spot_img
spot_img

ಕಲಿಕೆ ಮಕ್ಕಳಿಗೆ ಹೊರೆ ಹಾಗೂ ಒತ್ತಡ ಉಂಟ ಮಾಡದೇ ಸಂತಸದಾಯಕವಾಗಿರಲಿ – ಗಣಪತಿ ಮಹಾರಾಜರು

Must Read

- Advertisement -

ಯರಗಟ್ಟಿ: “ಕಲಿಕೆ ಎಂಬುದು ಮಕ್ಕಳಿಗೆ ಹೊರೆ ಹಾಗೂ ಒತ್ತಡವನ್ನುಂಟು ಮಾಡದೇ ಆನಂದಮಯ ಚಟುವಟಿಕೆಯ ರೂಪದಲ್ಲಿರಬೇಕು ಎಂಬುದೇ ಕಲಿಕಾ ಹಬ್ಬದ ಉದ್ದೇಶವಾಗಿದೆ. ಮನಸ್ಸನ್ನು ಕಲಿಕೆಯೆಡೆಗೆ ಸೆಳೆಯುವ ವಿಭಿನ್ನವಾದ ಕಾರ್ಯಕ್ರಮ ಕಲಿಕಾ ಹಬ್ಬ ಕಾರ್ಯಕ್ರಮವಾಗಿದ್ದು, ಖುಷಿಯಿಂದ ಹಬ್ಬದ ವಾತಾವರಣ ಮೂಲಕ ಕಲಿಕೆಯಲ್ಲಿ ತೊಡಗುವ ಜೊತೆಗೆ ಮಕ್ಕಳು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಇದರಲ್ಲಿ ಅಳವಡಿಸಿಕೊಳ್ಳುವಂತಾಗಲಿ” ಎಂದು ಯರಗಟ್ಟಿಯ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು ಹೇಳಿದರು.

ಅವರು ಯರಗಟ್ಟಿಯಲ್ಲಿ ಜರುಗಿದ ಮಕ್ಕಳ ಕಲಿಕಾ ಹಬ್ಬದ ದಿವ್ಯಸಾನ್ನಿಧ್ಯ ವಹಿಸಿ ಜ್ಯೋತಿ ಬೆಳಗಿಸುವ ಮೂಲಕ ಮತ್ತು ಕಲಿಕಾ ಹಬ್ಬ ಎಂಬ ನಾಮಫಲಕವನ್ನು ಸ್ಪ್ರೇ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ ಮಾತನಾಡಿ “ಕಲಿಕಾ ಚೇತರಿಕೆ ಪೂರಕವಾಗಿ ಮಕ್ಕಳು ಚಟುವಟಿಕೆ ಮೂಲಕ ಸಂತೋಷದಾಯಕ ಕಲಿಕೆಯನ್ನು ಮಕ್ಕಳು ಕಲಿಯಬೇಕು ಎಂಬ ಹಿನ್ನೆಲೆಯಿಂದ ಸರ್ಕಾರ ಚಿಂತನೆ ಮಾಡಿದ್ದು, ಈ ಚಿಂತನೆ, ಸಲಹೆ ಹಾಗೂ ಮಾರ್ಗದರ್ಶನದಡಿಯಲ್ಲಿ ಸವದತ್ತಿ ತಾಲ್ಲೂಕಿನಾದ್ಯಂತ ಕಲಿಕಾ ಹಬ್ಬದ ವಾತಾವರಣವನ್ನು ತುಂಬಾ ಉತ್ಸಾಹ, ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಕಲಿಕಾ ಹಬ್ಬದಿಂದ ಮಕ್ಕಳ ಕಲಿಕೆಗೆ ಪ್ರೋತ್ಸಾಹ ಹಾಗೂ ಉತ್ತಮ ಭವಿಷ್ಯ ರೂಪುಗೊಳ್ಳುತ್ತಿದೆ.. ಎಲ್ಲ ಮಕ್ಕಳು ಎರಡು ದಿನಗಳ ಕಾಲ ಚಟುವಟಿಕೆಗಳಲ್ಲಿ ಪೂರ್ಣವಾಗಿ ಭಾಗವಹಿಸಿ” ಎಂದು ಹೇಳಿದರು.

- Advertisement -

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಬಿ.ಪಾಣಿಶೆಟ್ಟಿ “ಕಲಿಕಾ ಹಬ್ಬ ಮಕ್ಕಳ ಮನಸ್ಸನ್ನು ಯಾವಾಗಲೂ ಅರಳುವ ಹಾಗೇ ಇಟ್ಟುಕೊಂಡು ಕಲಿಸುವ ಕೆಲಸವಾಗಿದೆ. ಕಲಿಕಾ ಹಬ್ಬ ಚಟುವಟಿಕೆ ಆಧಾರಿತವಾಗಿದ್ದು, ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳನ್ನು ಕಲಿಯುವ ನಿಟ್ಟಿನಲ್ಲಿ. ಆಟ ಆಡುವ ಮೂಲಕ ಪಾಠ ಕಲಿಯುವ ಕೆಲಸವಾಗುತ್ತಿದೆ. ಇಲ್ಲಿ ಮಗು ಮಾಡು-ಆಡು,ಊರು ತಿಳಿಯೋಣ. ಕಾಗದ-ಕತ್ತರಿ,ಆಡು-ಹಾಡು. ಎಂಬ ನಾಲ್ಕು ರೀತಿಯ ಚಟುವಟಿಕೆಗಳಲ್ಲಿ ಪ್ರತಿ ತಂಡದಲ್ಲಿ ೩೦ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಳ್ಳುವ ಮೂಲಕ ನಾವಿಣ್ಯಪೂರ್ಣ ವಿಚಾರಗಳನ್ನು ಕಲಿಯುವರು”ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶ್ರೀಮಂತ ಅಜಿತಕುಮಾರ ದೇಸಾಯಿ/ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ, ಮುಖ್ಯೋಪಾಧ್ಯಾಯರಾದ ಎ.ಎ.ಮಕ್ತುಂನವರ, ಶಿಕ್ಷಣ ಸಂಯೋಜಕರಾದ ಎಂ.ಡಿ.ಹುದ್ದಾರ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ.ಬಿ.ಕಡಕೋಳ, ಪಟ್ಟಣ ಪಂಚಾಯತಿ ನಾಮ ನಿರ್ದೇಶಿತ ಸದಸ್ಯರಾದ ಮಹಾಂತೇಶ ಜಕಾತಿ,ವಿಶಾಲಗೌಡ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಎಂ.ಕಾಮನ್ನವರ, ಪ್ರಕಾಶ ಪಾಟೀಲ, ಪೃಥ್ವಿ ಸೆಂಟ್ರಲ್ ಸ್ಕೂಲ್ ಅಧ್ಯಕ್ಷರಾದ ಲಕ್ಷ್ಮೀ ಕಳ್ಳಿಗುದ್ದಿ, ಕಲಿಕಾ ಹಬ್ಬ ನೋಡಲ್ ವ್ಹಿ.ಸಿ.ಮಡ್ಡಿ, ಬಸವೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಎಸ್.ಆಲದಕಟ್ಟಿ, ತಲ್ಲೂರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಗುರುದೇವಿ ಮಲಕಣ್ಣವರ, ಸತ್ತೀಗೇರಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಬಾಳೇಶ ಸಿದ್ದಬಸನ್ನವರ, ಯರಝರ್ವಿ ಸಂಪನ್ಮೂಲ ವ್ಯಕ್ತಿಗಳಾದ ಅರ್ಜುನ ಮುಳ್ಳೂರ, ಶಿವಾಪುರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎಂ.ಮಲಕಣ್ಣವರ, ಯರಗಟ್ಟಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಎಸ್.ಬಡಿಗೇರ, ಕಲಿಕಾ ಹಬ್ಬದ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಲಲಿತಾ ನಾಯಕೋಡಿ, ವಿದ್ಯಾರ್ಥಿ ಪ್ರತಿನಿಧಿ ಲಕ್ಷ್ಮೀ ದಂಡೆಪ್ಪಗೋಳ, ಮರುಳಾದೇವಿ ಮಹಿಳಾ ಸಂಘದ ಪದಾಧಿಕಾರಿಗಳು, ಆದಿಶಕ್ತಿ ಮಹಿಳಾ ಸಂಘದ ಪದಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಸಂದ್ಯಾರಾಣಿ ಗದಿಗೆಪ್ಪಗೋಳ, ಎಸ್.ಬಿ.ಗೂರನವರ, ಬಿ.ಎಂ.ಸರದಾರ, ಎಸ್.ಬಿ.ಪಾಣಿಶೆಟ್ಟಿ, ಎಂ.ಎಸ್.ಅತ್ತಾರ, ಆರ್.ಎ.ಗಂಗೂರ, ಎಂ.ಎಲ್.ದಿಲಾವರನಾಯ್ಕ, ಉಮಾ ಜೋಶಿ ಸೇರಿದಂತೆ ಯರಗಟ್ಟಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.

- Advertisement -

ಕಾರ್ಯಕ್ರಮದ ಪ್ರಾರಂಭದಲ್ಲಿ ಯರಗಟ್ಟಿಯ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಲಿಕಾ ಹಬ್ಬದ ಅಕ್ಷರ ತೇರು ವಿವಿಧ ಮಜಲುಗಳು ವಿದ್ಯಾರ್ಥಿಗಳ ವೇಷ ಭೂಷಣಗಳೊಂದಿಗೆ ಮೆರವಣಿಗೆ ರೂಪದಲ್ಲಿ ಗ್ರಾಮದಲ್ಲಿ ಸಂಚರಿಸುತ್ತ ಬಸ್ ನಿಲ್ದಾಣದ ಮಾರ್ಗವಾಗಿ ಮತ್ತೆ ಶಾಲಾ ಆವರಣಕ್ಕೆ ಬಂದಿತು. ಈ ಸಂದರ್ಭದಲ್ಲಿ ಮಕ್ಕಳು ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ ರಾಷ್ಟ್ರೀಯ ನಾಯಕರ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳಿಂದ ಕಂಗೊಳಿಸುತ್ತಿದ್ದರೆ, ಟ್ರಾಕ್ಟರ್, ಚಕ್ಕಡಿಗಳಲ್ಲಿ ರೈತ ಹಾಗೂ ವಿವಿಧ ವೇಷಭೂಷಣಗಳಲ್ಲಿ ವಿದ್ಯಾರ್ಥಿಗಳು ಕಂಗೊಳಿಸುತ್ತಿದ್ದರು.

ಡೊಳ್ಳು, ಝಾಂಜ ಪಥಕ, ಕರಡಿ ಮಜಲು,ಕುಂಭ ಮತ್ತು ಆರತಿಯನ್ನು ಹಿಡಿದ ವಿದ್ಯಾರ್ಥಿನಿಯರು ದಾರಿಯುದ್ದಕ್ಕೂ ಗಮನ ಸೆಳೆದರು. ಈ ರಥದ ನೇತೃತ್ವವನ್ನು ಗಣಪತಿ ಮಹಾರಾಜರು ವಹಿಸಿದ್ದರಿಂದ ಗ್ರಾಮದ ಮನೆಮನೆಗಳಲ್ಲಿನ ಮಹಿಳೆಯರು ರಥಕ್ಕೆ ನೀರು ಹಾಕಿ ನೈವೇದ್ಯ ಮಾಡಿ ಪೂಜ್ಯರನ್ನು ನಮಸ್ಕರಿಸುವ ಮೂಲಕ ಸ್ವಾಗತಗೈಯುತ್ತಿರುವುದು ಕಂಡು ಬಂದಿತು. ಜೊತೆಗೆ ಅನೇಕ ಮನೆಗಳ ಮುಂದೆ ಕಲಿಕಾ ಹಬ್ಬ ಎಂಬ ರಂಗವಲ್ಲಿ ಹಾಕಿದ್ದು ರಥದ ಸ್ವಾಗತಕ್ಕೆ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.ನಿವೃತ್ತ ಸೈನಿಕರಾದ ಕುಮಾರ ಹಿರೇಮಠ ಹಾಗೂ ಸಂಗಡಿಗರು ಅಭಿಮಾನದಿಂದ ಮಕ್ಕಳೊಡನೆ ಹೆಜ್ಜೆ ಹಾಕಿದ್ದರು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ರಮೇಶಗೌಡ ದೇವರಡ್ಡಿ ಅಭಿನಂದನಾ ಪತ್ರಗಳನ್ನು ಕೊಡುಗೆಯಾಗಿ ನೀಡಿದ್ದರೆ, ಲಕ್ಷ್ಮೀ ಕಳ್ಳಿಗುದ್ದಿಯವರು ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗುರುತಿನ ಚೀಟಿ ಒದಗಿಸಿದ್ದರು. ಮೊದಲ ದಿನದ ಮಕ್ಕಳಿಗೆ ಭೋಜನ ವ್ಯವಸ್ಥೆಯನ್ನು ಗಣ್ಯರಾದ ಅಜಿತಕುಮಾರ ದೇಸಾಯಿ ಮತ್ತು ಎರಡನೆಯ ದಿನದ ಭೋಜನ ವ್ಯವಸ್ಥೆಯನ್ನು ಯರಗಟ್ಟಿ ಪಟ್ಟಣ ಪಂಚಾಯತಿಯ ಸರ್ವರು ಏರ್ಪಾಟು ಮಾಡುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಪ್ರೋತ್ಸಾಹ ನೀಡಿರುವರು ಎಂದು ಮುಖ್ಯೋಪಾಧ್ಯಾಯರಾದ ಎ.ಎ.ಮಕ್ತುಮನವರ ತಿಳಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಯರಗಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಎಸ್.ಬಡಿಗೇರ ಸ್ವಾಗತಿಸಿದರು. ಶಿಕ್ಷಕ ಆರ್.ಕೆ.ಹುಣಸೀಕಟ್ಟಿ ನಿರೂಪಿಸಿದರು.ಎಸ್.ಬಿ.ಮಿಕಲಿ ವಂದಿಸಿದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group