spot_img
spot_img

ಜಗದೀಶ ಶೆಟ್ಟರ ಅವರು ತಮ್ಮ ಪ್ರಣಾಳಿಕೆ ಬಹಿರಂಗಪಡಿಸಬೇಕು

Must Read

- Advertisement -

ಮೂಡಲಗಿ – ಲೋಕಾಸಭಾ ಚುನಾವಣೆಯಲ್ಲಿ ಬೇರೆ ಜಿಲ್ಲೆಯವರಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಇದನ್ನೇ ದೊಡ್ಡದು ಮಾಡಿಕೊಂಡು ಚುನಾವಣಾ ವಿಷಯವನ್ನಾಗಿಸಿರುವ ಕಾಂಗ್ರೆಸ್ ಶಾಸಕಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ಪುತ್ರ ಮೃಣಾಲ್ ಪರವಾಗಿ ಪ್ರಚಾರ ಮಾಡುತ್ತ ಶೆಟ್ಟರ ಅವರು ಬೆಳಗಾವಿಯವರಲ್ಲ ಅವರಿಗೆ ಈ ಕ್ಷೇತ್ರದ ಪರಿಚಯವಿಲ್ಲ ಆದ್ದರಿಂದ ಅವರಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗುವುದಿಲ್ಲ ಎನ್ನುತ್ತಿದ್ದಾರೆ. ಮನೆಯ ಮಗನಂತಿರುವ ಮೃಣಾಲ್ ಅವರಿಗೆ ಮತ ನೀಡಲು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಹಾಗೆ ನೋಡಿದರೆ ಬೇರೆ ಕ್ಷೇತ್ರದವರು ಇನ್ನೊಂದು ಕ್ಷೇತ್ರಕ್ಕೆ ಹೋಗಿ ಸ್ಪರ್ಧೆ ಮಾಡುವುದು ಸಾಮಾನ್ಯ ವಿಷಯವೇ ಆಗಿದೆ. ತಮ್ಮದೇ ಪಕ್ಷದ ನಾಯಕರೂ ಕ್ಷೇತ್ರ ಬಿಟ್ಟು ಕ್ಷೇತ್ರಕ್ಕೆ ಜೋತುಬಿದ್ದಿರುವ ಬಗ್ಗೆ ಲಕ್ಷ್ಮೀ ಹೆಬ್ಬಾಳಕರ ಅವರು ಜಾಣ ಮೌನವಹಿಸುತ್ತಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಬೆಳಗಾವಿಯ ಸಮಗ್ರ ಅಭಿವೃದ್ಧಿ ಯ ಬಗ್ಗೆ ಅವರು ಬಂದಲ್ಲಿ ಹೋದಲ್ಲಿ ಮಾತನಾಡಬೇಕು, ಭರವಸೆ ನೀಡಬೇಕು. ಈ ಜಿಲ್ಲೆಯ ಬಗ್ಗೆ, ಕ್ಷೇತ್ರದ ಬಗ್ಗೆ ತಮಗೆ ಎಷ್ಟು ತಿಳಿವಳಿಕೆ ಇದೆಯೆಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಎಕ್ಕುಟ್ಟಿ ಹೋದಂತಾಗಿದೆ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬರದಂತೆ ನೋಡುವುದು, ಜಿಲ್ಲೆಯ ಗ್ರಾಮೀಣ ರಸ್ತೆಗಳ ಸುಧಾರಣೆ ಇವೇ ಮುಂತಾದ ಕಾರ್ಯಗಳ ಬಗ್ಗೆ ಈ ಚುನಾವಣೆಯಲ್ಲಿಯೇ ಅವರು ಆಶ್ವಾಸನೆ ನೀಡಬೇಕಾಗಿದೆ. ಬೆಳಗಾವಿ ಎಂಬುದು ತಮ್ಮ ಬೀಗರ ಜಿಲ್ಲೆಯಾದರೂ ಈ ಜಿಲ್ಲೆಯ ಬಗ್ಗೆ ಎಲ್ಲ ಗೊತ್ತಿದೆಯೆಂಬುದನ್ನು ಶೆಟ್ಟರ ಅವರು ತೋರಿಸಿಕೊಡಬೇಕಾಗಿದೆ. ಇನ್ನೊಂದು ವಿಷಯವೆಂದರೆ ಶೆಟ್ಟರ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಸಾಮಾನ್ಯವಾಗಿ ರಾಜ್ಯದ ಎಲ್ಲಾ ಕ್ಷೇತ್ರಗಳ ಪರಿಚಯ ಇದ್ದೇ ಇರುತ್ತದೆಯೆಂಬುದು ಸಾಮಾನ್ಯ ನಂಬಿಕೆ ಅದನ್ನು ಶೆಟ್ಟರ ಅವರು ದೃಢಪಡಿಸಬೇಕಾಗಿದೆ.

ಈ ಪ್ರಶ್ನೆ ಈಗೇಕೆ ಬಂದಿತೆಂದರೆ, ಚುನಾವಣಾ ಪ್ರಚಾರದಲ್ಲಿ ಹೆಜ್ಜೆ ಹೆಜ್ಜೆಗೂ ಲಕ್ಷ್ಮಿ ಹೆಬ್ಬಾಳಕರ ಅವರು ಶೆಟ್ಟರ ಅವರನ್ನು ಹೊರಗಿನವರು ಎಂಬಂತೆಯೇ ಬಿಂಬಿಸುತ್ತಿದ್ದಾರೆ. ಹಾಗೆ ನೋಡಿದರೆ ಬೆಳಗಾವಿ ಮೊದಲು ಮಹಾರಾಷ್ಟ್ರದ ಭಾಗವಾಗಿತ್ತು ಎಂಬ ಅಣಿಮುತ್ತು ಉದುರಿಸಿದವರು ಅವರು. ಜಿಲ್ಲೆಯ ಗಡಿ ಭಾಗದ ಅಥಣಿಯ ಬಗ್ಗೆ ತಮಗೇನು ಗೊತ್ತಿದೆಯೆಂಬುದನ್ನು ಇದೇ ಜಿಲ್ಲೆಯವರಾದ ಹೆಬ್ಬಾಳಕರ ಅವರು ಸ್ಪಷ್ಟಪಡಿಸಬೇಕು. ಕ್ಷೇತ್ರವೆಂದರೆ ಕೇವಲ ಬೆಳಗಾವಿ, ಖಾನಾಪೂರ ಮಾತ್ರವಲ್ಲ ದೂರದ ಅಥಣಿಯತನಕ ಇದೆ ಅಲ್ಲಿ ಬರಗಾಲ, ಮಹಾಪೂರಗಳೂ ಕಾಡಿ ಜನರ ಬದುಕನ್ನು ಹೈರಾಣಾಗಿಸುತ್ತವೆ. ನಮಗೆ ತಿಳಿದಂತೆ ಈ ಹಿಂದೆ ಅಂಗಡಿಯವರು ಸಂಸದರಾಗಿದ್ದಾಗ ವಿರೋಧ ಪಕ್ಷದವರಾಗಿ ಲಕ್ಷ್ಮೀ ಹೆಬ್ಬಾಳಕರ ಅವರು ಜಿಲ್ಲೆಯಲ್ಲಿ ಈ ಕೆಲಸ ಆಗಬೇಕು, ಆ ಅಭಿವೃದ್ಧಿ ಆಗಬೇಕು ಎಂದು ಸಂಸದರನ್ನು ಎಚ್ಚರಿಸಿದ್ದು ಇಲ್ಲವೇ ಇಲ್ಲ ಎನ್ನಬೇಕು.

- Advertisement -

ಅದೇನೇ ಇರಲಿ ಚುನಾವಣೆ ಬಂದಾಗ ಅಭ್ಯರ್ಥಿಗಳಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಸಾಮಾನ್ಯವಾಗಿರುತ್ತದೆ. ಆದರೆ ಆರೋಪಕ್ಕೆ ಪ್ರತಿಯಾಗಿ ತಮ್ಮ ಬದ್ಧತೆಯನ್ನು ಪ್ರಕಟಪಡಿಸುವ ಉತ್ತರದಾಯಿತ್ವ ಎಲ್ಲ ಅಭ್ಯರ್ಥಿಗಳಲ್ಲಿ ಇರುತ್ತದೆ. ಈಗ ಹೊರ ಕ್ಷೇತ್ರದವರು ಎಂಬ ಟೀಕೆ ಎದುರಿಸುತ್ತಿರುವ ಅಭ್ಯರ್ಥಿಗಳು ತಾವು ಸ್ಪರ್ಧಿಸಿರುವ ಕ್ಷೇತ್ರದ ಬಗ್ಗೆ ಹೊಂದಿರುವ ಅಭಿವೃದ್ಧಿ ದೃಷ್ಟಿಯನ್ನು ಪ್ರಸ್ತುತಪಡಿಸುವುದು, ಆಯ್ಕೆಯಾದರೆ ಆ ನಿಟ್ಟಿನಲ್ಲಿ ಅಭಿವೃದ್ಧಿ ಮಾಡುವುದೇ ಆಯಾ ಕ್ಷೇತ್ರದ ಮತದಾರರಿಗೆ ಸಲ್ಲಿಸುವ ನ್ಯಾಯವಾಗಿದೆ.

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group