Homeಕವನಕವನಗಳು

ಕವನಗಳು

ನಿನದೆನ್ನುವುದೇನಿಲ್ಲ

ಈ ನಿಸರ್ಗ ನಿರ್ಮಿತ ನೋಡೆಲ್ಲ ಮನುಜ ನಿನದೆನ್ನುವದೇನಿಲ್ಲ ನಿಜ,
ಬಂದು ಹೋಗುವ ಮೂರು ದಿನದ ಸಂತೆಯಲ್ಲಿ ನಿಂತು ಯಜಮಾನನನ್ನು ಮರೆತು
ತಿರುಗುವ ತಿಳಿಗೇಡಿಯಾದಿ ನಿಜ,
ಏನೆಲ್ಲಾ ನನ್ನದೆಂದು ಬೀಗುತ್ತಿರುವ ನೀನು ಇರುವ ನಿಸರ್ಗವನು ಹಾಗೆ ಇರಲು ಬಿಡಲು ಕಲಿಯಲಿಲ್ಲ ನಿಜ

ನಿಜವರಿಯದ ನಿನಗೆ ನಿಸರ್ಗ ನಿಡುತ್ತಿರುವ ಈ ತೊಡಕುಗಳಿಂದಾದರು ತಿಳಿಯದಿದ್ದರೆ ಕರೋನಾಗಿಂತಲೂ ಅಪಾಯದ ನಿರೀಕ್ಷೆ ನಿನ್ನದು ನಿಜ…..


ಮೈಮರೆಯದಿರು

ಮನೆಯೊಳಗಿರದೆ ಮೈಮರೆತು ಬರುವರಂಗಳಕೆ ಜನಗಳು
ಸರುಕಾರ ಎಷ್ಟು ತಿವಿದರು ಓಡುತಿಹುದು ಅನಿಯಂತ್ರಣದಲ್ಲಿ
ಅಜ್ಞಾನವನ್ನೆ ಜ್ಞಾನ ಎಂತಿಳಿದ ಜನರಿವರು,
ಭಯದಿ ಓಡುವಷ್ಟು ಬಾಲ್ಯದಲ್ಲಿ ಬಿತ್ತಿದ ಬೆಳೆಯದು ಮೌಢ್ಯವನ್ನು ಬಿತ್ತಿದ ಮನದಲ್ಲಿ ವೈಚಾರಿಕತೆ ಎಂತು ಅರಸುವುದು
ಕೋಟಿ ಜನಗಳಿಗೆ ಹಿಡಿ ಸರುಕಾರದ ನಿಯಮಗಳಿಗೆ ಎಲ್ಲಿ ಬೆಲೆ,,

ಮನೆಯೊಳಗಿರದೆ ಮೈಮರೆತು ಬರುವರಂಗಳಕೆ ಜನಗಳು ಎದ್ದು ಬಿದ್ದು ಕೋಟಿ ಸುರಿದು ಕಟ್ಟಿದರು ಮಠ ಮಂದಿರ,
ಯಾವ ಮಂದಿರದ ದೇವರು ಎದ್ದೆದ್ದು ಬಂದು ನಿಮ್ಮ ಕಾಪಾಡುತಿಹನು..
ಬಡತನದಿ ಸೊರಗಿ ಸೋತಿರುವ ನಮ್ಮ ಜೀವ ದೇವಶಾಲೆ ಕಾಣಲಿಲ್ಲ ಕಣ್ಣಿಗೆ..
ಕಂದ ಕಾಲಿಟ್ಟ ದಿನದಿಂದ ಕಲಿಸಲಿಲ್ಲ ನಿಯಮದಲ್ಲಿ ನಿಯಮಿತ ಓಡಾಟ,,
ಈಗೇಕೆ ? ಇರುವೆನ್ನುತಿರುವಿರಿ ನಿಯಮದಲ್ಲಿ,,,
ಬಾಲ್ಯದಲ್ಲಿ ಬಿತ್ತಿದ ಬೆಳೆ ಹುಲುಸಾಗಿ ನೀಡುತ್ತಿದೆ ಇಂದು

ಮನೆಯೊಳಗಿರದೆ ಮೈಮರೆತು ಬರುವರಂಗಳಕೆ ಜನಗಳು

(ಪಾರ್ಥವಿಕಂ)
ಅರ್ಜುನ ಕಂಬೋಗಿ
ಕ್ಷೇತ್ರ ಶಿಕ್ಷಣಾಧಿಕಾರಿಗಳು,
ಸವದತ್ತಿ, ಬೆಳಗಾವಿ ಜಿಲ್ಲೆ

RELATED ARTICLES

Most Popular

error: Content is protected !!
Join WhatsApp Group