spot_img
spot_img

ಅ.23ರಂದು ಕು.ನಿಮಿಷ ಮತ್ತು ಕು.ಅಕ್ಷಯಾ ಭರತನಾಟ್ಯ ರಂಗಪ್ರವೇಶ

Must Read

- Advertisement -

ನಿರಂತರ ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ (ರಿ) ಸಂಸ್ಥೆಯ, ನಿರಂತರ ಸ್ಕೂಲ್ ಆಫ್ ಡ್ಯಾನ್ಸ್ ಶಾಲೆಯ ಶ್ರೀ ಸೋಮಶೇಖರ್ ಚೂಡನಾಥ್ ಹಾಗೂ ಶ್ರೀಮತಿ ಸೌಮ್ಯ ಸೋಮಶೇಖರ್ ರವರ ಶಿಷ್ಯರಾದ ಕು. ಎಸ್. ನಿಮಿಷ  ಮತ್ತು ಕು. ಎ. ಅಕ್ಷಯಾ ರವರ ಭರತನಾಟ್ಯ ರಂಗಪ್ರವೇಶವನ್ನು ನಗರದ ಮಲ್ಲೇಶ್ವರದ ಸೇವಾ ಸದನದಲ್ಲಿ ದಿ. 23, ಭಾನುವಾರ ಸಂಜೆ 5.30 ಕ್ಕೆ ಆಯೋಜಿಸಲಾಗಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗುರುಗಳಾದ ಡಾ. ಸುಪರ್ಣಾ ವೆಂಕಟೇಶ್, ಡಾ. ವಿದ್ಯಾ ಶಿಮ್ಲಡ್ಕರ್, ಶ್ರೀಮತಿ ಲೀಲಾವತಿ ಉಪಾಧ್ಯಾಯ ಹಾಗೂ ಶ್ರೀಮತಿ ಶ್ರೀವಿದ್ಯಾ ಆನಂದ್ ರವರು ಭಾಗವಹಿಸಲಿದ್ದಾರೆ.

- Advertisement -

ಸೋಮಶೇಖರ್ ಚೂಡಾನಾಥ್ ಮತ್ತು ಶ್ರೀಮತಿ ಸೌಮ್ಯ ಸೋಮಶೇಖರ್ ದಂಪತಿಗಳು ನಿರಂತರ ಕಲ್ಚರಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅನ್ನು 2012 ರಲ್ಲಿ ಸ್ಥಾಪಿಸಿ, ನಿರಂತರ ಸ್ಕೂಲ್ ಆಫ್ ಡ್ಯಾನ್ಸ್ ಎಂಬ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. 2015 ರಿಂದ ಸಂಸ್ಥೆಯ ಮೂಲಕ ಬೆಂಗಳೂರು ಮತ್ತು ಕೋಲಾರದ ಮಕ್ಕಳಿಗೆ ಭರತನಾಟ್ಯ ಶಿಕ್ಷಣವನ್ನು ನೀಡುತ್ತ ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ. ಹಲವಾರು ಪ್ರತಿಭಾವಂತ ವಿಧ್ಯಾರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಗೊಂಡು ತಮ್ಮ ನೃತ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ. “ನಿರಂತರ ನೃತ್ಯೋತ್ಸವ”ವೆಂಬ ಶೀರ್ಷಿಕೆಯಡಿ ನೃತ್ಯೋತ್ಸವವನ್ನು ಪ್ರಾರಂಭಿಸಿ ರಾಜ್ಯದ ಹಾಗೂ ದೇಶದ ಹಲವೆಡೆಗಳಿಂದ ಕಲಾವಿದರ ಕಾರ್ಯಕ್ರಮಗಳನ್ನು ಪಾಯೋಜಿಸುತ್ತಿದ್ದಾರೆ.

ಹಲವಾರು ರಾಷ್ಟ್ರೀಯ ಮತ್ತು ಇಂಟರ್ ನ್ಯಾಷನಲ್ ನೃತ್ಯ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ICCR ಪ್ರಾಯೋಜಿತ EFCEP, ಚೆನ್ನೈನಲ್ಲಿ ಡಿಸೆಂಬರ್ ಋತುವಿನ ಉತ್ಸವ, ಹಂಪಿ ಉತ್ಸವ, ಅಕಾಡೆಮಿ ಆಫ್ ಮ್ಯೂಸಿಕ್ ಆಯೋಜಿಸಿದ ಮಾರ್ಗಮ್ ಉತ್ಸವದಂತಹ ಪ್ರತಿಷ್ಠಿತ ಉತ್ಸವಗಳಲ್ಲಿ ಅವರ ಪ್ರದರ್ಶನಗಳನ್ನು ಭಾರತದಲ್ಲಿ ಪ್ರದರ್ಶಿಸಲಾಗಿದೆ. ಅವರು  SALISBURY INTERNATIONAL Dance Festival-U.K, American Folk Festival- U.S.A ನಲ್ಲಿ ಪ್ರದರ್ಶನ ನೀಡಿದ್ದಾರೆ. ದಂಪತಿಗಳು ತಮ್ಮ ಬೋಧನಾ ಚಟುವಟಿಕೆಗಳನ್ನು ಶಾಲೆಗಳು, ಕಾಲೇಜುಗಳು, ಕಾರ್ಪೊರೇಟ್ ಕಂಪನಿಗಳಿಗೆ ನೃತ್ಯ ಸಂಯೋಜನೆ  ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಾರೆ.

- Advertisement -
- Advertisement -

Latest News

ಮನುಷ್ಯನಿಗೆ ಹಣ, ಆಸ್ತಿ ಬೇಕಾಗಿಲ್ಲ, ಬದುಕುವ ಛಲ ಇರಬೇಕು – ಬಸವರಾಜ ಮಡಿವಾಳ

ಮೂಡಲಗಿ: ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಮಡಿವಾಳ ಸಮಾಜ ಬಾಂಧವರಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group