ಸಾಧ್ಯ ಎಂದು ನಾಗರಳ್ಳಿ ಬಸವ ಕೇಂದ್ರದ ಅಧ್ಯಕ್ಷ ನಾನಾಗೌಡ ಪಾಟೀಲ ಹೇಳಿದರು.

        ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದ ಪ್ರಥಮ ಜಾತ್ರಾ ಮಹೋತ್ಸವ ವಿಶ್ವಗುರು ಬಸವಣ್ಣನವರ ಐಕ್ಯಮಂಟಪ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸ್ವಾಮಿ ಕೂತು ಕೆಟ್ಟ, ನೀರು ನಿಂತಲ್ಲೇ ಕೆಟ್ಟಿತ್ತು ಎನ್ನುವ ನಾಡ್ನುಡಿಯಂತೆ ಸ್ವಾಮಿ ಆಗಬೇಕು ಆದರೆ ಸ್ವಾಮಿ ಮಾಡುವುದಲ್ಲ. ಸ್ವಾಮಿ ಯಾದವರು ಸಂಸಾರದಲ್ಲಿದ್ದು ಪರಮಾತ್ಮನನ್ನು ಕಾಣು ಎನ್ನುವಂತೆ ಸಂಸಾರ ರುಚಿವುಂಡು ಪರಮಾರ್ಥ ಕಾಣಬೇಕು. ನಿತ್ಯ ಪೂಜೆ ಮಾಡುವುದಲ್ಲ ಕಾಯಕದಲ್ಲೇ ಪೂಜೆಯಾಗಬೇಕು ಯಾವಾಗಲೂ ಸತ್ಯವನ್ನು ತಿಳಿಯಲು ಹೋದರೆ ಸತ್ಯ ತಿಳೀಯುತ್ತದೆ ಅದನ್ನು ಮೌಢ್ಯತನ ತುಂಬಿ ಜನರಲ್ಲಿ ಅಂಧಕಾರ ಹೆಚ್ಚುತ್ತ ಈ ಸಮಾಜದಲ್ಲಿ ಮೋಜು ಮಸ್ತಿ ಬೇಕಾಗಿದೆ ಇಂತಹ ಘಟನೆಗಳಿಂದ ಹೊರ ಬಂದು ಮಕ್ಕಳಲ್ಲಿ ಮಹಾನ್ ಶರಣರ ತತ್ವಗಳ ಸಂಸ್ಕಾರ ನೀಡಿ ಎಂದರು.

        ಪಶು ವೈದ್ಯ ಡಾ. ಪ್ರಭು ಬಿರಾದಾರ ಮಾತನಾಡಿ, ಇಂದು ಜನರಿಗೆ ಅಜ್ಞಾನ ಬೇಕಿಲ್ಲ ವಿಜ್ಞಾನ ಬೇಕಾಗಿದೆ. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ನೀರಿನಲ್ಲಿ ಬೆಂಕಿಯಿದೆ ಎಂದಿದ್ದರು ಅದು ಇಂದು ವಿಜ್ಞಾನದ ಮೂಲಕ ವಿದ್ಯುತ್ ಕಂಡು ಹಿಡಿಯಲಾಗಿದೆ. ಕಾರಣ 12ನೇ ಶತಮಾನದ ಶರಣ ಶರಣೆಯರ ಜೀವನ ದೃಷ್ಟಾಂತಗಳನ್ನು ಪರಿಚಯವಾಗಬೇಕಾದರೆ ಮಠ-ಮಾನ್ಯಗಳಲ್ಲಿ ಬಸವಣ್ಣನವರ ತತ್ವಗಳು ಪ್ರಚಾರವಾಗಬೇಕಾಗಿದೆ ಅಂದಾಗ ಮಾತ್ರ ಅಂಧಕಾರವನ್ನು ಅಳಿಸಲು ಸಾಧ್ಯ. ಲಿಂಗಾಯತ ಧರ್ಮಕ್ಕೆ ಜಾತಿಯ ಅಡ್ಡಗೋಡೆಯಿಲ್ಲ. ಯಾರು ಅಂಗದ ಮೇಲೆ ಲಿಂಗ ಧರಿಸುತ್ತಾರೋ ಅವರೇ ಲಿಂಗಾಯತರು ಅದನ್ನು ಪರಿಪೂರ್ಣವಿಲ್ಲದ ಜನರ ಕೈಯಲ್ಲಿ ಸಿಕ್ಕು ಅರೆಬರೆ ಇತಿಹಾಸವನ್ನು ಅರಿತು ಮೌಢ್ಯತೆ ಆಹ್ವಾನ ನೀಡುವಂತಾಗಿದೆ ಅದರಿಂದ ಹೊರ ಬಂದು ನಿಜ ಶರಣರ ಜೀವನಾದರ್ಶಗಳನ್ನು ತಿಳಿದು ಅವರಂತೆ ನಡೆಯಬೇಕು ಎಂದು ಸಲಹೆ ನೀಡಿದರು.

- Advertisement -

        ಸಿಂದಗಿ ರಾಷ್ಟ್ರೀಯ ಬಸವದಳದ ಮಾಜಿ ಅಧ್ಯಕ್ಷ ಗುರುಪಾದ ತಾರಾಪುರ ಮಾತನಾಡಿ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬಸವಣ್ಣನವರ ತತ್ವಗಳ ಪ್ರಚಾರವಾಗುತ್ತಿದೆ ಆದರೆ ಅವರ ಜನ್ಮಸ್ಥಳದಲ್ಲಿ ತತ್ವ ಪ್ರಚಾರದ ಕೊರತೆಯಿಂದ ಮನೆ ಮನಗಳಿಗೆ ಮುಟ್ಟುತ್ತಿಲ್ಲ ಕಾರಣ ಪ್ರವಚನ ಆಲಿಸಿದ ಶರಣ-ಶರಣೆಯರು ಪ್ರಚಾರ ಕಾರ್ಯದಲ್ಲಿ ತೊಡಗಬೇಕು. ಅಂದಾಗ ಇಂದಿಲ್ಲ ನಾಳೆ ಪ್ರತಿ ಮನೆಗಳ ಮೇಲೆ ಬಸವ ಧ್ವಜ ಹಾರುವುದು ಖಚಿತ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಸಿಂದಗಿ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ ಸ್ವಾಮಿಗಳು ಆಶಿರ್ವಚನ ನೀಡಿದರು.

       ಐಕ್ಯ ಮಂಟಪದ ಪ್ರತಿಮೆ ಸೇವೆಗೈದ ತಡವಲಗಾ ಗ್ರಾಮದ ಗುತ್ತಿಗೆದಾರ ಚಂದ್ರಶೇಖರ ರೂಗಿ ಅಧ್ಯಕ್ಷತೆ ವಹಿಸಿದ್ದರು.

- Advertisement -

         ಈ ಸಂದರ್ಭದಲ್ಲಿ ದಾರವಾಡ ಕರ್ನಾಟಕ ವಿವಿಯ ಲಲಿತಕಲಾ ಸಂಗೀತ ಉಪನ್ಯಾಸ ಡಾ. ಎಂ.ಶರಣಕುಮಾರ ಅವರಿಗೆ ಶ್ರೀಮಠದಿಂದ ಗಾನ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

        ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಶರಣಪ್ಪ ಸಣಮನಿ, ಶ್ರೀಮಂತ ಬಡಿಗೇರ, ಅರ್ಜುನ ಮಲ್ಲೇವಾಡಿ ಶಿಕ್ಷಕರು, ಕಾನಿಪ ಧ್ವನಿ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ, ಕನಿಪ ಸಂಘದ ಅದ್ಯಕ್ಷ ಆನಂದ ಶಾಬಾದಿ, ಕಾರ್ಯದರ್ಶಿ ಮಹಾಂತೇಶ ನೂಲಾನವರ, ನರಸಿಂಹ ಬಡಿಗೇರ, ಶಿವಕುಮಾರ ಶಿವಶಿಂಪಿ ಸೇರಿದಂತೆ ಹಿಕ್ಕನಗುತ್ತಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ವೇದಿಕೆ ಮೇಲಿದ್ದರು.

ಬಸವದಳದ ಸಂಗಣ್ಣ ತಳವಾರ ಶಿಕ್ಷಕರು ನಿರೂಪಿಸಿ, ವಂದಿಸಿದರು.

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group