ಕುಮಾರಸ್ವಾಮಿ ವಿರುದ್ಧ ಆರ್ ಎಸ್ ಎಸ್ ಶಕ್ತಿ ಪ್ರದರ್ಶನ

Must Read

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ರಾತ್ರಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ವಿರುದ್ಧ ಆರ್ ಎಸ್ ಎಸ್ ಶಕ್ತಿ ಪ್ರದರ್ಶನ ನೀಡಲಾಯಿತು. ಆರ್ ಎಸ್ ಎಸ್ ವಿರುದ್ಧ ಇತ್ತೀಚೆಗೆ ಕುಮಾರ ಸ್ವಾಮಿ ಹೇಳಿಕೆ ಇಡೀ ದೇಶ, ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ್ಲ ಆಗಿದ್ದು ಸಂಚಲನ ಮೂಡಿಸಿತ್ತು. ಆರ್ ಎಸ್ ಎಸ್ ನಿಂದ ೪೦೦೦ ಐಪಿಎಸ್ ಮತ್ತು ಐ ಏ ಎಸ್ ಅಧಿಕಾರಿ ಇದ್ದಾಗ ಎಂದು ಈ ಹೇಳಿಕೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಹಿನ್ನೆಲೆಯಲ್ಲಿ ಇಂದು ಬೀದರ್ ಜಿಲ್ಲೆಯ ಹುಮನಬಾದ ಪಟ್ಟಣದಲ್ಲಿ ಆರ್ ಎಸ್ ಎಸ್ ಶಕ್ತಿ ಪ್ರದರ್ಶನ ನೀಡಿ ಮಾಜಿ ಮುಖ್ಯಮಂತ್ರಿಗೆ ಬಿಸಿ ಮುಟಿಸಿದರು.

ಈ ಆರ ಎಸ್ ಎಸ್ ಶಕ್ತಿ ಪ್ರದರ್ಶನದ ಉಸ್ತುವಾರಿ ವಹಿಸಿದ್ದ ಬಿಜೆಪಿಯ ಯುವ ಮುಖಂಡ ಸಿದ್ದು ಪಾಟೀಲ ಅವರು, ಕುಮಾರ ಸ್ವಾಮಿ ಅವರಿಗೆ ಆರ್ ಎಸ್ ಎಸ್ ಸಿದ್ದಾಂತ ಗೊತ್ತಿಲ್ಲದೆ ಹೋದರೆ ನಮ್ಮ ಹುಮನಬಾದನಲ್ಲಿ ನಾವು ಇಂದು ನೀಡಿದ ಆರ್ ಎಸ್ ಎಸ್ ಪಥ ಸಂಚಲನ ನೋಡಿ ಕಲಿಯಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದು ಪಾಟೀಲ ಮೂಲತಃ ಕಾಂಗ್ರೆಸ್ ಪಕ್ಷದವರೇ ಆಗಿದ್ದು ಎಂಟು ತಿಂಗಳ ಹಿಂದಷ್ಟೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಅವರಿಗೆ ಹಿಡಿಸಲಿಲ್ಲ ಎಂದು ಬಿಜೆಪಿಗೆ ಆಗಮಿಸಿದವರು. ಕುಮಾರ ಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ಹುಮನಾಬಾದ ಪಟ್ಟಣದಲ್ಲಿ ಆರ ಎಸ್ ಎಸ್ ಶಕ್ತಿ ಪ್ರದರ್ಶನ ನೀಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.

ಶಿಸ್ತುಬದ್ಧ, ಲಯಬದ್ಧ ಪಥಸಂಚಲನ, ಯಾವುದೇ ಉದ್ರೇಕಕಾರಿ ಘೋಷಣೆಗಳಿಲ್ಲದೆ ಭಾರತೀಯತೆ ಸಾರುವ ಆರ್ ಎಸ್ ಎಸ್ ಪಥ ಸಂಚಲನ ನಡೆದಿದ್ದು ಈ ಸಂಘಟನೆಯ ವಿರೋಧಿಗಳು ಮುಟ್ಟಿನೋಡಿಕೊಳ್ಳುವಂಥ ಉತ್ತರ ನೀಡಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group