ಉತ್ತಮ ಸಂಯಮ ಧರ್ಮ
ಪಂಚೇಂದ್ರಿಯಗಳ ದಮನವೇ ಸಂಯಮದ ಮರ್ಮ. ಅದು ಇಹ ಪರಲೋಕಕ್ಕೆ ಹಿತಕಾರಿ ಯಾದುದಾಗಿದೆ. ಪಾಪ ಎಂಬ ಬೀಜದ ವಿನಾಶ, ಜ್ಞಾನ ಬಲದ ಬಂಧನ, ಸಂಸಾರ ಸಾಗರ ಪಾರುಮಾಡುವಂತದು. ಉತ್ತಮ ಸಂಯಮ ಧರ್ಮವು ದುರ್ಗತಿ ನಿವಾರಿಸಿ ಸಂಪತ್ತಿ ವೃದ್ದಿಸುವಂಥದಾಗಿದೆ. ಪರಮಾರ್ಥ ಪದವಿ ಪಡೆಯಲು ಸಾಧಕ ಮಂತ್ರ ಇದಾಗಿದೆ.
ಪಂಚೇಂದ್ರಿಯಗಳು ಸಂಸಾರ ದುಖವನ್ನುಂಟು ಮಾಡುತ್ತಿವೆ. ಆದ್ದರಿಂದ ಮುನಿವರ್ಯರು ಸಂಯಮ ವಿಕಲ್ಪ ನಾಶಮಾಡಿಕೊಂಡು ಮನಸ್ಸು ಸ್ಥಿರವಾಗಿ ಲೋಭ ನಾಶವಾಗುವದು. ಸನ್ಯಾಸ ಸ್ವೀಕರಿಸುವವರು ಸಂಯಮದಿಂದ ಪಂಚಾಣುವ್ರತಗಳ ಪಾಲನೆ ಸಾಧ್ಯವಾಗಿ ಮೋಕ್ಷ ಲಭಿಸುವದು .
ಉತ್ತಮ ಸಂಯಮವು ಜೀವನ ರಕ್ಷಣೆಗೆ ಸಾಧನ ದೇಹವನ್ನು ,ಮನಸ್ಸನ್ನು ನಿಗ್ರಹಿಸಿಕೊಂಡು ಸಂಯಮ ಸಾಧಿಸಬೇಕು. ಇದರಿಂದ ಮಾತ್ರ ಮೋಕ್ಷದ ದಾರಿ.
ಆತ್ಮಕ್ಕೆ ಹಿತಕರವಾದ ನಿರ್ಮಲ ಸಂಯಮ
ಜೀವ ದಯೆ ಕ್ರೋಧ ನಿಗ್ರಹದ ಕಷಾಯ
ಜಂಬುಕುಮಾರ ವಿವಾಹವಾದ ವದು ತೊರೆದ
ಸಂಯಮದಿಂದ ಮುಕ್ತಿ ಹಿಡಿದ .
ಓಮ್ ಹೃಂ ಸಂಯಮ ಧರ್ಮಂಗಾಯ ನಮ್ಹ..ಜಲ ಗಂದಾದಿ ಅರ್ಘ್ಯ್ ನೀರುಮಪಾತಿಸ್ವಾಹಾ.
ಲೇಖಕಿ: ಲಲಿತಾ ಮ ಕ್ಯಾಸನ್ನವರ
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ.