spot_img
spot_img

ಭಾರತೀಯ ಭಾಷೆಗಳಲ್ಲಿ ಕನ್ನಡದ ಪ್ರಯೋಗಶೀಲತೆ ಹೆಚ್ಚು -ಡಾ. ಸರಜೂಕಾಟ್ಕರ್

Must Read

- Advertisement -

ಬೆಳಗಾವಿಃ “ಕನ್ನಡ ಸಾರಸ್ವತ ಲೋಕದಲ್ಲಿ ನಡೆದಿರುವ ಪ್ರಯೋಗಶೀಲತೆಯಿಂದಾಗಿ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಹಾಗೂ ಮೂರುಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನವು ಒದಗಿ ಬಂದಿದೆ. ಕನ್ನಡದಂಥ ಪ್ರಾಚೀನ ಮತ್ತು ಶಾಸ್ತ್ರೀಯ ಭಾಷೆಯು ಇಂದು ಇಡೀ ಭಾರತೀಯರು ಹೆಮ್ಮೆ ಪಡುವಂತೆ ಸಾಹಿತ್ಯವನ್ನು ಸೃಷ್ಟಿಸಿರುವುದು ಸ್ತುತ್ಯರ್ಹ ಸಂಗತಿ” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ, ದೆಹಲಿಯ ಸದಸ್ಯರಾದ ಡಾ. ಸರಜೂಕಾಟ್ಕರ್ ಹೇಳಿದರು.

ದಿನಾಂಕ: ೧೩ ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಪಂಪಮಹಾಕವಿ ವೇದಿಕೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳ ಪುನಃಶ್ಚೇತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯದ ಅಧ್ಯಯನ ಮಾಡುವವರಿಗೆ ಇಂದು ಅನೇಕ ಅವಕಾಶಗಳು ಒದಗಿಬರುತ್ತವೆ. ಭಾರತೀಯ ಭಾಷೆಗಳಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನಮಾನ ಮಾತ್ರವಲ್ಲ ಘನತೆ ಇದೆ.ಎರಡುವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ, ಮುಂಬರುವ ದಿನಗಳಲ್ಲಿ ಮತ್ತಷ್ಟು ತನ್ನ ಪ್ರಾಬಲ್ಯವನ್ನು ಸಾಧಿಸಲಿದೆ.ಭಾರತೀಯ ಭಾಷೆಗಳ ಸಾಹಿತ್ಯದಲ್ಲಿ ಕನ್ನಡ ಭಾಷೆಯ ಸಾಹಿತ್ಯವು ಗಂಭೀರ ಸ್ವರೂಪದ್ದಾಗಿದ್ದು, ಪ್ರಯೋಗಶೀಲತೆಯ ದೃಷ್ಟಿಯಿಂದ ತನ್ನ ಹೊಸತನವನ್ನು ಅಭಿವ್ಯಕ್ತಿಸುತ್ತಿದೆ.ಈ ಹಿನ್ನೆಲೆಯಲ್ಲಿ ಕನ್ನಡ ಅಧ್ಯಯನವನ್ನು ಬಯಸಿ ಬಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ”ಎಂದು ಅಭಿಪ್ರಾಯಪಟ್ಟರು.

- Advertisement -

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಸ್. ಎಂ. ಗಂಗಾಧರಯ್ಯ ಅವರು,“ಕನ್ನಡ, ಕನ್ನಡಿಗ, ಕನ್ನಡತ್ವ, ಕನ್ನಡತನ, ಕರ್ನಾಟಕತ್ವ ಹಾಗೂ ಕನ್ನಡದ ದೃಷ್ಟಿಕೋನ ಮುಂತಾದವುಗಳಿಗೆ ಕನ್ನಡ ಸಾಹಿತ್ಯ ಅಧ್ಯಯನವನ್ನು ನಡೆಸುವವರು ಅಧಿಕೃತ ವಾರಸುದಾರರಾಗಿರುತ್ತಾರೆ. ಮುಂಬರುವ ದಿನಮಾನಗಳಲ್ಲಿ ಕನ್ನಡ ಸಂಸ್ಕೃತಿಯ ಪ್ರಸರಣದ ರಾಯಭಾರತ್ವವನ್ನು ವಹಿಸಿಕೊಳ್ಳಬೇಕು. ಇಂದಿನಿಂದ ಕನ್ನಡ ಸ್ನಾತಕೋತ್ತರ ವಿಷಯವನ್ನು ಅಧ್ಯಯನಿಸಲು ಬಂದ ವಿದ್ಯಾರ್ಥಿಗಳು ಕನ್ನಡ ಸಂಸ್ಕೃತಿಯ ದೀಕ್ಷಾಧಾರಿಗಳಾಗಿರುವರು” ಎಂದು ತಿಳಿಸಿ ಕನ್ನಡಕ್ಕಾಗಿ ದುಡಿಯಬೇಕೆಂದು ಕರೆಕೊಟ್ಟರು.

ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಮಾರಂಭದಲ್ಲಿ ಬಹುಮಾನವನ್ನು ವಿತರಿಸಲಾಯಿತು.ನೆಟ್/ಸ್ಲೆಟ್‌ಪಾಸಾದ ವಿದ್ಯಾರ್ಥಿಗಳಾದ ವಿಠ್ಠಲ ಹರಿಜನ, ಶೃತಿ ಟೊಣ್ಣೆನ್ನವರ ಹಾಗೂ ಮಲ್ಲಿಕಾರ್ಜುನ ಜೋಡಟ್ಟಿ ಅವರನ್ನು ಸನ್ಮಾನಿಸಲಾಯಿತು. ಡಾ. ಗಜಾನನ ನಾಯ್ಕ, ಡಾ.ಮಹೇಶ ಗಾಜಪ್ಪನವರ, ಡಾ.ಶೋಭಾ ನಾಯಕ, ಡಾ. ಪಿ. ನಾಗರಾಜ, ಡಾ.ಅಶೋಕ ಮುಧೋಳ, ಶ್ರೀ.ಫಕೀರಪ್ಪ ಸೊಗಲದ, ಶ್ರೀಮತಿ.ಜಕ್ಕವ್ವ ದೊಡಶ್ಯಾನಟ್ಟಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.

ಸಿದ್ದಪ್ಪ ದನದವರ ಹಾಗೂ ಕಮಲವ್ವ ಉದಗಟ್ಟಿ ನಿರೂಪಿಸಿದರು. ಕಾರ್ಯಕ್ರಮವನ್ನು ಜನಪದ ಕಲಾಮೇಳಗಳೊಂದಿಗೆ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ವಿಭಾಗಕ್ಕೆ ಕರೆತಂದು ಸ್ವಾಗತಿಸಿಕೊಂಡರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group