ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೇಂದ್ರದಿಂದ ರಾಜ್ಯದ ವಿವಿಧ ಜಿಲ್ಲೆಯ ಸಾಹಿತಿಗಳ, ಸಾಧಕರ ಸಾಧನೆಗಳುಳ್ಳ ಕೈಪಿಡಿಯನ್ನು ಹೊತರಲಿದ್ದು ಸಾಹಿತಿಗಳ ಮತ್ತು ಸಾಧಕರ ಸಾಧನೆಗಳನ್ನು ದಾಖಲಿಸಿ, ರಾಜ್ಯಮಟ್ಟದ ಮಾಹಿತಿಯ ಕೋಶ ಬಿಡುಗಡೆಗೊಳಿಸಲಿದ್ದಾರೆ.
ಆದ್ದರಿಂದ ಬೆಳಗಾವಿ ಜಿಲ್ಲೆಯ ಸಾಹಿತಿಗಳು ಮತ್ತು ಸಾಧಕರು ತಮ್ಮ ಸಂಪೂರ್ಣ ಮಾಹಿತಿಯನ್ನು ವಿವರಗಳೊಂದಿಗೆ ದಿನಾಂಕ:30/06/2023 ರೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಜಿಲ್ಲಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ, ವಿಜಯ ಇಂಡಸ್ಟ್ರೀಜ್ ಬೆಳಗಾವಿ ರಸ್ತೆ,ಬೈಲಹೊಂಗಲ-591102 ತಾ: ಬೈಲಹೊಂಗಲ ಜಿ: ಬೆಳಗಾವಿ ಅಥವಾ ಎಂ.ವೈ.ಮೆಣಸಿನಕಾಯಿ ಗೌರವಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್.ಬೆಳಗಾವಿ ಜಿಲ್ಲೆ, ಮನೆ ಸಂಖ್ಯೆ: 7360, ಸೆಕ್ಟರ್ ನಂ :10, ಆಂಜನೇಯನಗರ ಬೆಳಗಾವಿ-590017 ಈ ವಿಳಾಸಕ್ಕೆ ಕಳುಹಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ.ಮಂಗಲಾ ಮೆಟಗುಡ್ಡ ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ.9449209570 / 9448372411 ಗಳಿಗೆ ಸಂಪರ್ಕಿಸಬಹುದಾಗಿದೆ.
ಮಾಹಿತಿ:ವರದಿ:
ಆಕಾಶ್ ಅರವಿಂದ ಥಬಾಜ
ಜಿಲ್ಲಾ ಸಹ ಮಾಧ್ಯಮ ಪ್ರತಿನಿಧಿ
ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ, ಬೆಳಗಾವಿ
9448634208
9035419700