spot_img
spot_img

ರಂಗ ಕರ್ಮಿ ಕೆ.ವಿ.ಸುಬ್ಬಣ್ಣ

Must Read

- Advertisement -

ಕೆ.ವಿ.ಸುಬ್ಬಣ್ಣ (ಫೆಬ್ರುವರಿ ೨೦, ೧೯೩೨ – ಜುಲೈ ೧೬, ೨೦೦೫) ಕರ್ನಾಟಕದ ಓರ್ವ ಪ್ರಸಿದ್ಧ ರಂಗಕರ್ಮಿ ಮತ್ತು ಸಾಹಿತಿ.

ಜೀವನ:

ಕೆ.ವಿ.ಸುಬ್ಬಣ್ಣನವರ(ಕುಂಟಗೋಡು ವಿಭೂತಿ ಸುಬ್ಬಣ್ಣ) ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೋಡು. ೧೯೩೨ ಫೆಬ್ರವರಿ ೨೦ ರಂದು ಜನಿಸಿದ ಇವರು ಮುಂದೆ ಹೆಗ್ಗೋಡಿನಂತಹ ಚಿಕ್ಕ ಊರಿನಲ್ಲಿದ್ದುಕೊಂಡೇ ೧೯೪೯ ರಲ್ಲಿ ನೀಲಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ)ರಂಗ ಸಂಸ್ಥೆಯನ್ನು ನಿರ್ಮಿಸಿ, ರಂಗ ಚಟುವಟಿಕೆಗಳ ಮೂಲಕ ಅಂತಾರಾಷ್ಟ್ರೀಯ ಗಮನ ಸೆಳೆದರು. ಈ ಮೂಲಕ ಗ್ರಾಮೀಣ ರಂಗಭೂಮಿಗೆ ತನ್ನದೇ ಆದ ಸ್ಥಾನ, ಪ್ರತಿಷ್ಠೆಗಳನ್ನು ತಂದುಕೊಟ್ಟರು. ನೀನಾಸಂ ಸಂಸ್ಥೆ ನಡೆಸುವ ತಿರುಗಾಟ ಇಂದು ಕನ್ನಡ ರಂಗಭೂಮಿಯ ಒಂದು ಅವಿಭಾಜ್ಯ ಅಂಗವಾಗಿದೆ. ಸಾಹಿತಿಯೂ ಆಗಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ೨೦೦೫ ಜುಲೈ ೧೬ ರಂದು ಹೃದಯಾಘಾತದಿಂದ ನಿಧನರಾದರು. ಅಕ್ಷರ ಪ್ರಕಾಶನವನ್ನು ಕೆ.ವಿ.ಸುಬ್ಬಣ್ಣನವರು ಹೆಗ್ಗೋಡಿನಲ್ಲಿ ಸ್ಥಾಪಿಸಿದರು.

ಕೃತಿಗಳು:

  • ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು.

ನಾಟಕಗಳು:

  • ಗಾರ್ಗಿಯ ಕಥೆಗಳು
  • ರಾಜಕೀಯದ ಮಧ್ಯೆ ಬಿಡುವು
  • ಅಭಿಜ್ಞಾನ ಶಾಕುಂತಲ
  • ಸೂಳೆ ಸನ್ಯಾಸಿ

ಸುಬ್ಬಣ್ಣ ನಾಟಕಕಾರ ಮಾತ್ರವಲ್ಲದೆ ಅನುವಾದಕ,ಉತ್ತಮ ವಿಮರ್ಶಕ ಹಾಗೂ ಪ್ರಕಾಶಕ ಕೂಡಾ ಆಗಿದ್ದರು. ಚಲನಚಿತ್ರಕ್ಕೆ ಸಂಬಂಧಿಸಿದಂತೆ ೨೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರು ಸ್ಥಾಪಿಸಿದ ‘ಅಕ್ಷರ ಪ್ರಕಾಶನ’ವೆಂಬ ಸಂಸ್ಥೆಯೂ ಅತಿ ಮುಖ್ಯ , ಸಾಹಿತ್ಯಕ್ಷೇತ್ರಕ್ಕೆ ‘ಅಕ್ಷರ ಪ್ರಕಾಶನ’ ಸಲ್ಲಿಸಿದ ಸೇವೆ ಅಪಾರವಾದುದು. ಅಕ್ಷರ ಪ್ರಕಾಶನದ ಮೂಲಕ ೫೦೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

- Advertisement -

ಸಂದ ಪ್ರಶಸ್ತಿಗಳು:

  • ೧೯೯೧ ರಲ್ಲಿ ಫಿಲಿಫೀನ್ಸ್ ಸರ್ಕಾರ ಕೊಡುವ ಪ್ರತಿಷ್ಠಿತ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ.
  • ೨೦೦೧-೨೦೦೨ರಲ್ಲಿ ಕಾಳಿದಾಸ ಸಮ್ಮಾನ್ ಪ್ರಶಸ್ತಿ.
  • ೨೦೦೩ರಲ್ಲಿ ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  • ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ (ಆದರೆ ಸುಬ್ಬಣ್ಣ ಅವರು ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು).

ಸುಬ್ಬಣ್ಣ ಅವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೃತಿಯಲ್ಲಿ ಕನ್ನಡದ ಸಂದರ್ಭದ ಬಗ್ಗೆ ಅಚ್ಚರಿಗೊಳಿಸುವ ವಿವರಗಳಿವೆ. ಅಲ್ಲಿ ಅವರು ಕನ್ನಡ ಜನಪದದ ಶಕ್ತಿಯ ಕುರಿತು ಬರೆದಿದ್ದಾರೆ. ಅತ್ಯಂತ ಮಹತ್ವದ ಕೃತಿ ಇದು.

ಪ್ರತಿ ವರ್ಷ ಅವರು ನಡೆಸುತ್ತಿದ್ದ (ಈಗಲೂ ಮುಂದುವರೆಯುತ್ತಿರುವ) ” ಸಂಸ್ಕೃತಿ ಶಿಬಿರ”ದಲ್ಲಿ ಎಲ್ಲ ಬಗೆಯ ಚಿಂತನೆಗಳಿಗೆ ವೇದಿಕೆಯನ್ನೊದಗಿಸಿ ಕರ್ನಾಟಕದೆಲ್ಲಡೆಯಿಂದ ಬಂದ ಶಿಬಿರಾರ್ಥಿಗಳಿಗೆ ಸಂಸ್ಕೃತಿಯ ಪರಿಚಯವನ್ನು, ಚಿಂತಕರ ಸಂಪರ್ಕವನ್ನೂ ಮಾಡಿಸಿದ್ದಾರೆ. ಇವರ ಮಗ ಕೆ.ವಿ.ಅಕ್ಷರ ಸಹ ನಾಟಕ ಹಾಗು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನ

ಹೊಸದೆಹಲಿ - ಭಾರತದ ೧೩ ನೇ ಪ್ರಧಾನ ಮಂತ್ರಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನಿಧನರಾಗಿದ್ದಾರೆ ೧೯೭೨ ರಲ್ಲಿ ಆರ್ಥಿಕ ಸಲಹೆಗಾರ,  ೧೯೭೬ ರಿಂದ ೧೯೮೦...
- Advertisement -

More Articles Like This

- Advertisement -
close
error: Content is protected !!
Join WhatsApp Group