ಜಿಗಜಿಣಗಿ ಸಾಧನೆ ಸೊನ್ನೆ – ಮೊಹಮ್ಮದ ಪಟೇಲ್

0
131

ಸಿಂದಗಿ: 10 ವರ್ಷಗಳಿಂದ ಅಧಿಕಾರದಲ್ಲಿದ್ದ ಲೋಕಸಭಾ ಸದಸ್ಯ ರಮೇಶ್ ಜಿಗಜಿಣಗಿ ರವರ ಸಾಧನೆ ಜಿಲ್ಲೆಗೆ ಸೊನ್ನೆಯಾಗಿದೆ. ತಮ್ಮ ಪ್ರಚಾರದ ವೇದಿಕೆಗಳಲ್ಲಿ ಸುಳ್ಳು ಹೇಳಿ ಜನರಿಗೆ ದಾರಿ ತಪ್ಪಿಸುತ್ತಿದ್ದಾರೆ. ಎಂದು ರಾಜ್ಯ ಕಾಂಗ್ರೆಸ್ ಪ್ರದೇಶ ಸಮಿತಿಯ ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಪಟೇಲ್ ಬಿರಾದಾರ್ ಹೇಳಿದರು.

ಈ ಕುರಿತು ಪತ್ರಿಕಾ ವರದಿ ನೀಡಿರುವ ಅವರು 25 ಸಾವಿರ ಕೋಟಿ ಅನುದಾನ ದುರ್ಬಳಕೆಯಾಗಿದೆ. ಎಂಬ ಹೇಳಿಕೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಕೋಚಬಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ರವರು ಹೇಳಿರುವುದು ಖಂಡನೀಯ. ದಾಖಲೆಗಳು ಬಿಡುಗಡೆಗೊಳಿಸಲಿ ಸುಖಾಸುಮ್ಮನೆ ಟೀಕೆ ಮಾಡುವುದು ಸರಿಯಲ್ಲ. ಚುನಾವಣಾ ಸಂದರ್ಭದಲ್ಲಿ ಮಾತ್ರ ನಿಮಗೆ ದಲಿತರು, ಹಿಂದುಳಿದವರು, ಲಂಬಾಣಿ, ಜನಾಂಗದವರು ಅಲ್ಪಸಂಖ್ಯಾತರು, ನೆನಪಿಗೆ ಬರುವವರು ಅವರ ಮೀಸಲಾತಿಗೆ ಬಿಜೆಪಿ ಸರ್ಕಾರ ಕತ್ತರಿ ಹಾಕಿದಾಗ ನಿಮ್ಮ ಬಾಯಿಗೆ ಏನಾಗಿತ್ತು? ರಸ್ತೆ ಡಾಂಬರೀಕರಣ, ಚಕ್ಕಡಿ ರಸ್ತೆಗಳ, ಹೆಸರಿನಲ್ಲಿ ಕೋಟ್ಯಾನು ಕೋಟಿ, ಬಿಜೆಪಿ ಸರ್ಕಾರ ಇರುವಾಗ ಲೂಟಿ ಹೊಡೆದಿರುವ ನಿಮ್ಮ ಬಾಯಿಯಲ್ಲಿ ಭ್ರಷ್ಠಾಚಾರದ ಮಾತು? ಕೇಂದ್ರ ಸರ್ಕಾರದ ಜೆಜೆ ಎಂ ಕೆಲಸ ಸಂಪೂರ್ಣ ಕಳಪೆ ಇದೆ. ನೋಟ್ ಬ್ಯಾನ್ ಮಾಡಿ 103, ಎನ್ ಆರ್ ಸಿ, ಸಿ ಎ ಎ ,ಜಾರಿ ಮಾಡಿ ಸು.70-80, ರೈತ ವಿರೋಧಿ ಕಾನೂನು ರೂಪಿಸಿ ನೂರಾರು ರೈತರ ಪ್ರಾಣವನ್ನುಂಗಿದ ಬಿಜೆಪಿ ಸರ್ಕಾರಕ್ಕೆ ಮೋದಿ ಹೆಸರಿನಲ್ಲಿ ಮತ ಕೇಳಲು ಯಾವ ನೈತಿಕತೆ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಸ್ಜಿದ್ ಮಂದಿರ ಎಂದು ದೇಶದಲ್ಲಿ ಅಶಾಂತಿಯನ್ನು ಹುಟ್ಟು ಹಾಕಿ, ಚೀನಾದವರು ಗಡಿಯನ್ನು ನುಸುಳಿ ನುಗ್ಗಿ ಬಂದರು ಜನರಿಗೆ ದಾರಿ ತಪ್ಪಿಸಿ, ಕರೋನಾ ಮಹಾಮಾರಿಯಲ್ಲಿ ಸ್ವದೇಶದಲ್ಲಿ ಜನ ಸತ್ತರು ವಿದೇಶಕ್ಕೆ ಆಕ್ಸಿಜನ್ ರವಾನಿಸಿ 80 ರೂಪಾಯಿಯ ಮಾಸ್ಕ್ 480 ಗಳಿಗೆ ಜನರ ತೆರಿಗೆ ಹಣದಲ್ಲಿ ವಂಚಿಸಿದ ಬಿಜೆಪಿಗೆ ಯಾವ ನೈತಿಕತೆ ಜನರ ಬಳಿ ಮತ ಕೇಳಲು ಇದೆ? ರಸ್ತೆಗಳ ಮೇಲೆ ಟೋಲ್ ಗಳನ್ನು ನಿರ್ಮಿಸಿ ಖಾಸಗಿ ಅವರಿಂದ ಮನಸ್ಸಿಗೆ ಬಂದಂತೆ ಹಣ ವಸೂಲಿ ಮಾಡಿ, ಅತ್ಯುತ್ತಮ ರಸ್ತೆ ನಿರ್ಮಾಣದಲ್ಲಿ ನಿರ್ಲಕ್ಷ ತೋರಿದ ಕೇಂದ್ರ ಸರ್ಕಾರಕ್ಕೆ ರಸ್ತೆ ನಿರ್ಮಿಸಿದ್ದೇವೆ ಎಂದು ಹೇಳಲು ಯಾವ ನೈತಿಕತೆ ಇದೆ? ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಹಂಚಿ 400 ಗ್ಯಾಸ್ ಬೆಲೆ 1200 ಮಾಡಿರುವುದು ಖಂಡನೀಯ. ರಾಜ್ಯದಿಂದ ತೆರಿಗೆಯನ್ನು ಪಡೆದು ರಾಜ್ಯದ ರೈತರಿಗೆ ಬೆಳೆ ಪರಿಹಾರ ನೀಡಿಲ್ಲ. 10 ವರ್ಷದಲ್ಲಿ ಮೋದಿ ಮಾಡಿರುವ ಸಾಧನೆಗಳ ಆದರೂ ಏನು? ಎಂಬುವುದು ಜನರ ಮುಂದೆ ಬಿಚ್ಚಿಡಿ? ಇಲ್ಲ ಜನರ ಬಳಿ ಮತ ಹೋಗುವುದನ್ನು ಬಿಟ್ಟು ಮನೆಯಲ್ಲಿ ಕೂತುಕೊಳ್ಳಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೊರಟಿದೆ ಮುಂದೆಯೂ ಕೂಡ ಯಶಸ್ವಿಯಾಗಿ ಯೋಜನೆಗಳನ್ನು ಜನರಿಗೆ ತಲುಪಿಸುತ್ತದೆ. ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಸದಸ್ಯ ಜನರಿಗೆ ಯೋಜನೆಗಳನ್ನು ಯಶಸ್ವಿಯಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ತಾವೆಲ್ಲರೂ ಮತವನ್ನು ಚಲಾಯಿಸಬೇಕೆಂದು ವಿನಂತಿಸಿದರು.