ಮೂಡಲಗಿ – ಕಳೆದ ನಲವತ್ತು ವರ್ಷಗಳಿಂದ ಮೂಡಲಗಿಯಲ್ಲಿ ಛಾಯಾಗ್ರಾಹಕರಾಗಿದ್ದ ಹಾಗೂ ಪತ್ರಕರ್ತರಾಗಿದ್ದ, ಮೂಲತಃ ಚಿಕ್ಕಮಗಳೂರಿನವರಾದ ಎಸ್ ಎಮ್ ಚಂದ್ರಶೇಖರ ಅವರು ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ ೫೨ ವರ್ಷ ವಯಸ್ಸಾಗಿತ್ತು.
ಹಲವಾರು ವರ್ಷಗಳಿಂದ ಛಾಯಾಗ್ರಾಹಕ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದ, ಸದಾ ಹಸನ್ಮುಖಿಯಾಗಿದ್ದ ಚಂದ್ರಶೇಖರ ಅವರು ಮೂಡಲಗಿ ತಾಲೂಕಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ
ಖ್ಯಾತ ಛಾಯಾಗ್ರಾಹಕ ಹಾಗೂ ಪತ್ರಕರ್ತರಾಗಿದ್ದ ಎಸ್ ಎಮ್ ಚಂದ್ರಶೇಖರ ಅವರ ನಿಧನಕ್ಕೆ ಅರಭಾವಿ ಶಾಸಕ ಹಾಗೂ ಕೆಎಮ್ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಆತ್ಮೀಯರಾಗಿದ್ದ ಚಂದ್ರು ಅವರ ನಿಧನದಿಂದ ತೀವ್ರ ಆಘಾತವಾಗಿದೆ. ಆತ್ಮೀಯ ಮಿತ್ರರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಜಾರಕಿಹೊಳಿ ತಿಳಿಸಿದ್ದಾರೆ.