ಕವನ: ಪುನೀತ ಅಜರಾಮರನೀತ

Must Read

ಪುನೀತ ಅಜರಾಮರನೀತ

ನಂಬಲಾಗುತ್ತಿಲ್ಲ ನಿನ್ನ ಸಾವು ಓ!ಸುಚರಿತ.
ಮಾಡುತ್ತಿರುವರು ನಿನ್ನ ಗುಣಗಾನ ಅನವರತ.

ಅಭಿಮಾನಿಗಳೆಲ್ಲ ಸ್ಮರಿಸುತ್ತಿದ್ದಾರೆ ನಿನ್ನ ಸದ್ಗುಣ ಸತ್ಕಾರ್ಯಗಳನ್ನು
ಅವಿರತ.
ನಿನ್ನ ಕಲೆ, ನಿನ್ನ ಅಭಿನಯ ಎಂದೆಂದೂ ಪ್ರಚಲಿತ.

ಆಗಿದ್ದರೆ ದೊಡ್ಡವರಿಂದ ಚಿಕ್ಕ ಪುಟಾಣಿಗಳೆಲ್ಲ ದುಃಖಭರಿತ.
ನೀನಿಲ್ಲದ ದಿನಗಳನ್ನು ಕಲ್ಪಿಸಿಕೊಳ್ಳಲಾಗುವದಿಲ್ಲವೆಂಬುದು
ಅಷ್ಟೇ ಖಚಿತ.
ನೀನಾಗಿರುವೆ ಸಕಲ ಕಲೆಗಳಿಗೂ
ವಿದ್ಯಾವಂತ.

ಬದುಕುವ ಕಲೆ ಗೊತ್ತಿರುವ ಬುದ್ದಿವಂತ.
ಎಷ್ಟೋ ಸಮಾಜಮುಖಿ ಕೆಲಸ ಮಾಡಿದರೂ ಪ್ರಚಾರ ಪುರಸ್ಕಾರ
ಬಯಸದ ಧೀಮಂತ.

ನೀನು ಮಾಡಿದ ಉತ್ತಮ ಕಾರ್ಯಗಳನ್ನು ಮಾಡುವವರ ಸಂಖ್ಯೆ ಅಗಣಿತ.
ಗುಣವಂತನೆ, ಹೃದಯವಂತನೆ
ನೀನಾಗಿರುವೆ ಪ್ರತಿಯೊಬ್ಬರ
ಹೃದಯದ ಬಡಿತ.

ನೋಡಿ ಕಲಿಯಬೇಕು
ನಿನ್ನ ನಗುಮುಖದ ಸೆಳೆತ.
ಎಲ್ಲರ ಕಣ್ಣೀರಿನ ನೋವಲ್ಲಿ
ನೀ ಅಭಿಶಕ್ತ.
ಕರೆದುಕೊಂಡಿದ್ದಾನೆ ಅಮೂಲ್ಯ ರತ್ನ,

ಯುವರತ್ನ ನೀನು ಬೇಕೆಂದು
ಆ ಭಗವಂತ.
ಜೊತೆಗಿರದ ಜೀವ ಸದಾ ಜೀವಂತ.
ಮುಕ್ಕೋಟಿ ಅಭಿಮಾನಿಗಳ ಹೃದಯಗಳಲ್ಲಿ ನೆಲೆಸಿರೋ
ದೇವ ನೀ ಪರಮಾತ್ಮ.

ಅಪ್ಪು ಕಳೆದುಕೊಂಡು ಒಂದು ವರುಷದ ನೋವಿನ ದ್ಯೋತಕವಾಗಿ ಬರೆದ ಕವನ. ಮತ್ತೆ ಹುಟ್ಟಿ ಬಾ ಪುನೀತ್. ಎಂಬ ಪ್ರಾರ್ಥನೆಯೊಂದಿಗೆ.


ಉಮಾದೇವಿ.ಯು. ತೋಟಗಿ

Latest News

ವೇಮನ ಒಬ್ಬ ದಾರ್ಶನಿಕ ಕವಿ-ಸಾಹಿತಿ ಸಂಗಮೇಶ ಗುಜಗೊಂಡ

ಮೂಡಲಗಿ: ಜಾತಿ, ಮತ-ಪಂಥ ಕಾಂದಾಚಾರಗಳನ್ನು ಖಂಡಿಸುತ್ತಾ ಜೀವನದ ಪರಮ ಸತ್ಯಗಳನ್ನು ನಿರ್ಭೀತಿಯಿಂದ ಸಾರಿದ ವೇಮನ ಒಬ್ಬ ದಾರ್ಶನಿಕ ಕವಿ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಮಕ್ಕಳ...

More Articles Like This

error: Content is protected !!
Join WhatsApp Group