spot_img
spot_img

ನ.೨೦ರಂದು ಪತ್ರಕರ್ತ, ಲೇಖಕ: ಹನುಮಂತ. ಮ.ದೇಶಕುಲಕರ್ಣಿ ಅವರ ಶ್ರೀಕಾರ ಕೃತಿ  ಬಿಡುಗಡೆ

Must Read

- Advertisement -

ಪತ್ರಕರ್ತ, ಲೇಖಕ ಹನುಮಂತ. ಮ. ದೇಶಕುಲಕರ್ಣಿ ಇವರ ಮೂರನೇಯ ಕೃತಿ ಶ್ರೀಕಾರ (ಸುವಿಚಾರಗಳ ಸಾಕ್ಷಾತ್ಕಾರ)  ದಿ. 20 ರಂದು ಬೆ.11-30ಕ್ಕೆ  ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮಾತಿನಮನೆ ಸಭಾಂಗಣದಲ್ಲಿ ನಡೆಯುವ ಸಮಾನ ಚಿಂತಕರ ಸಮ್ಮೇಳನದಲ್ಲಿ ಲೋಕಾರ್ಪಣೆಯಾಗಲಿದೆ.

ಲೇಖಕ ರೋಹಿತ್ ಚಕ್ರತೀರ್ಥ ಬಿಡುಗಡೆ ಮಾಡಲಿದ್ದಾರೆ. ಸಂಸ್ಕೃತಿ ಪ್ರತಿಪಾದಕ  ವಿದ್ವಾನ್ ನವೀನಶಾಸ್ತ್ರೀ ಪುರಾಣಿಕ ಅವರಿಂದ ಪುಸ್ತಕಾವಲೋಕನ.

ಲೇಖಕ ಹನುಮಂತ. ಮ. ದೇಶಕುಲಕರ್ಣಿ , ಸಹನಾ ಪ್ರಕಾಶನದ  ಆರ್. ಶ್ರೀನಿವಾಸ ಉಪಸ್ಥಿತರಿರಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತಿನಮನೆ ಸಂಸ್ಥಾಪಕ ರಾ.ಸು. ವೆಂಕಟೇಶ ವಹಿಸಲಿದ್ದಾರೆ.

- Advertisement -

ಲೇಖಕರ ಪರಿಚಯ: 

ಒಬ್ಬ ಪತ್ರಕರ್ತನಾಗಿ, ಲೇಖಕನಾಗಿ, ಸಂಘಟಕನಾಗಿ , ಕವಿಯಾಗಿ, ವ್ಯಂಗ್ಯ ಚಿತ್ರಕಾರನಾಗಿ ಹೀಗೆ ವಿವಿಧ ಪ್ರಕಾರಗಳಲ್ಲಿ ಹೆಸರು ಮಾಡಿದ ಹನುಮಂತ.ಮ. ದೇಶಕುಲಕರ್ಣಿ ಅವರು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗುತ್ತಿದ್ದು ಅವುಗಳಲ್ಲಿ ಸಾಮಾಜಿಕ, ಧಾರ್ಮಿಕ , ಸಾಂಸ್ಕೃತಿಕ, ಶೈಕ್ಷಣಿಕ ಮುಂತಾದ ವಿಷಯಗಳು ತುಂಬಿರುತ್ತವೆ. ಇವರ ಪ್ರಬುದ್ಧ ಲೇಖನಗಳು ನಾಡಿನ ಹೆಸರಾಂತ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕದಲ್ಲಿ, ಮಾಸ ಪತ್ರಿಕೆಯಲ್ಲಿ 4,000ಕ್ಕೂ ಮಿಕ್ಕಿ ಲೇಖನಗಳು ಪ್ರಕಟವಾಗಿವೆ.

ಚಿಕ್ಕ ವಯಸ್ಸಿನಲ್ಲೇ ವಿವಿಧ ಪತ್ರಿಕೆ ಹಾಗೂ ಮ್ಯಾಗಜೀನ್ ಗಳಿಗೆ ಅಂಕಣಕಾರರಾಗಿಯೂ ತಮ್ಮ ಬರವಣಿಗೆಯ ಗಟ್ಟಿತನದ ಮೂಲಕ ನಾಡಿನ ಜನ ಮೆಚ್ಚುವಂತೆ ಮಾಡಿದ್ದಾರೆ.

- Advertisement -

ಸಿಗುವ ಅಲ್ಪ ಸಮಯದಲ್ಲಿಯೇ ಸಂಘಟನೆ ಮಾಡಿಕೊಂಡು ಸಾಹಿತ್ಯಾಸಕ್ತರನ್ನು ಒಗ್ಗೂಡಿಸುವ ಇವರು ಮಹಾಮಾರಿ ಕೊರಾನಾ ಜಗತ್ತನ್ನು ಆವರಿಸಿದಾಗ ಇಡೀ ದೇಶವೇ ಲಾಕ್ ಡೌನ್ ಆದಾಗ ಎಲ್ಲರಿಗೂ ಓದಲು ಅನುಕೂಲವಾಗಲೆಂದು ಇ- ಬುಕ್ ಪರಿಕಲ್ಪನೆ ಹುಟ್ಟು ಹಾಕಿ ವಾಟ್ಸಾಪ್ ಮೂಲಕ ಪ್ರತಿಯೊಬ್ಬರಿಗೂ ಉಚಿತ ಬುಕ್ ತಲುಪಿಸುವ ಪ್ರಯತ್ನ ಮಾಡಿದರು. ಇದನ್ನು ನಾಡಿನ ಜನ ಬೆಂಬಲಿಸಿ ಪ್ರೋತ್ಸಾಹಿಸಿದರು.

ಎರಡು ಅವಧಿಯ ಲಾಕ್‌ಡೌನ್ ಸಂದರ್ಭದಲ್ಲಿ ಅವರು ಭೋಗೇನಾಗರಕೊಪ್ಪ ಇತಿಹಾಸ (ಗ್ರಾಮಕಥನ), ಅಂಬರಗಾಮಿಯ ಅಮರ ಗೀತೆಗಳು, (ಕವನ ಸಂಕಲನ), ಕವನ ಶ್ರಾವಣ (ಕವನ ಸಂಕಲನ ಸಂಪಾದನಾ ಕೃತಿ), ಬಳ್ಳಿ ಬಳುಕ್ಯಾವೋ, ಪಂಚಸಚಿ (ಲೇಖನ ಸಂಪಾದನಾ ಕೃತಿ), ಸಮಾನ ಚಿಂತಕರು ವಾರ್ಷಿಕೋತ್ಸವ ಸ್ಮರಣ ಸಂಚಿಕೆ ಹೀಗೆ ತಾವು ಹಾಗೂ ಆಸಕ್ತರ ಬರಹ ಸಂಪಾದಿಸಿ ಇ -ಬುಕ್ ತಯಾರಿಸಿ ಹಂಚಿದ್ದು ಶ್ಲಾಘನೀಯ. ಜೊತೆಗೆ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ವೈಭವೀಕರಿಸುವ ಮಾಹಿತಿಪೂರ್ಣ  2021ರ “ಸುವಿಚಾರ ಇ-ದಿನದರ್ಶಿಕೆ” ರಚಿಸಿ ನಾಡಿನ ಜನತೆಗೆ ಉಚಿತವಾಗಿ ವಿತರಿಸಿದರು. ಇವರ ಕನ್ನಡಪರ ಕಾರ್ಯ ಗುರುತಿಸಿದ ಆಕಾಶವಾಣಿ ಧಾರವಾಡವು ‘ಯುವವಾಣಿ’ಯಲ್ಲಿ ವಿಶೇಷ ಸಂದರ್ಶನವನ್ನು ಮಾಡಿತು.

“ಟಾಂಗಣ್ಣ” ಹೆಸರಿನಲ್ಲಿ ಓರೆಕೋರೆಗಳಿಗೆ ಭೂತಗನ್ನಡಿ ಹಿಡಿಯುವ ಹಾಸ್ಯ ಪಾತ್ರವನ್ನು ಸೃಷ್ಟಿಸಿಕೊಂಡು ಹಾಸ್ಯ ಬರಹಗಳನ್ನು ಬರೆಯುತ್ತ ಬಂದಿರುವ ಇವರು ತಿಳಿಹಾಸ್ಯದ ಮೂಲಕ ನಗಿಸುತ್ತಾರೆ.

ಅಂಬರಗಾಮಿ’ ಎಂಬ ಕಾವ್ಯನಾಮ ಇಟ್ಟುಕೊಂಡು ನೂರಾರು ಉತ್ತಮ ಕವನಗಳನ್ನು ಬರೆದಿದ್ದಾರೆ. ‘ಪ್ರತ್ಯಗ್ರ’ ಎಂಬ ಪ್ರಣವಾನಂದ ಶ್ರೀಗಳು ನೀಡಿದ ಬಿರುದನ್ನು ಅಂಕಿತವಾಗಿಸಿಕೊಂಡು ಭಾವನೆಗಳ ಕುರಿತು, ಮನಸ್ಸಿಗೆ ನಾಟುವ ಉಕ್ತಿಯನ್ನು ಬರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಒಳಪಟ್ಟಿವೆ.

ವಿವಿಧ ವಿಚಾರ ಹಾಗೂ ವಿಶಿಷ್ಟ ಬರಹಗಳನ್ನು ಓದುಗರಿಗೆ ಮುದ ನೀಡುವ ಬರಹಗಳ ಗುಚ್ಛವಾದ ‘ ಶ್ರೀಕಾರ” ಎಂಬ ಹೆಸರಿನ ಕೃತಿಯು ಬಿಡುಗಡೆಯಾಗಲಿದೆ.

ಓಂಕಾರ,  ಶ್ರೀ ಗಣೇಶಾಂಜನೇಯ ಕ್ಷೇತ್ರದರ್ಶನ ಕೃತಿ ಬಿಡುಗಡೆಯಾಗಿವೆ. “ಹನುಮಾಯಣ” , ಅಪ್ರತಿಮ ಶತ ಪ್ರಮೀಳೆಯರು” , ದೇದೀಪ್ಯಮಾನ ಕೃತಿಗಳು ಬಿಡುಗಡೆಯ ಹಂತದಲ್ಲಿವೆ.

ಪುರಸ್ಕಾರಗಳು:

ಇವರು ಸಾಂಸ್ಕೃತಿಕ ಲೋಕಕ್ಕೆ ಸಲ್ಲಿಸಿದ ಬರವಣಿಗೆಯನ್ನು ಗಮನಿಸಿದ ಹುಬ್ಬಳ್ಳಿ ಅದ್ವೈತ ವಿದ್ಯಾಶ್ರಮದ  ಪರಮಪೂಜ್ಯ ಶ್ರೀ ಶ್ರೀ ಪ್ರಣವಾನಂದ ತೀರ್ಥ ಮಹಾಸ್ವಾಮಿಗಳು ಕಲಘಟಗಿ ತಾಲೂಕಾ ಬ್ರಾಹ್ಮಣ ಸಂಘದ ಸಹಯೋಗದಲ್ಲಿ 2018ರ ಸಾಲಿನ ದತ್ತ ಜಯಂತಿಯಂದು  ಇವರಿಗೆ “ಪ್ರತ್ಯಗ್ರ ಲೇಖಕ” ಎಂಬ ಬಿರುದು ನೀಡಿ ಆಶೀರ್ವದಿಸಿದ್ದಾರೆ.ಅದೇ ರೀತಿ ಕಲಘಟಗಿ ಪಟ್ಟಣದ ವಿದ್ಯಾಸಾಗರ ಸ್ಕೂಲ್‌ನವರು ಮಾಧ್ಯಮಶ್ರೀ ಪ್ರಶಸ್ತಿ ನೀಡಿದ್ದಾರೆ.

ವಿಶ್ವ ಮಾನವ ಹಕ್ಕುಗಳ ಸಂಸ್ಥೆಯ ವಿಶ್ವ ಮಾನವಾಧಿಕಾರ ಪರಿಷತ್ ಲಖನೌ ವತಿಯಿಂದ ‘ಕೊರಾನಾ ವಾರಿಯರ್ಸ್’ ಪುರಸ್ಕಾರ ಲಭಿಸಿದೆ.

ಪ್ಕಟಣೆ ಹಂತದಲ್ಲಿರುವ ಇವರ “ಹನುಮಾಯಣ” ಕೃತಿಗೆ ಹೆಬ್ಬಳ್ಳಿಯ ಪೂಜ್ಯ ಶ್ರೀ ದತ್ತಾವಧೂತ  ಮಹಾರಾಜರು ಕೃತಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಕೃತಿಯಲ್ಲಿನ ಕೆಲ ಅಂಶವನ್ನು ಉಲ್ಲೇಖಿಸಿ ಮೂರು ರಾಜ್ಯಗಳಲ್ಲಿ ಇರುವ ಅವರ ಭಕ್ತರಿಗೆ ಹನುಮಂತನ ಕುರಿತು ಪ್ರವಚನ ನೀಡಿದ್ದು ಉಲ್ಲೇಖನೀಯ. ಅವಧೂತರು ಅನುಗ್ರಹಿಸಿ ಆಶೀರ್ವಚನ ನೀಡಿ ಸನ್ಮಾನಿಸಿದ್ದಾರೆ. ಇವರ ಚೊಚ್ಚಲ ಕೃತಿ “ಓಂಕಾರ”ಕ್ಕೆ ನಾಡಿನ ಓದುಗರ ಅಪಾರ ಮೆಚ್ಚುಗೆಯ ಜೊತೆ  ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತಿಯಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರೋತ್ಸಾಹಧನ ನೀಡಿ ಸನ್ಮಾನಿಸಿದೆ.

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group