Homeಸುದ್ದಿಗಳುಬೀದರನಲ್ಲಿ ಚಿರತೆ ಪ್ರತ್ಯಕ್ಷ

ಬೀದರನಲ್ಲಿ ಚಿರತೆ ಪ್ರತ್ಯಕ್ಷ

ಬೀದರ – ಅರಣ್ಯ ಸಚಿವ ಈಶ್ವರ ಖಂಡ್ರೆಯವರ ತವರು ಜಿಲ್ಲೆ ಬೀದರ್ ನ ಹೊನ್ನೀಕೇರಿ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ಆತಂಕ ಮೂಡಿಸಿದೆ

ಬೀದರ್ ತಾಲೂಕಿನ ಹೊನ್ನೀಕೇರಿ ಮತ್ತು ಕಪಲಾಪುರ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಅರಣ್ಯ ಇಲಾಖೆಯವರು ಅಳವಡಿಸಿರುವ ಕ್ಯಾಮರಾದಲ್ಲಿ ಚಿರತೆಯ ಪೋಟೋ ಸೆರೆಯಾಗಿದೆ. ಹೀಗಾಗಿ ಸುತ್ತಮುತ್ತಲಿನ ಜನರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆಯ ‌ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇನ್ನೊಂದು ಕಡೆ ಚಿರತೆಯ ಬೆನ್ನು ಹತ್ತಿದ ಜನರು ಅದನ್ನು ಕಾಡಿನ ಕಡೆಗೆ ಓಡಿಸಿದ ವಿಡಿಯೋ ಹರಿದಾಡಿದೆ.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group