ಬಂದಾಳದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಸಿಂದಗಿ: ಭಾರತೀಯ ನ್ಯಾಯಾಲಯ ವ್ಯವಸ್ಥೆಯ ಶ್ರೇಷ್ಠತೆಯನ್ನು ಎತ್ತಿಹಿಡಿಯಲು ಮತ್ತು ಬಡವರಿಗೆ, ಅಸಹಾಯಕರಿಗೆ, ಮಹಿಳೆ, ಮಕ್ಕಳು ಸೇರಿದಂತೆ ಎಲ್ಲವರ್ಗಗಳ ಜನರಿಗೆ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದ ಸೌಲಭ್ಯಗಳು ದೊರೆತು ಸಾರ್ಥಕತೆ ಪಡೆಯಲು ಎಲ್ಲರೂ ಕೈಜೊಡಿಸಿ ಸಮನ್ವಯತೆಯಿಂದ ಕಾರ್ಯಮಾಡಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್ ಬಿ ದೊಡಮನಿ ಹೇಳಿದರು.

ತಾಲೂಕಿನ ಬಂದಾಳ ಗ್ರಾಮದಲ್ಲಿ ಮಂಗಳವಾರ ರಂದು ತಾಲೂಕಾ ಕಾನೂನು ಸೇವಾ ಸಮೀತಿ , ವಕೀಲರ ಸಂಘ, ತಾಲೂಕಾ ವಿವಿಧ ಇಲಾಖೆಗಳ ಹಾಗೂ ವಿವಿಧ ಸಂಘ ಸಂಸ್ಥೆಗಳು ಸಿಂದಗಿ, ಇವರ ಸಹಯೋಗದಲ್ಲಿ “ಸ್ವತಂತ್ರ ಭಾರತದ ಅಮೃತ ಮಹೋತ್ಸವ”ದ ಪ್ರಯುಕ್ತ ಪ್ರತಿ ಹಳ್ಳಿ ಹಳ್ಳಿಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿ, ಸರಕಾರ ಕಾಯ್ದೆ ಕಾನೂನು ಅರಿವು ಮೂಲಕ ನ್ಯಾಯಾಲಯ ಬಡವರಿಗೆ ಉಚಿತ ಕಾನೂನು ವ್ಯವಸ್ಥೆಯ ಶ್ರೇಷ್ಠತೆಯನ್ನು ಎತ್ತಿಹಿಡಿಯಲು ಮತ್ತು ಬಡವರಿಗೆ ಕಾನೂನು ನೀಡುತ್ತದೆ. ಜನರಿಗೆ ಉಚಿತ ಕಾನೂನು ಅರಿವು ತಿಳುವಳಿಕೆ ಮೂಡಿಸಬೇಕು ಎಂದರು.

ಅಪರ ಸರಕಾರಿ ವಕೀಲರಾದ ಎಂ ಎಸ್ ಪಾಟೀಲ ಮಾತನಾಡಿ ಗ್ರಾಮದಲ್ಲಿ ಇರುವ ಸಮಸ್ಯೆಗಳು ಪರಿಹಾರ ಮಾಡಿ ಕೊಳ್ಳಲು ಸಂಬಂದ ಪಟ್ಟ ಇಲಾಖೆಗೆ ಗಮನ ಹರಿಸಬೇಕು.ಸಾರ್ವಜನಿಕರು ತಮ್ಮ ಸಮಸ್ಯೆ ಇದ್ದರೆ ಮಾಹಿತಿ ಹಕ್ಕು ಬಳಸಿಕೊಂಡು ಸಮಸ್ಯೆ ಪರಿಹರಿಸಬೇಕು. ಒಂದು ವೇಳೆ ತಮಗೆ ನ್ಯಾಯ ಸಿಗದೇ ಹೋದಲ್ಲಿ ಕಾನೂನು ಇಲಾಖೆಯ ಗಮನ ತರಬೇಕು ಎಂದರು.

- Advertisement -

ಸಹಾಯಕ ಸರಕಾರಿ ವಕೀಲರಾದ ಎ ಬಿ ಪಾಟೀಲ ಮಾತನಾಡಿ, ಪ್ರತಿ ಜನಾಂಗವು ತಮ್ಮ ಮಕ್ಕಳು ಜನನ ಹೊಂದಿದ ತಕ್ಷಣ ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬೇಕು. ಮರಣ ಹೊಂದಿರುವರ ಮರಣ ದಾಖಲೆ ಮಾಡಿಸಬೇಕು.ಒಂದು ವೇಳೆ ಜನನ ಮರಣ ಹೊಂದಿರುವ ವ್ಯಕ್ತಿಯ ಹೆಸರು ದಾಖಲೆ ಮಾಡದೇ ಪಕ್ಷದಲ್ಲಿ ಉಚಿತ ಕಾನೂನು ಸೇವೆ ಪಡೆದುಕೊಂಡು ಜನನ ಮರಣ ಮರಣ ಪತ್ರ ಪಡೆಯಬೇಕು. ಮನೆಯಲ್ಲಿ ವಾಹನ ಹೊಂದಿರುವ ಮಾಲಿಕರು ಹಾಗೂ ಇತರರು ತಪ್ಪದೆ ವಾಹನ ಚಲನ ಪ್ರಮಾಣ ಪತ್ರ ಹೊಂದಿರಬೇಕು.ತಮ್ಮ ಯಾವದೇ ವಸ್ತು ಹಾಗೂ ವಾಹನ ಕಳೆದುಹೋದ ಸಮಯದಲ್ಲಿ ತಕ್ಷಣ ಹತ್ತಿರ ಪೋಲೀಸ ಠಾಣೆಗೆ ಬೆಟ್ಟಿ ನೀಡಿ ತಮ್ಮ ಅರ್ಜಿ ಸಲ್ಲಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಗನವಾಡಿ ಸಹ ಅಧಿಕಾರಿ ಶ್ರೀಮತಿ ಎ.ಡಿ ಹಚ್ಚಡದ ಮಾತನಾಡಿ, ಗ್ರಾಮದಲ್ಲಿ ಬಾಲ್ಯವಿವಾಹ ಮಾಡುವದು ಕಾನೂನು ಪ್ರಕಾರ ಅಪರಾಧವಾಗುತ್ತದೆ ಆದ್ದರಿಂದ ಹೆಣ್ಣು ಮಕ್ಕಳಿಗೆ 18 ವಯೋಮಾನ ಹೊಂದಿದ ತದನಂತರ ಮದುವೆ ಮಾಡಬೇಕು. ಸರಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿರುತ್ತದೆ ಕಾರಣ ಸೌಲಭ್ಯ ಪಡೆದು ಕೊಳ್ಳಬೇಕು ಎಂದರು.

ಪಿ ಎಸ್ ಆಯ್ ನಿಂಗಣ್ಣ ಪೂಜಾರಿ ಮಾತನಾಡಿ, ಕಾನೂನು ಚೌಕಟ್ಟಿನಲ್ಲಿ ಸುಂದರ ಬದುಕು ಕಟ್ಟಿಕೊಂಡು ಸಮಾಜದಲ್ಲಿ ಬಾಳಬೇಕು ಎಂದರು.

ಗ್ರಾಮ ಹಿರಿಯರಾದ ಸಿದ್ದಣ್ಣ ಬೆನಕನಳ್ಳಿ ಸಭೆ ಅಧ್ಯಕ್ಷತೆವಹಿಸಿದ್ದರು.

ಗ್ರಾಮ ಪಂಚಾಯತ ಕಾರ್ಯದರ್ಶಿ ರಾಜೇಸಾಬ ಮುಜಾವರ ಸ್ವಾಗತಿಸಿ ವಂದಿಸಿದರು.

ಶಿಕ್ಷಕ ಬಸವರಾಜ ಅಗಸರ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಬಂದಾಳ ಗ್ರಾಮಸ್ಥರಿಂದ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ ಪ್ರಸಂಗ ನಡೆಯಿತು.


ಬಂದಾಳ ಗ್ರಾಮ ಪಂಚಾಯತ ಸಿಬ್ಬಂದಿವರು ಕಾನೂನು ಅರಿವು ನೆರವು ಕಾರ್ಯಕ್ರಮ ಪೂರ್ವ ಸಿದ್ದತೆ ಮಾಡುವಾಗ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಎ ಎ ದುರ್ಗದ ಅವರು ಸರಿಯಾಗಿ ಪಂಚಾಯತಿಗೆ ಬರುವದಿಲ್ಲಾ ಅವರು ಗ್ರಾಮದ ಸಮಸ್ಯೆಗಳನ್ನು ಆಲಿಸುವದಿಲ್ಲ ಆದ್ದರಿಂದ ತಾವು ನಮ್ಮ ಗ್ರಾಮದಲ್ಲಿ ಕಾರ್ಯಕ್ರಮ ಮಾಡಬೇಡಿ ಎಂದು ಅಡ್ಡಿಪಡಿಸಿದರು. ಕಾರ್ಯಕ್ರಮಕ್ಕೆ ಬಂದ ವಕೀಲರು ಪೋಲೀಸರಿಗೆ ಕರೆ ಮಾಡಿದಾಗ ಪಿ ಎಸ್ ಆಯ್ ನಿಂಗಣ್ಣ ಪೂಜಾರಿ ತಕ್ಷಣ ಗ್ರಾಮಕ್ಕೆ ಬಂದು ಜನರಿಗೆ ತಿಳಿಹೇಳಿ ಸುಗಮವಾಗಿ ಕಾರ್ಯಕ್ರಮ ಜರುಗಲು ನೆರವಾದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!