Homeಕವನಕವನ: ಮಕರ ಸಂಕ್ರಾಂತಿ

ಕವನ: ಮಕರ ಸಂಕ್ರಾಂತಿ

spot_img

ಮಕರ ಸಂಕ್ರಾಂತಿ

ಸೂರ್ಯನ ಪರಿಭ್ರಮಣದೊಳು
ಭೂತಾಯಿಯ ಮಡಿಲು
ನವಕಾಂತಿಯ ಯುಗವನು ಕಾಣುತಿರೆ
ಋತು ಚಕ್ರದೊಳು ವಸಂತನ ಆಗಮನ
ನವಕಳೆಯೊಳು ಪ್ರಕೃತಿ

ಸಂಕ್ರಾಂತಿಯ ಆಗಮನ
ಎಳ್ಳು-ಬೆಲ್ಲವ ಮೆದ್ದು
ಒಳ್ಳೆಯ ನುಡಿಗಳನಾಡುತ
ಸಕಲರೂ ಕೂಡಿ
ಸಡಗರದಿ ದಿನವನು ಕಳೆಯೋಣ

ವರ್ಷವಿಡೀ ಬದುಕಲಿ ಸುಖ-ಶಾಂತಿ
ನೆಮ್ಮದಿಯ ಬಯಸುತ
ಬದುಕಿನ ಸಂತಸ ಮೆರೆಯೋಣ
ಹೊಸದಿಗಂತದಿ ಮೂಡಲಿ ಆಶಾಭಾವ
ಹೊಸತನದಿ ಬದುಕು ಹೊರಹೊಮ್ಮಲಿ

ನವನವೋಲ್ಲಾಸ ತರಲಿ ದಿನದಿನವು
ಸಂಕ್ರಾಂತಿಯ ಸವಿಯನರಸುತ
ಮುಂಬರುವ ಹಬ್ಬಗಳ ಕರೆಯೋಣ
ವರ್ಷವಿಡೀ ಸುಖಸಮೃದ್ದಿ ಬಾಳಲಿ ತರಲಿ
ಎನುತ ದೇವರಲಿ ಪ್ರಾರ್ಥಿಸೋಣ

ಚಳಿಯ ಬಿಡಿಸುತ ಎಳೆ ಬಿಸಿಲು
ಶಿವರಾತ್ರಿಗೆ ಶಿವಶಿವ ಎನಿರೆನುತ
ಬೇಸಗೆಯ ಕರೆತರುವ ಸಂಕ್ರಾಂತಿ
ಎಲ್ಲ ಕಾಲಕು ಹೊಂದಿಕೆಯಿರಲೆನುತ
ಬದುಕಲು ಕಲಿಸುವ ಸಂಕ್ರಾಂತಿ


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ

RELATED ARTICLES

Most Popular

error: Content is protected !!
Join WhatsApp Group