ಮೂಡಲಗಿ: ಹಬ್ಬ ಹರಿದಿನ ನಿಮಿತ್ತ ಬಡವ, ದಲಿತರ, ದೀನರಸೇವೆ ಮಾಡೋಣ, ಜಾತ್ರೆಗಳು ದೈವಾರಾಧನೆಗೆ ಸೀಮಿತವಾಗದೇ ಸಮಾಜ ಮುಖಿಯಾಗಲಿ ಎಂದು ಮುರಳಿ ವಜ್ಜರಮಟ್ಟಿ ಹೇಳಿದರು.
ಅವರು ತಾಲೂಕಿನ ಫುಲಗಡ್ಡಿಯ ಗ್ರಾಮದಲ್ಲಿ ಶ್ರೀಗುರು ಚಕ್ರವರ್ತಿ ಸದಾಶಿವ ಶಿವಯೋಗಿಯವರ, ಶ್ರೀ ಚಂದ್ರಮ್ಮ ದೇವಿಯ ಹಾಗೂ ಶ್ರೀ ಶೆಟ್ಟೆಮ್ಮದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಆದಿಕವಿ ವಾಲ್ಮೀಕಿ ಸಭಾಂಗಣದಲ್ಲಿ ಶನಿವಾರ ಜರುಗಿದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಾಹಿತಿ ಹಾಗೂ ಕಲಾವಿದ ಜಯಾನಂದ ಮಾದರ ಸ್ವಾಗತಿಸಿ, ನಿರೂಪಿಸಿದರು. ಬಡವರ ಸೇವೆಯೇ ಈಶ ಸೇವೆ, ಗ್ರಾಮೀಣ ಭಾಗದ ಜನತೆ ಸಾಮಾಜಿಕವಾಗಿ ಜಾಗೃತಗೊಳ್ಳಬೇಕು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಸಮಾಜದಲ್ಲಿ ಸುಧಾರಣೆ ಕಾಣಲು ಸಾಧ್ಯ ಎಂದರು.
ಮುಸಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚನ್ನಪ್ಪ ಕುಂಬಾರ ಮಾತನಾಡಿ, ಆರೋಗ್ಯದ ಕುರಿತು ನಿರ್ಲಕ್ಷ್ಯ ಸಲ್ಲದು, ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಕೋಚರಿಯ ಶ್ರೀ ಕಲ್ಮೇಶ್ವರ ಸ್ವಾಮೀಜಿ, ಅರಬಾವಿಯ ಯಲ್ಲಪ್ಪ ಅಜ್ಜನವರು ಮತ್ತು ಅಧ್ಯಕ್ಷತೆ ವಹಿಸಿದ್ದ ಮುಖ್ಖೋಪಾಧ್ಯಾಯ ಎಸ್.ಎಮ್.ನಾಯಿಕ ಮಾತನಾಡಿದರು.
ಡಾ.ಶ್ವೇತಾ ದೊಡ್ಡಮನಿ, ಡಾ.ಅಶ್ವಿನಿ ಮಲ್ಲಗೆಪ್ಪಗೋಳ, ಮಲ್ಲವ್ವ ನಾಯಿಕ, ಡಿ.ಕೆ.ಪತ್ತಾರ. ರಾಮಚಂದ್ರ ಸಣ್ಣಕ್ಕಿ, ಶಾಂತಾ ಕಳ್ಳಿಮನಿ, ಗೀತಾ ಕಮತರ, ಮಂಜು ಜೋಗಿ, ಚಂದ್ರಕಾಂತ ಕದಮ್ಮ, ಸಂಜು ಕಬ್ಬೂರ, ಬಸವರಾಜ ನಾವಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ಜಾತ್ರಾಮಹೋತ್ಸವ ಸಮಿತಿಯವರು ಭಾಗವಹಿಸಿದ್ದರು.