spot_img
spot_img

ಅದೊಂದು ಸಣ್ಣ ಸುದ್ದಿಯೂ ಆಗಲಿಲ್ಲ. ಕಳೆದ ವಾರ ಈ ಸೃಷ್ಟಿಯಲ್ಲಿ ಒಂದು ಅದ್ಭುತ ನಡೆಯಿತು

Must Read

- Advertisement -

ಸುದ್ದಿ ಆಗಬೇಕಿತ್ತು, ಆಗಲಿಲ್ಲ. ಆಗಲಿಲ್ಲ ಏಕೆಂದರೆ ಆ ವಿಷಯ ನಮಗೆ ಗೊತ್ತಿಲ್ಲ…

ಹಾಗಾಗಿ….ನವಮಾಧ್ಯಮಗಳ ಮೂಲೆಯಲ್ಲಿ ಈ ಅದ್ಭುತ ಸುದ್ದಿ ಸಿಕ್ಕಿದೆ. ಬನ್ನಿ ನೋಡೋಣ.

ಅದು ಒಂದು ಪುಟ್ಟ ಹಕ್ಕಿಯ ಪಯಣ

- Advertisement -

ಪಕ್ಷಿಗಳ ಜೀವನವೇ ವಿಸ್ಮಯ. ಅದರಲ್ಲೂ ಹಕ್ಕಿಗಳ ವಲಸೆ ಕಥೆ ಎಂದೆಂದಿಗೂ ರೋಚಕ. ಎಲ್ಲೋ ದೂರದ ಸೈಬೀರಿಯಾದಿಂದ ಹಾರಿ ಭಾರತದ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಗೂಡು ಕಟ್ಟಿ ಒಂದು ಋತು ಕಳೆಯಲು ಬರುತ್ತದೆ ಎಂದರೆ ಇದು ಮಹಾ ವಲಸೆಯ ಸಣ್ಣ ಝಲಕ್ ಎನ್ನಬಹುದು. ಎರಡು ವರ್ಷಗಳ ಹಿಂದೆ ಕೀನ್ಯಾದಿಂದ ಒಂದು ವಾರದಲ್ಲಿ 6300 ಕಿ.ಮೀ ಕ್ರಮಿಸಿ ಒನೊನ್ ಕೋಗಿಲೆ ಭಾರತಕ್ಕೆ ಬಂದಿತ್ತು. ಈಗ ಇಂಥದ್ದೇ ಸುದ್ದಿ ಆಸ್ಟ್ರೇಲಿಯಾದಿಂದ ಬಂದಿದೆ.

ಅಲಾಸ್ಕಾದಿಂದ ತಾಸ್ಮೇನಿಯಾಕ್ಕೆ ಪುಟ್ಟ ಹಕ್ಕಿಯೊಂದು ಮಹಾ ಪ್ರಯಾಣ ಸಾಧಿಸಿದೆ. ಕಳೆದ 11 ದಿನ ಹಾಗೂ 1 ಗಂಟೆ ಅವಧಿಯಲ್ಲಿ ನಿರಂತರವಾಗಿ ಪ್ರಯಾಣಿಸಿ ವಿಶ್ವ ದಾಖಲೆ ಬರೆದಿದೆ. ಸರಿ ಸುಮಾರು 13,560 ಕಿ. ಮೀ (8,435 ಮೈಲಿ) ಪ್ರಯಾಣ ಮಾಡಿದ್ದು Bar-tailed godwit ಎಂಬ ಪುಟ್ಟ ಹಕ್ಕಿ. ಇನ್ನೂ ಆಶ್ಚರ್ಯ ಏನಪ್ಪಾ ಅಂದರೆ ಈ ವಿಶ್ವದಾಖಲೆ ಪ್ರಯಾಣ ಮಾಡಿದ ಹಕ್ಕಿಗೆ ಇನ್ನೂ ಐದು ತಿಂಗಳ ಪ್ರಾಯ.

ಬಾರ್-ಟೈಲ್ಡ್ ಗೋಡ್ವಿಟ್ ಹಕ್ಕಿಗಳು ವಲಸೆಗೆ ಹೆಸರುವಾಸಿ. ಉತ್ತರಧ್ರುವ – ದಕ್ಷಿಣಧ್ರುವ ನಡುವೆ ಈ ಹಕ್ಕಿಗಳು ಆಹಾರ ವಿಹಾರಕ್ಕಾಗಿ ಹಾರಾಡುವುದುಂಟು. 

- Advertisement -

ವಿಜ್ಞಾನಿಗಳು 5ಜಿ ಉಪಗ್ರಹ ಟ್ಯಾಗ್ ಅನ್ನು ಹಕ್ಕಿಯ ಬೆನ್ನ ಹಿಂಬದಿಗೆ ಅಳವಡಿಸಿ, ಹಕ್ಕಿಯ ಪ್ರಯಾಣದ ಅಂಕಿ ಅಂಶ ಕಲೆ ಹಾಕುತ್ತಾರೆ.

ಅಕ್ಟೋಬರ್ ನಲ್ಲಿ ವಲಸೆ ಅಧ್ಯಯನಕ್ಕಾಗಿ ವಿಜ್ಞಾನಿಗಳು ಐದು ತಿಂಗಳು ಪ್ರಾಯದ 400 ಗ್ರಾಂ ತೂಕದ  ಗೋಡ್ವಿಟ್ ಹಕ್ಕಿಯೊಂದಕ್ಕೆ 5G ಸಾಟಲೈಟ್ ಟ್ಯಾಂಗಿಂಗ್ ಮಾಡಿದ್ದಾರೆ. ಆಮೇಲೆ ಅದು ಎಲ್ಲಿಗೆ ಹೋಗುತ್ತದೆ, ಏನು ಮಾಡುತ್ತದೆ ಎಂದು ಹಾರಾಟವನ್ನು ಮಾನಿಟರ್ ಮಾಡಿದ್ದಾರೆ. 

ಅಲಾಸ್ಕಾದಿಂದ ಅಕ್ಟೋಬರ್ 13 ರಂದು ಈ ಹಕ್ಕಿ ಹಾರಿದೆ. ಆಮೇಲೆ ಎಲ್ಲೂ ಇಳಿದಿಲ್ಲ. ಆಹಾರ ನೀರೂ ಏನೂ ಸೇವಿಸದೇ, ಸಮುದ್ರ ಸಾಗರಗಳ ಮೇಲೆ ಹಾರುತ್ತಾ ಹಾರುತ್ತಾ ಹನ್ನೊಂದನೇ ದಿನ ಆಸ್ಟ್ರೇಲಿಯಾದ ತಾಸ್ಮಾನಿಯಾದಲ್ಲಿ ಬಂದಿಳಿದಿದೆ. 

13,560 ಕಿಮೀ ದೂರ Nonstop ಯಾನ!

ಗಂಟೆಗೆ 51 ಕಿಮೀ ವೇಗದ ನಿರಂತರ ಪಯಣ!

ಗಾಡ್ ವಿಟ್ Limosa lapponica (ಸ್ಯಾಟಲೈಟ್ ಟ್ಯಾಗ್ ಸಂಖ್ಯೆ 234684) (ಕರ್ನಾಟಕದಲ್ಲಿ ಇದನ್ನು ಪಟ್ಟೆಬಾಲದ ಹಿನ್ನೀರಗೊರವಹಕ್ಕಿ ಎಂದು ಕರೆಯಲಾಗುತ್ತದೆ) ಮ್ಯಾರಥಾನ್ ಪ್ರಯಾಣವನ್ನು ಅಕ್ಟೋಬರ್ 13 ರಂದು ಅಲಾಸ್ಕಾದಿಂದ ಆರಂಭಿಸಿ, ಎಲ್ಲೂ ವಿಶ್ರಮಿಸದೆ ಅವಿರತವಾಗಿ 11 ದಿನಗಳು ಹಾಗೂ ಒಂದು ಗಂಟೆಗಳ ಪ್ರಯಾಣ ಸಾಧಿಸಿ, ಈಶಾನ್ಯ ತಾಸ್ಮೇನಿಯಾಕ್ಕೆ ಬಂದಿದೆ ಎಂದು ಉಪಗ್ರಹ ಅಂಕಿ ಅಂಶ ತಿಳಿಸಿದೆ.

What a Trip !!!!!!

ಯಾವ ವಿಮಾನ, 

ಯಾವ ರಾಕೆಟ್ಟು,

ಯಾವ ಜಿಪಿಎಸ್, 

ಯಾವ ಲೆಕ್ಕ???

Nature is Wild!

Just  incredible!

Fantastic!

Amazing!


ಹೇಮಂತ ಚಿನ್ನು

ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group