ಖಡಕಲಾಟ ಗ್ರಾಮದಲ್ಲಿ ಮಿಂಚಿನ ಸಂಚಾರ ಮಾಡಿ ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆ ಅರಿವು ಮೂಡಿಸಿದ ಕನ್ನಡ ಕರಸೇವಕರು
ಬೆಳಗಾವಿ – ಖಡಕಲಾಟ ಗ್ರಾಮದಲ್ಲಿ ಯುವ ಕನ್ನಡ ಜಾಗೃತಿ ಬಳಗ,ಕನಾ೯ಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಗ್ರಾಮದ ಪ್ರತಿಯೊಂದು ಅಂಗಡಿ ಮುಂಗಟ್ಟುಗಳಿಗೆ ಕನ್ನಡದ ಅರಿವು ಮೂಡಿಸಿ ನಾಮಫಲಕದಲ್ಲಿ ಕಡ್ಡಾಯ ಕನ್ನಡ ಅಳವಡಿಸಿದ ಮಾಲೀಕರಿಗೆ ಗುಲಾಬಿ ನೀಡಿ ಧನ್ಯವಾದಗಳನ್ನು ತಿಳಿಸಿ ಇನ್ನೂ ನಾಮಫಲಕ ಅಳವಡಿಸದ ಅಂಗಡಿ ಮಾಲೀಕರಿಗೂ ಗುಲಾಬಿ ನೀಡಿ ಮುಂದಿನ ವಾರದೊಳಗೆ ಕನ್ನಡ ಕಡ್ಡಾಯ ಅಳವಡಿಸಲು ಮನವಿ ಮಾಡಿದ ಕನ್ನಡ ಕರಸೇವಕರು.
ಕನಾ೯ಟಕರಲ್ಲಿ ಕನ್ನಡವೇ ಸಾವ೯ಭೌಮ ಇಲ್ಲಿ ಆಡಳಿತ ನಾಮಫಲಕ ದಾಖಲೆಗಳು ಕನ್ನಡದಲ್ಲಿ ಇರಲೆಬೇಕು ಎಂಬ ಸಂದೇಶ ನೀಡಲಾಯಿತು ತದನಂತರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಶೇ 90 ರಷ್ಟು ಕನ್ನಡ ಅಳವಡಿಸಿದ್ದಕ್ಕೆ ಅಧಿಕಾರಿಗಳಿಗೆ ಪುಷ್ಪ ನೀಡಿ ಗೌರವಿಸಿ ಶೇ 10 ಶೀಘ್ರ ಅಳವಡಿಸಲು ಮನವಿ ಮಾಡಲಾಯಿತು
ಶಾಸಕರ ಮಾದರಿ ಸರಕಾರಿ ಕನ್ನಡ ಶಾಲೆಗೆ ಭೇಟಿ ನೀಡಿ ಕನ್ನಡ ಶಾಲೆಯ ಏಳಿಗೆಗೆ ಧನ್ಯವಾದಗಳನ್ನು ಹೇಳಿ ಶಾಲಾ ಪರಿಸರದಲ್ಲಿ ಹಾಗೂ ಕಮಾನುಗಳಲ್ಲಿ ಕಡ್ಡಾಯ ಕನ್ನಡ ಅಳವಡಿಸಲು ಮನವಿ ಮಾಡಲಾಯಿತು
ಈ ಸಂದರ್ಭದಲ್ಲಿ ಕರವೇ ಚಿಕ್ಕೋಡಿ ತಾಲೂಕಿನ ಅಧ್ಯಕ್ಷ ಸಂಜು ಬಡಿಗೇರ, ಮಾಹಿತಿ ಹಕ್ಕು ಕಾಯ೯ಕತ೯ ಚಂದ್ರಕಾಂತ ಹುಕ್ಕೇರಿ, ನಿಪ್ಪಾಣಿ ಕನ್ನಡ ಸಾಹಿತ್ಯ ಪರಿಷತ್ತು ಕಾಯ೯ದಶಿ೯,ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೋ ಮಿಥುನ ಅಂಕಲಿ, ಯುವ ಕನ್ನಡ ಜಾಗೃತಿ ಬಳಗದ ಅಧ್ಯಕ್ಷ ಶಿವರಾಜ ಕೂಟ, ಖಡಕಲಾಟ ಕರವೇ ಅಧ್ಯಕ್ಷ ಶಂಕರ ಅವಡಖಾನ,ಶಮನೆವಾಡಿ ಕರವೇ ಅಧ್ಯಕ್ಷ ಮಂಜು ಭಾನುಸೆ, ಯುವ ಕನ್ನಡ ಬಳಗದ ಉಪಾಧ್ಯಕ್ಷ ಬಾಹುಬಲಿ ಮಗದುಮ್ಮ, ಕರವೇ ಉಪಾಧ್ಯಕ್ಷ ಕು ಪ್ರಶಾಂತ ಪರಿಟ,ಕಾಯ೯ದಶಿ೯ ಆಕಾಶ ವಿಜಯನಗರೆ, ಖಜಾಂಚಿ ಮಲ್ಲಪ್ಪಾ ಪೂಜಾರಿ, ಕನ್ನಡ ಸಂಘಟಕರಾದ ವಿಠ್ಠಲ ಅವಡಖಾನ, ಸೂರಜ ಸಂಕಾಜೆ, ರಾಜು ಸಂಕಾಜೆ,ಕು ಮಂಜು ರಾನಗೆ,ಕು ಶಿವು ಮಡಿವಾಳ,ಕು ಚೇತನ ಧಾತ್ರೆ ಸಹಿತ ಖಡಕಲಾಟ,ಚಿಕ್ಕೋಡಿ,ಶಿರಗಾಂವ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು