ಕದಿಯಬಲ್ಲರೆ ಭಾವವನ್ನು?
ಅವರಿವರ ಸಾಲುಗಳ
ಕದ್ದು ಕವನ ರಚಿಸ ಬಹುದಲ್ಲದೆ
ಕದಿಯಬಲ್ಲರೆ ಭಾವವನ್ನು?
ಕೃತಿ ಕಳ್ಳತನ ಮಾಡಿ
ವಾಗ್ಮಿ ಎನಿಸಿಕೊಳ್ಳಬಹುದು
ಜ್ಞಾನ ಕಸಿಯಬಹುದೆ ?
ಕೆರೆ ಹಳ್ಳ ನದಿ ಒತ್ತಿ
ನೀರು ಕದಿಯಬಹುದಲ್ಲದೆ
ಕಡಲ ಕದಿಯಬಹುದೆ?
ಹಿತ್ತಾಳೆ ತಿಕ್ಕಿದರೆ
ಹೊಳೆಯುವುದಲ್ಲದೆ
ಅಡವಿಟ್ಟ ಚಿನ್ನಕೆ ಪೈಪೋಟಿಯೇ?
ನವಿಲು ಕುಣಿತ ಕಂಡು
ಕೆ0ಬೂತ ಕುಣಿದೊಡೆ
ರೆಕ್ಕೆ ಕತ್ತರಿಸುವುದು ನೋಡ
ಬಸವ ಪ್ರಿಯ ಶಶಿಕಾಂತ
_______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ