spot_img
spot_img

ಪುರಾಣ ಕಥೆಗಳ ತೌಲನಿಕ ಅಧ್ಯಯನದ ಕೃತಿ ವಿಮರ್ಶೆ, ಕವಿಗೋಷ್ಠಿ, ರಂಜಿಸಿದ ಹಾಡುಗಳು

Must Read

- Advertisement -

ಹಾಸನ ನಗರ ಸಂಗಮೇಶ್ವರ ಬಡಾವಣೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಮನೆ ಮನೆ ಕವಿಗೋಷ್ಠಿ 316 ತಿಂಗಳ ಕಾರ್ಯಕ್ರಮ ಅರಕಲಗೊಡು ತಾ. ಚುಸಾಪ ಅಧ್ಯಕ್ಷ  ಉಡುವೇರೆ ಡಿ. ಸುಂದರೇಶ್ ಇವರ ಪ್ರಾಯೋಜನೆಯಲ್ಲಿ ನಡೆಯಿತು.

ಕವಿ ಎನ್.ಎಲ್.ಚನ್ನೇಗೌಡರ ‘ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತ್ತಿದೆ’ ಪುಸ್ತಕ ಕುರಿತ್ತಾಗಿ ಲೇಖಕ ಸುಂದರೇಶ್ ಮಾತನಾಡಿ, ಇದೊಂದು ತೌಲನಿಕ ಕೃತಿ ಇದರಲ್ಲಿ ಶ್ರೀರಾಮ ಧರ್ಮರಾಯ ಹರಿಶ್ಚಂದ್ರ ನಳಮಹಾರಾಜರು ರಾಜ್ಯ ಬಿಡುವ ಕಥಾ ಸಂದರ್ಭ ಬೇರೆ ಬೇರೆ ಕಾಲಘಟ್ಟವಾದರೂ ಸಾಹಿತ್ಯಾತ್ಮಕವಾಗಿ ಪರಸ್ಪರ ಹೋಲಿಕೆ ಹೊಂದಾಣಿಕೆ ಇರುವುದನ್ನು ತೌಲನಿಕವಾಗಿ ದಾಖಲಿಸಿ ಮಂಥರೆ ಯಾರು, ಗರ್ಭಿಣಿ ಸೀತೆಯನ್ನು ಶ್ರೀರಾಮ ಕಾಡಿಗೇಕೆ ಕಳಿಸಿದ, ದ್ರೌಪದಿಗೆ ಐದು ಜನ ಗಂಡಂದಿರೇಕೆ ಶ್ರೀ ರಾಮ ಅರ್ಜುನರು ಧನುಸ್ಸು ಎತ್ತಿದ ಈ ಧನಸ್ಸುಗಳು ಎಲ್ಲಿಯವು? ಎಂಬ ಪ್ರಶ್ನೆಗಳನ್ನು ಎತ್ತಿ ನಳ ದಮಯಯಂತಿ ಹರಿಶ್ಚಂದ್ರ ಕಥೆಯ ಬಗ್ಗೆ ಹೊಸ  ಹೊಳವು ಈ ಕೃತಿಯಲ್ಲಿದೆ ಎಂದರು.

- Advertisement -

ಕಾರ್ಯಕ್ರಮದಲ್ಲಿ ಶಿಲ್ಪಾ ಮ್ಯಾಗೇರಿ, ದಾಕ್ಷಾಯಿಣಿ ಮುರುಗನ್, ಪದ್ಮಾವತಿ ವೆಂಕಟೇಶ್, ಮಲ್ಲೇಶ್ ಜಿ., ಹೇಮರಾಣಿ ಕೆ.ಪಿ. ಲಕ್ಷ್ಮೀದೇವಿ ದಾಸಪ್ಪ, ದಿಬ್ಬೂರು ರಮೇಶ್, ಪರಮೇಶ್ ಮಡಬಲು, ಮಾಳೇಟಿರ ಸೀತಮ್ಮ ವಿವೇಕ್, ಗೊರೂರು ಅನಂತರಾಜು, ಎನ್.ಎಲ್.ಚನ್ನೇಗೌಡ. ಶ್ವೇತ ಮೋಹನ್ ಸ್ವರಚಿತ ಕವಿತೆ ವಾಚಿಸಿದರು. 

ದುದ್ಧ ಯೋಗೇಂದ್ರರ ಸಿದ್ಧಾರೂಢರ ತತ್ವಪದ, ಗಾಯಕಿ ಧನಲಕ್ಷ್ಮಿ ಅವರು ಹಾಡಿದ ಗೊರೂರು ಅನಂತರಾಜು ರಚಿತ ರೈತ ಗೀತೆ ಸುಗ್ಗಿ ಹಾಡು, ನಿ.ಉಪನ್ಯಾಸಕ ಹೆಚ್.ವಿ.ಬಾಲಕೃಷ್ಣರು ಹಾಡಿದ ಭಕ್ತಿಗೀತೆ, ದಿಬ್ಬೂರು ರಮೇಶ್‍ರ ಬಾವಗೀತೆ, ಚಂದ್ರಕಾಂತ ಪಡೇಸೂರ್, ರಾಣಿ ಸಿ. ರಚಿಸಿ ಹಾಡಿದ ಗೀತೆಗಳು, ಶ್ವೇತ ಮೋಹನ್, ಪ್ರಭಾ ಮಂಜುನಾಥ್, ಎ.ಜಿ.ಲಕ್ಷ್ಮಿ, ರಾಣಿ, ಹೇಮಾ, ಜ್ಯೋತಿ ಎಂ. ತೀರ್ಥವತಿ, ರೂಪ, ರೇಖಾ ಎಸ್. ಅನ್ನಪೂರ್ಣ ತಂಡ ಸಮೂಹ ಜನಪದ ಗೀತೆಗಳು,  ಬಿ.ವಿ.ಜಯಶ್ರೀ ಬಾಲಕೃಷ್ಣ, ಅನಿತಾ ಹೆಚ್.ಆರ್. ಹೇಮಲತಾ, ಲಕ್ಷ್ಮಮ್ಮ, ಯಶೋದಮ್ಮ ತಂಡ ಸಮೂಹ ಜನಪದ ಗೀತೆ ರಂಜಿಸಿದವು. ಈ ವರ್ಷ ಗಣರಾಜ್ಯೋತ್ಸವ ಪ್ರಶಸ್ತಿ ಪಡೆದ ಲೇಖಕಿ ವನಜಾಕ್ಷಿ, ನಟಿ ರಾಣಿ ಸಿ. ಗದಗದಿಂದ ಆಗಮಿಸಿದ್ದ ಕವಯಿತ್ರಿ ಶಿಲ್ಪಾ ಮ್ಯಾಗೇರಿ, ಕೃತಿ ವಿಮರ್ಶಿಸಿದ ಸುಂದರೇಶ್ ಡಿ.ಉಡುವೇರೆ ಮತ್ತು ಸಾಹಿತಿ ಗೊರೂರು ಅನಂತರಾಜು ಅವರನ್ನು ನಿವೃತ್ತ ತಹಸೀಲ್ದಾರ್ ಎ.ವಿ.ರುದ್ರಪ್ಪಾಜಿರಾವ್ ಸನ್ಮಾನಿಸಿದರು. ಎನ್.ಕೆ.ಶ್ರೀನಿವಾಸಶೆಟ್ಟಿ, ದಾಸಪ್ಪ, ಕಸ್ತೂರಿಬಾಯಿ, ವೀರಭದ್ರಪ್ಪ ಮ್ಯಾಗೇರಿ, ಯಾಕೂಬ್, ಡಿ.ಚನ್ನಯ್ಯಶೆಟ್ಟಿ ಮೊದಲಾದವರು ಇದ್ದರು.

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group