ಕಮಕೇರಿ: ಅ.೨೮ ರಂದು ನೂತನ ಬೆಳ್ಳಿರಥದ ರಥೋತ್ಸವ

Must Read

ಕಮಕೇರಿ: ರಾಮದುರ್ಗ ತಾಲೂಕಿನ ಕಮಕೇರಿ ಗ್ರಾಮದ ಶ್ರೀ ಕ್ಷೇತ್ರ ಪಂಢರಪೂರ ಪಾದಯಾತ್ರಾ ಸಮಿತಿಯಿಂದ ಪಾದಯಾತ್ರೆಯ ನಿಮಿತ್ತವಾಗಿ ನೂತನವಾಗಿ ನಿರ್ಮಿಸಿದ ಬೆಳ್ಳಿರಥದ ರಥೋತ್ಸವ ಸಮಾರಂಭ ಅ.೨೮ ರಂದು ಜರುಗಲಿದೆ.

ಅ.೨೮ ರಂದು ಮುಂಜಾನೆ ೮ ಗಂಟೆಗೆ ಯಾದವಾಡದ ನರಸಿಂಹ ಆಚಾರ್ಯ ಜೋಶಿ ಅವರಿಂದ ಶ್ರೀ ಜ್ಞಾನೇಶ್ವರ, ಶ್ರೀ ತುಕ್ಕಾರಾಮ, ಶ್ರೀ ತುಕಾರಾಮ, ಶ್ರೀ ಪಾಂಡುರಂಗ ಪಾದುಕೆಗಳ ಅಭಿಷೇಕ ನಂತರ ಹೊಸಕೋಟಿ ಜಕನೆಮ್ಮ ದೇವಸ್ಥಾನದಿಂದ ಸುಮಂಗಲೆಯರಿಂದ ಕುಂಭಮೇಳ, ವಾಕರಿ ಭಜನೆ ಮತ್ತು ಮಂಗಳವಾದ್ಯದೊಂದಿಗೆ ನೂತನ ಬೆಳ್ಳಿ ರಥ ಕಮಕೇರಿ ಗ್ರಾಮಕ್ಕೆ ಆಗಮಿಸುವುದು.

೧೨ಘಂಟೆಗೆ ಜರುಗುವ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಪಂಢರಪೂರದ ಶ್ರೀ ಹ.ಬ.ಪ ಚೈತನ್ಯ ಸದ್ಗುರು ನಾನಾ ಮಹಾರಾಜತ್ಯಾ ವಾಸ್ಕರ ಮತ್ತು ಸಾನ್ನಿಧ್ಯವನ್ನು ಹರಳಕಟ್ಟಿಯ ಬ್ರಹ್ಮವಿದ್ಯಾಶ್ರಮ ಶಿವಾನಂದ ಮಠದ ಸದ್ಗುರು ನಿಜಗುಣ ಸ್ವಾಮೀಜಿ, ತೊಂಡಿಕಟ್ಟಿ ಗಾಳೇಶ್ವರ ಮಠದ ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರು, ಚಿಪ್ಪಲಕಟ್ಟಿ-ಸಾಲಹಳ್ಳಿಯ ಬೃಹ್ಮನಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹೊಸಕೋಟಿ ರೇವಯ್ಯಸ್ವಾಮಿ ಮಠದ ಶ್ರೀ ಅಭಿನವ ರೇವಯ್ಯ ಸ್ವಾಮೀಜಿ, ಕಮಕೇರಿಯ ವೃಂದಾರಣ್ಯ ಹರೇಕೃಷ್ಣ ಗುರುಕುಲದ ಶ್ರೀ ಗೋಪೇಶ್ವರ ಪ್ರಭುಜೀ ಮತ್ತು ಸಂಗಮೇಶ್ವರ ಮಠದ ಮಾತ್ರೋಶ್ರೀ ಮಹಾದೇವಿ ತಾಯಿಯವರು ವಹಿಸುವರು.

ಸಾಯಂಕಾಲ ೪ ಘಂಟೆಗೆ ದಾನಿಗಳಿಗೆ ಸನ್ಮಾನ ಸಮಾರಂಭ ಮತ್ತು ೭ ಘಂಟೆಗೆ ಕೋಲ್ಹಾಪೂರದ ಶ್ರಿ ಹ.ಬ.ಪ ತುಕಾರಾಮ ಪವಾರ ಅವರಿಂದ ಕೀರ್ತನೆ ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group