ಈದ್- ಮಿಲಾದ್ ; ಮುಸ್ಲಿಂ ಬಾಂಧವರಿಗೆ ಶುಭ ಕೋರಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

ಗೋಕಾಕ- ನಾಡಿನ ಮುಸ್ಲಿಂ ಜನತೆಗೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಈದ್- ಮಿಲಾದ್ ಹಬ್ಬದ ಶುಭ ಕೋರಿದ್ದಾರೆ.

ಈ ದಿನ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆಯನ್ನು ಮೂಡಲು ಪ್ರವಾದಿಯವರು ನೀಡಿರುವ ಸಂದೇಶವನ್ನು ಪಾಲಿಸಿ ಅದರಂತೆ ಬದುಕಲು ಪ್ರಯತ್ನಿಸುವಂತೆ ಸಮಾಜದ ಬಾಂಧವರಿಗೆ ಮನವಿ ಮಾಡಿಕೊಂಡಿರುವ ಅವರು, ಮುಸ್ಲಿಂ ಸಮಾಜದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಬದ್ಧವಿದೆ. ಮುಸ್ಲಿಂ ಸಮುದಾಯದ ಉನ್ನತಿ, ಪ್ರಗತಿ ಮತ್ತು ಅವರ ಆರ್ಥಿಕ ಅಭ್ಯುದಯಕ್ಕಾಗಿ ನಮ್ಮ ಕೇಂದ್ರ ಸರ್ಕಾರ ಹಲವು ಮಹತ್ತರ
ಕಾರ್ಯಕ್ರಮಗಳನ್ನು ರೂಪಿಸಿದೆ. ಸಾಮರಸ್ಯ ಬದುಕನ್ನು ಅನುಸರಿಸುವ ಮೂಲಕ ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಬದುಕುವಂತೆಯೂ ಅವರು ಮುಸ್ಲಿಂ ಸಮಾಜದವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈದ್ ಮಿಲಾದ ಹಬ್ಬವು ಮುಸ್ಲಿಂ ಬಾಂಧವರಿಗೆ ಎಲ್ಲ ರೀತಿಯಿಂದಲೂ ಒಳ್ಳೆಯದು ಆಗಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಶಿಸಿದ್ದಾರೆ.

1 COMMENT

  1. ಈ ಯಪ್ಪ ಯಾವ ಹಿಂದೂ ಹಬ್ಬಗಳಿಗೆ ಶುಭಾಷಯಗಳು ಹೇಳಿದ್ದಾರೆ??

Comments are closed.

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...

More Articles Like This

error: Content is protected !!
Join WhatsApp Group