spot_img
spot_img

ಅಕ್ಷಯವಾಗುವ ದಾನ ನೀಡುವುದು ಒಳ್ಳೆಯದು

Must Read

spot_img
- Advertisement -

ಅಕ್ಷಯ ಎಂದರೆ ಕ್ಷಯವಾಗದ್ದು ಎಂದರ್ಥ. ಅಕ್ಷಯ ತೃತೀಯ ದಿನದಂದು ಕ್ಷಯವಾಗದ್ದನ್ನು ದಾನ ಮಾಡಿದರೆ ಇನ್ನಷ್ಟು ಅಕ್ಷಯವಾಗುತ್ತದೆ. ಇಲ್ಲಿ ಅಕ್ಷಯವಾಗಿರೋದು ಜ್ಞಾನ ಮಾತ್ರ ಹಣಕೊಟ್ಟರೂ ಕಳೆಯಬಹುದು ವಸ್ತುಕೊಟ್ಟರೂ ಹಾಳಾಗಬಹುದು.

ಆದರೆ ದಾನ ಮಾಡುವಾಗ ಯಾರಿಗೆ ಯಾಕೆ ಹೇಗೆ ಎಲ್ಲಿ ಯಾವುದನ್ನು ದಾನ ಮಾಡಬೇಕೆಂಬ ಜ್ಞಾನವಿದ್ದರೆ ಮಾನವನ ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧ್ಯ. ಭ್ರಷ್ಟಾಚಾರ ತುಂಬಿರುವವರ ಪ್ರತಿಯೊಂದು ಸಂಪಾದನೆಯೂ ಭ್ರಷ್ಟಾಚಾರದ ಕಡೆಗಿರುವಾಗ ಅದನ್ನು ದಾನ ಮಾಡಿ ಹಂಚಿಕೊಂಡವರಿಗೆ ಏನು ಸಿಗಬಹುದು? ಒಳ್ಳೆಯದನ್ನು ಹಂಚುವುದು ಉತ್ತಮ. ಒಳ್ಳೆಯವರಿಗೆ ಹಂಚುವುದು ಅತಿ ಉತ್ತಮ. ಆದರೆ, ಒಳ್ಳೆಯವರೆನ್ನಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ.

ಹೀಗಾಗಿ ಹೆಚ್ಚು ಹಣ, ಅಧಿಕಾರ, ಸ್ಥಾನಮಾನಕ್ಕಾಗಿ ರಾಜಕೀಯಕ್ಕೆ ಇಳಿದು ಜನಸಾಮಾನ್ಯರೆದುರು ಒಳ್ಳೆಯವರು ಎನಿಸಿಕೊಳ್ಳಲು ಪ್ರಯತ್ನಪಟ್ಟರೂ ಕೊನೆಗೊಮ್ಮೆ ಅಧಿಕಾರ ಕಳೆದುಕೊಂಡಾಗಲೇ ತಿಳಿಯೋದು ಯಾರು ಒಳ್ಳೆಯವರೆಂದು. ಒಟ್ಟಿನಲ್ಲಿ ದಾನ ಧರ್ಮ ಕಾರ್ಯ ನಡೆಸಲು ಜ್ಞಾನದ ಅಗತ್ಯವಿದೆ. ಜ್ಞಾನದಿಂದ ಸಂಪಾದನೆ ಮಾಡೋದು ಕಷ್ಟದ ಕೆಲಸವಾದರೂ ಕಷ್ಟಪಟ್ಟು ಮುಂದೆ ನಡೆದಂತೆಲ್ಲಾ ಜ್ಞಾನೋದಯವಾಗುತ್ತಾ ನಾವೇನು ಕೊಡುತ್ತಿದ್ದೇವೆಯೋ ಅವೆಲ್ಲವೂ ನಮ್ಮದಲ್ಲವಾದರೂ ನಮ್ಮದು ಎಂದು ಸ್ವೀಕರಿಸುವವರ ಮುಂದೆ ನಾವೇನೂ ಇಲ್ಲ ಕಾರಣ “ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಹರಿಯ ಕರುಣದೊಳಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೋ…” ದಾಸರ ಈ ಗೀತೆಯ ಅರ್ಥ ತಿಳಿದಾಗಲೇ ದಾನ ಕೊಟ್ಟವರೂ ಪಡೆದವರೂ ಸರಿಸಮಾನ.ಒಬ್ಬರ ಪಾಲು ಇನ್ನೊಬ್ಬರು ಇಟ್ಟುಕೊಂಡು ತಿರುಗಿ ಕೊಟ್ಟರೆ ನಿಸ್ವಾರ್ಥ ದಾನ.ಕೊಟ್ಟು ಪ್ರತಿಫಲವಾಗಿ ಬೇಡಿದರೆ ದಾನವರಾಗುತ್ತಾರೆ.

- Advertisement -

ಇದು ಯಾವುದಾದರೂ ಸರಿ ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ. ಜ್ಞಾನವಾಗಬಹುದು, ಹಣ, ಅಧಿಕಾರ, ಸ್ಥಾನ,ಸನ್ಮಾನ ಪದವಿ, ಪಟ್ಟ, ವಸ್ತು, ವಸ್ತ್ರ, ಒಡವೆ, ಅನ್ನ, ಶಿಕ್ಷಣ..ಮಕ್ಕಳ ಜ್ಞಾನ ಬೆಳೆಯುವುದು ಸಂಸ್ಕಾರಯುತ, ಸಾತ್ವಿಕ ಶಿಕ್ಷಣದಿಂದ ಅದನ್ನು ನಮ್ಮವರಿಗೆ ಹಂಚಿಕೊಂಡು ಮುಂದೆ ನಡೆಯದಿದ್ದರೆ ದಾನವರೆ ಬೆಳೆಯೋದು. ಕಣ್ಣಿಗೆ ಕಾಣದ ಜ್ಞಾನವನ್ನು ಗುರುತಿಸುವುದಕ್ಕೂ ನಮ್ಮೊಳಗೆ ಸತ್ಯಜ್ಞಾನ ಇರಬೇಕೆನ್ನುವುದೆ ಹಿಂದಿನವರ ಜ್ಞಾನ.

ಕಲಬೇಡ, ಕೊಲಬೇಡ, ಹುಸಿಯನುಡಿಯಲು ಬೇಡ, ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ… ಬಸವಣ್ಣನವರ ಜಯಂತಿಯಲ್ಲಿ ಅವರ ಈ ನುಡಿಮುತ್ತುಗಳನ್ನು ಅಳವಡಿಸಿಕೊಂಡು ನಂತರ ತತ್ವಜ್ಞಾನದ ಕಡೆಗೆ ನಡೆದರೆ ಇಲ್ಲಿ ಎಲ್ಲಾ ಸಮಾನ. ಓದಿಪ್ರಚಾರ ಮಾಡಿದವರೆಲ್ಲರೂ ಜ್ಞಾನಿಗಳಲ್ಲ. ಓದದೆ ಸನ್ಮಾರ್ಗ ಹಿಡಿದವರು ಅಜ್ಞಾನಿಗಳಲ್ಲ.

ಜ್ಞಾನಿಗಳನ್ನು ಗುಣದಿಂದ ಬೆಳೆಸಬೇಕು.ಹಣದಿಂದ ಜ್ಞಾನವಲ್ಲ. ಅಕ್ಷಯ ವಾಗದ ಜ್ಞಾನವೇ ದೇವರು,ಸತ್ಯವೇ ದೇವರು, ಭೌತಿಕವಾಗಿ ಎಷ್ಟೇ ಹೋರಾಡಿದರೂ ತತ್ವಜ್ಞಾನಕ್ಕೆ ಅಧ್ಯಾತ್ಮದ ಅಗತ್ಯವಿದೆ. ಅಧ್ಯಾತ್ಮ ತನ್ನ ತಾನರಿಯುವುದರಲ್ಲಿದೆ. ಅಹಂ ಬ್ರಹ್ಮಾಸ್ಮಿ ಎನ್ನುವುದರ ಹಿಂದೆ ಸಾಕಷ್ಟು ನಿರಹಂಕಾರ,ನಿಸ್ವಾರ್ಥ, ತ್ಯಾಗ,ಸತ್ಯಜ್ಞಾನದ ಅನುಭವವಿದೆ. ಅನುಭವಿಸದೆ ಸತ್ಯ ಧರ್ಮದ ಕಡೆಗೆ ನಡೆಯದೆ ತತ್ವಜ್ಞಾನಿಯಾಗೋದರಿಂದ ಅರ್ಧಸತ್ಯವಿರುತ್ತದೆ. ಉಳಿದ ಮಿಥ್ಯದಲ್ಲಿ ರಾಜಕೀಯವಿದ್ದರೆ ನಾನೇ ದೇವರು ಎನ್ನುವ ಅರ್ಥ ಬರುತ್ತದೆ.ಹಾಗಾಗಿ ಅದ್ವೈತ ಎಂದರೆ ಶರಣಾಗತಿ,ದಾಸರ ಭಾವನೆ,ಸಂನ್ಯಾಸ,ಸಾಧು,ಸಂತರಲ್ಲಿ ಕಾಣಬಹುದಿತ್ತು.ಕಾಲ ಬದಲಾಗಿದೆ. ದಾನದ ರೂಪದಲ್ಲಿ ಮಾನವನ ಅಂಗಗಳು ಮಾರಾಟವಾಗುತ್ತಿರುವುದು ದೊಡ್ಡ ಸಮಸ್ಯೆಗೆ ಮನುಕುಲ ತಲುಪುತ್ತಿದೆ. ಇದಕ್ಕೆ ಅಂತ್ಯವಿದೆಯೆ?

- Advertisement -

ಜ್ಞಾನವನ್ನು ಕದಿಯಲಾಗದು. ಶಾಶ್ವತವಾಗಿರುವ ಸತ್ಯವನ್ನು ಸಾಯಿಸಲಾಗದು. ಸತ್ಯ ನುಡಿಯುವುದರಿಂದ ಜ್ಞಾನ ಬೆಳೆಯುತ್ತದೆ ಎಂದರೆ ಇದಕ್ಕೆ ಸರ್ಕಾರದ ಅಗತ್ಯವಿಲ್ಲ.

ಸರಿಯಾದ ಗುರು ಹಿರಿಯರು,ಶಿಕ್ಷಕರು ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳ ಆತ್ಮಜ್ಞಾನವನ್ನು ಬೆಳೆಸುವತ್ತ ನಡೆದರೆ ಯಾರಿಗೆ ಯಾರು ಮೋಸ ಹೋಗಿರೋದು,ಮೋಸ ಮಾಡಿರೋದೆನ್ನುವ ಸತ್ಯ ನಮ್ಮೊಳಗೇ ತಿಳಿದು ನಮ್ಮ ಜ್ಞಾನಕ್ಕೆ ನಾವೇ ರಾಜರಾಗಬಹುದು.ರಾಜಯೋಗ ಜ್ಞಾನದಲ್ಲಿದೆ. ಭಾರತ ರಾಜಯೋಗದ ಕಡೆಗೆ ನಡೆದ ಜ್ಞಾನಿಗಳ ದೇಶವಾಗಿತ್ತು. ಇಂದಿದು ವ್ಯವಹಾರದ ಮಾಧ್ಯಮದ ಮಧ್ಯೆ ಸಿಲುಕಿ ರಾಜಕೀಯದತ್ತ ನಡೆದಿದೆ. ಪ್ರಜೆಗಳೇ ನೀಡಿದ ಮತದಾನವೇ ಇದಕ್ಕೆ ಕಾರಣ ಎಂದಾಗ ನಮ್ಮ ಮತ ಸ್ವಾರ್ಥದ ಪರವಾಗಿರುವಾಗ ಎಲ್ಲಿ ಯಾವುದರ ಅಕ್ಷಯವಾಗುತ್ತಿದೆ?

ಏನು ಬಯಸಿದರೂ ಬೆಳೆಯುತ್ತದೆ.ನಮ್ಮ ಮನಸ್ಸೇ ನಮ್ಮ ಶತ್ರು,ಮಿತ್ರ. ನಾವೇ ಎಲ್ಲದಕ್ಕೂ ಕಾರಣವೆಂದಾಗ ಯಾರೋ ಬಂದು ನಮ್ಮ ಕರ್ಮ ತೀರಿಸಲಾಗದು. ಸಾಲ ಮಾಡಿ ದಾನ ಮಾಡಿದರೂ ಸಾಲ ತೀರಿಸಲು ಕಷ್ಟಪಡಬೇಕಷ್ಟೆ. ಉಚಿತವಾಗಿ ಪಡೆದರೂ ಸಾಲ ಬೆಳೆದಾಗ ಕಷ್ಟ ಅನುಭವಿಸಲೇಬೇಕೆನ್ನುತ್ತಾರೆ ಮಹಾತ್ಮರುಗಳು.

ಒಟ್ಟಿನಲ್ಲಿ ದಾನ ಮಾಡಬೇಕು. ಸತ್ಪಾತ್ರರಿಗೆ ಮಾಡಬೇಕು. ದೇಶದಲ್ಲಿ ಸಾಕಷ್ಟು ಆಸ್ತಿಯಿದೆ. ಅದನ್ನು ಹಂಚುವಲ್ಲಿ ಸೋತಿದ್ದಾರಷ್ಟೆ. ಹಂಚಿಕೆ ವಿಚಾರದಲ್ಲಿ ಮಧ್ಯವರ್ತಿ ಗಳು ಭ್ರಷ್ಟಾಚಾರ ಹೆಚ್ಚಿಸಿ ಭ್ರಷ್ಟಾಚಾರವೂ ಅಕ್ಷಯವಾದರೆ ? ಆಸೆ ಇರಬೇಕು ಆದರೆ ಅತಿ ಆಸೆಯೇ ಕ್ಷಯವಾಗಲು ಕಾರಣ.ಭೂಮಿ ಋಣ ತೀರಿಸಲು ಜ್ಞಾನ ಮುಖ್ಯ ನಂತರ ವಿಜ್ಞಾನ. ಜ್ಞಾನವಿಲ್ಲವಾದರೆ ಹಣವನ್ನು ದುರ್ಬಳಕೆ ಮಾಡಿಕೊಂಡು ದಾನದ ಹೆಸರಲ್ಲಿ ದಾನವಕುಲ ಬೆಳೆಯಬಹುದು.ಲಕ್ಷ್ಮಿ ಚಂಚಲೆ. ಸ್ಥಿರವಾಗಿದ್ದ ಸರಸ್ವತಿಯನ್ನು ಲಕ್ಮಿಯ ರೂಪದಲ್ಲಿ ಅಲಂಕರಿಸ ಹೋಗಿ ಸ್ವಯಂ ಸರಸ್ವತಿಯೇ ಮುನಿಸಿಕೊಂಡು ಹಿಂದುಳಿದರೆ ಗತಿಯೇನು?

ಇಬ್ಬರೂ ಒಂದೇ ನಾಣ್ಯದ ಎರಡು ಮುಖವಾದಾಗ ಒಂದೇ ಮುಖ ನೋಡೋ ಬದಲು ಇಬ್ಬರಲ್ಲಿರುವ ಸತ್ವ ಸತ್ಯವನ್ನು ತಿಳಿದು ತತ್ವಜ್ಞಾನದಿಂದ ತಿಳಿದವರು ನೀಡುವ ದಾನ ಶ್ರೇಷ್ಠ ವಾದದ್ದು.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group