ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಒಯ್ಯುವ ಕೆಲಸವಾಗಬೇಕು – ಸರ್ವೋತ್ತಮ ಜಾರಕಿಹೊಳಿ

Must Read

ಮೂಡಲಗಿ: ಕನ್ನಡ ನಾಡು, ನುಡಿಗಾಗಿ ಅನೇಕ ಕವಿಗಳು, ಸಂತರು, ಶರಣರು, ಮಹಾತ್ಮರು ಹುಟ್ಟಿ ಬೆಳೆದು ನಾಡಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ನೆಲದಲ್ಲಿ ನಾವು ಕನ್ನಡಿಗರಾಗಿ ಹುಟ್ಟಿದ್ದು ನಮ್ಮೆಲ್ಲರ ಸೌಭಾಗ್ಯ, ಕನ್ನಡಿಗರು ಸೌಮ್ಯ ಸ್ವಭಾವದವರಾಗಿದ್ದು ಪರ ಭಾಷೆಗಳ ಜೊತೆ ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಒಯ್ಯಲು ಕನ್ನಡ ಪರ ಸಂಘಟನೆಗಳ ಜೊತೆ ಪ್ರತಿಯೊಬ್ಬರು ಕೈಜೋಡಿಸ ಬೇಕೆಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ತಾಲೂಕಿನ ಯಾದವಾಡ ಗ್ರಾಮದಲ್ಲಿ  ಘಟ್ಟಗಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹುತಾತ್ಮ ಯೋಧ ಚಂದ್ರು ದಲಾಲ ಇವರ ವೇದಿಕೆಯಲ್ಲಿ  ಕನ್ನಡ ಸೇನೆ ಕರ್ನಾಟಕ ಯಾದವಾಡ ಘಟಕದಿಂದ ಕರ್ನಾಟಕ ರಾಜ್ಯೋತ್ಸವದ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಕರುನಾಡ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ದುಶ್ಚಟಕ್ಕೆ ಮತ್ತು ಮೊಬೈಲಗೆ ದಾಸರಾಗದೆ ಶಿಕ್ಷಣ ಮತ್ತು ಪರಿಸರ ಬೆಳೆಸಲು ಮುಂದಾಗಬೇಕು,  ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ, ವೀರರಾಣಿ ಕಿತ್ತೂರ ಚನ್ನಮ್ಮರು ಹುಟ್ಟಿದ ನಾಡು ನಮ್ಮದು. ವರ್ಷಕ್ಕೊಮ್ಮೆ ರಾಜ್ಯೋತ್ಸವ ಆಚರಿಸದೆ, ಪ್ರತಿ ದಿನವೂ ಆಚರಣೆ ಮಾಡಬೇಕು. ನಾಡು-ನುಡಿ ಪರಂಪರೆ ಮೆಲುಕು ಹಾಕಬೇಕು, ಕನ್ನಡ ಸೇನೆ ಯುವಕರು ಸಾಕಷ್ಟು ಕ್ರಿಯಾಶೀಲರಾಗಿ ಸಮಾಜಮುಖಿಯಾಗಿ ಮಾಡುತ್ತಿರುವ ಕಾರ್ಯಗಳಿಗೆ ಜಾರಕಿಹೊಳಿ ಕುಟುಂಬ ಸದಾಕಾಲ ಬೆನ್ನೆಲುಬಾಗಿ ಇರುತ್ತದೆ, ಯುವಕರು ಮುಂದೆ ಬರಬೇಕು ಮತ್ತು ದುಶ್ಚಟಕ್ಕೆ ದಾಸರಾದ ಯುವಕರನ್ನು ದುಶ್ಚಟದಿಂದ ಮುಕ್ತರಾಗಲು ಶ್ರಮಿಸಬೇಕೆಂದ ಅವರು ಕನ್ನಡ ಸೇನೆಯಿಂದ ಇನ್ನಷ್ಟು ಜನಪರ ಕಾರ್ಯ ನಡೆಯಲಿ ಎಂದರು.

ಚಲನಚಿತ್ರ ನಿರ್ಮಾಪಕ ಬಸವರಾಜ ಬೂತಾಳಿ ಮಾತನಾಡಿ, ಹರಿದು ಹಂಚಿಹೋದ  ಕನ್ನಡ ನೆಲದ  ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಪ್ರತಿಯೊಬ್ಬರು ಸ್ಮರಿಸಬೇಕು, ಸುಮಾರು ಎರಡು ಸಾವಿರ ವರ್ಷದ ಇತಿಹಾಸ ಹೊಂದಿದ ಕನ್ನಡ ಭಾಷೆ ಹಿಂದಿ ಭಾಷೆಯನ್ನು ಬಿಟ್ಟರೆ ದೇಶದಲ್ಲಿ ಹೆಚ್ಚು  ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬೇಕು ಎಂದರು.

ಗಣಿ ಉದ್ಯಮಿ ಮಲ್ಲಪ್ಪ ಚೆಕ್ಕೆನ್ನವರ ಮತ್ತು ಐಸಿಪಿಎಲ್ ಶುಗರ್ಸ ಅಧಿಕಾರಿ ಬಸವಪ್ರಭು ಹೆಬ್ಬಾಳ, ಡಾ.ರಮೇಶ ಕವಟಗೊಪ್ಪ ಮಾತನಾಡಿದರು.

 ಯಾದವಾಡ ಚೌಕಿ ಮಠದ ಶ್ರೀ ಶಿವಯೋಗಿ ದೇವರು ಮತ್ತು ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ಆಶೀರ್ವಚನ ನೀಡಿದರು.  

ರಾಜ್ಯೋತ್ಸವದ ನೆನಪಿಗಾಗಿ ಗ್ರಾಮದ ಮಹಿಳೆಯರಿಗೆ ಹೊಲಿಗೆ ಯಂತ್ರ ಮತ್ತು ಗ್ರಾಮದ ಪೌರ ಕಾರ್ಮಿಕರಿಗೆ ಕುಕ್ಕರ ಹಾಗೂ ಗಣ್ಯರಿಗೆ ಸಸಿ ನೀಡಲಾಯಿತು.

ಸಂದರ್ಭದ ವೇದಿಕೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಿಂಗಪ್ಪ ಕುರಬೇಟ, ಯಾದವಾಡ  ಗ್ರಾಪಂ ಅಧ್ಯಕ್ಷೆ ಜಯಶ್ರೀ ದಾಸರ. ಕಾಮನಕಟ್ಟಿ ಗ್ರಾ.ಪಂ ಅಧ್ಯಕ್ಷ ಸದಾಶಿವ ದುರಗಣ್ಣವರ, ಹಣಮಂತ ಮಳ್ಳಿ. ಎಂ.ಎಂ ಪಾಟೀಲ. ಸುಭಾಸ ವಂಟಗೋಡಿ, ಗಿರೀಶ ಹಳ್ಳೂರ, ಕೃಷ್ಣಗೌಡ ಪಾಟೀಲ, ಡಾ.ಸುಧೀರ ಪಾಟೀಲ, ಡಾ.ಶಿವನಗೌಡ ಪಾಟೀಲ, ರಾಜನಗೌಡ ಪಾಟೀಲ, ನಿಂಗನಗೌಡ ಪಾಟೀಲ, ಸಂಗಣ್ಣ ಕಂಠಿಕಾರ,ಹನಮಂತ ಹೊಸಮನಿ, ಗೋವಿಂದ ಉದಪುಡಿ, ಹನಮಂತ ಮೋಡಿ, ಮಲ್ಲಪ್ಪ ಕಂಕನೋಡಿ, ಲಕ್ಷ್ಮೀ ಮಾಳೇದ, ಮಂಜು ರೂಢಗಿ, ಮುತ್ತಪ್ಪ ಕುರಿ, ಶಿವಬಸು ಗಾಣಗಿ, ಈಶ್ವರ ದಲಾಲ, ಬಸು ಹಿಡಕಲ್, ಕನ್ನಡ ಸೇನೆಯ ಘಟಕದ ಅಧ್ಯಕ್ಷ ಗುರು ಬಳಿಗಾರ, ಸಿಪಿಐ ಶ್ರೀಶೈಲ ಬ್ಯಾಕೂಡ, ಪಿಎಸ್‍ಐಗಳಾದ  ಗೋವಿಂದಗೌಡ ಪಾಟೀಲ, ಹಾಲಪ್ಪ ಬಾಲದಂಡಿ ಮತ್ತು ಜನ ಪ್ರತಿನಿಧಿಗಳು ಮುಖಂಡರು ಕನ್ನಡ ಸೇನೆಯ ಪದಾಧಿಕಾರಿಗಳು ಇದ್ದರು.

ಜೀ ಕನ್ನಡ ವಾಹಿನಿಯ ಸ.ರಿ.ಗ.ಮ.ಪ ಗಾಯಕ-ಗಾಯಕಿಯರು ಹಾಗೂ ಕಾಮಿಡಿ ಕಿಲಾಡಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಶಿವುಕುಮಾರ ಗಣಾಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಜೆ.ಎನ್.ಎಸ್ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ರಾಜು ಬಳಿಗಾರ ರೈತಗೀತೆ ಪ್ರಸ್ತುತಪಡಿಸಿದರು. ಶಿವಾನಂದ ದಾಡಿಬಾಂವಿ ಸ್ವಾಗತಿಸಿದರು, ಧಾರವಾಡ ಗೌರಿಶಿ ಮಟ್ಟಿ ನಿರೂಪಿಸಿ ವಂದಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group