- Advertisement -
ಅಮ್ಮಾ
ಅಮ್ಮಾ ನಿನ್ನ ಎದೆಯಾಳದ ಕಪ್ಪೆಚಿಪ್ಪಿನಲ್ಲಿನ ಮುತ್ತಿನಂತಾ ಪ್ರೀತಿಗೆ ನಾ ಸೋತು ಶರಣಾಗುವೆ
ನಿನ್ನ ತೋಳಲ್ಲಿ ಬಂಧಿಯಾಗಿ ನಿನ್ನ ಪ್ರೀತಿಗೆ ಮರುಮಾತಾಡದೇ ಮೌನಿಯಾಗಿ ನಾ ನಿಸ್ವಾರ್ಥಿಯಾಗಿ ಬದುಕಿರುವೆ ಅಮ್ಮಾ
ನೀ ನವಮಾಸದಿ ಹೊತ್ತು ನಮ್ಮನ್ನು ಹೆತ್ತು. ನಾ ಸೋತು ಶರಣಾದಾಗ ಗೆಲುವಿನ ದಾರಿ ತೋರಿಸಿ ನಿಸ್ವಾರ್ಥ ಸೇವೆ ಗೈದಿರುವೆ ಅಮ್ಮಾ
- Advertisement -
ನಾ ಅತ್ತಾಗ ಕಣ್ಣೋರಿಸಿ ನಕ್ಕಾಗ ನಗು ನಕ್ಕು
ನನ್ನ ಸುಖಃ ದುಃಖಗಳಲ್ಲಿ ಒಂದಾಗಿರುವೆ ಅಮ್ಮಾ
ನನ್ನ ಮನವೆಂಬ ಗರ್ಭಗುಡಿಯಲ್ಲಿ ದೇವತೆ ಸ್ಥಾನ ನಿನಗಿಹುದು ಅಮ್ಮಾ
ನೀ ಅತ್ತಾಗ ಕರುಳಬಳ್ಳಿ ಮರುಕ ಪಡುವುದು ಅಮ್ಮಾ
ನೀ ನಕ್ಕಾಗ ತಾನು ನಕ್ಕು ಸಂತೋಷ ಬಾಷ್ಪ ಆರಿಸುವುದು ಅಮ್ಮಾ
- Advertisement -
ಅಮ್ಮಾ ನಾ ನಿನ್ನ ಕಂದನಮ್ಮಾ ನೀ ಪಟ್ಟ ಶ್ರಮ ಅಗಾಧವಾಗಿದೆ ಅಮ್ಮಾ
ರಾಹುಲ್ ಸುಭಾಷ್
ಸರೋದೆ