spot_img
spot_img

ಬೆಳಗಾವಿ ಜಿಲ್ಲೆಯ ಸಂಸ್ಥಾನಗಳ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ

Must Read

- Advertisement -

ಬೆಳಗಾವಿ: ನಗರದ ಲಿಂಗರಾಜ ಮಹಾವಿದ್ಯಾಲಯದಲ್ಲಿ ‘ಬೆಳಗಾವಿ ಜಿಲ್ಲೆಯ ಸಂಸ್ಥಾನಗಳ’ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಲಿಂಗರಾಜ ಮಹಾವಿದ್ಯಾಲಯದ ಸಹಯೋಗದಲ್ಲಿ ಮಂಗಳವಾರ  ಜನವರಿ 24 ರಂದು ಹಮ್ಮಿಕೊಳ್ಳಲಾಗಿದೆ.

ವಿಚಾರ ಸಂಕಿರಣದಲ್ಲಿ ಬೆಳಗಾವಿ ಜಿಲ್ಲೆಯ ಸಂಸ್ಥಾನಗಳು ಮತ್ತು ದೇಸಗತಿಗಳ ಬಗೆಗೆ ಇಪ್ಪತ್ತು ಪತ್ರಿಕೆಗಳು ಮಂಡನೆಯಾಗಲಿವೆ. ವಿಚಾರ ಸಂಕಿರಣವನ್ನು ಮಾಜಿ ಮುಖ್ಯಸಚೇತಕರಾದ ಮಹಾಂತೇಶ ಕವಟಗಿಮಠ ಅವರು ಉದ್ಘಾಟಿಸುವರು. ಪ್ರೊ. ಎಚ್. ವಾಯ್. ಕಾಂಬಳೆ ಪ್ರಭಾರ ಕುಲಪತಿಗಳು ಕಾರ್ಯಾಕ್ರಮದ ಮುಖ್ಯ ಅತಿಥಿಗಳಾಗಿರುವರು. ಡಾ. ಬಾಳಣ್ಣ ಶೀಗಿಹಳ್ಳಿ ಅವರು ವಿಚಾರ ಸಂಕಿರಣದ ಆಶಯ ಭಾಷಣವನ್ನು ನಡೆಸಿಕೊಡುವರು.

ರಾಣಿ ಚನ್ನಮ್ಮ ಅಧ್ಯಯನ ಪೀಠದ ಅಧ್ಯಕ್ಷರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಅಧ್ಯಕ್ಷತೆಯನ್ನು ವಹಿಸುವರು. ಕುಲಸಚಿವರಾದ ಶ್ರೀಮತಿ. ಕೆ. ಟಿ. ಶಾಂತಲಾ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು. ಡಾ. ಹನುಮಂತ ಮೇಲಿಮನಿ ಸಮಾರೋಪ ಮಾತುಗಳನ್ನಾಡುವರು. ಪ್ರೊ. ಶಿವಾನಂದ ಗೊರನಾಳೆ, ಪ್ರೊ. ಎಸ್. ಬಿ. ಆಕಾಶ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

- Advertisement -

ಕಾರ್ಯಕ್ರಮವನ್ನು ಅಧ್ಯಯನ ಪೀಠದ ಸಂಯೋಜಕರಾದ ಡಾ. ಮಹೇಶ ಗಾಜಪ್ಪನವರ ಹಾಗೂ ಕಾರ್ಯದರ್ಶಿಗಳಾದ ಡಾ. ಹೊಳೆಬಸು ಚನ್ನಪ್ಪಗೋಳ ಅವರು ಸಂಘಟಿಸಿರುವರು. ಈ ಸಂದರ್ಭದಲ್ಲಿ ಮಂಡನೆಯಾಗಲಿರುವ ವಿಷಯ ಸಂಗೋಷ್ಠಿಗಳೆಂದರೆ ರಟ್ಟರ ಸಂಸ್ಥಾನ ಕುರಿತು ಕೆ.ರಾಮರಡ್ಡಿ, ಕಿತ್ತೂರ ಸಂಸ್ಥಾನ ಕುರಿತು ಡಾ.ಎ.ಬಿ.ವಗ್ಗರ, ವಂಟಮುರಿ ಸಂಸ್ಥಾನ ಕುರಿತು ಯ.ರು.ಪಾಟೀಲ, ಕಾಕತಿ ಸಂಸ್ಥಾನ ಕುರಿತು ಡಾ.ಗಜಾನನ ಸೊಲಗನ್ನವರ, ಬೆಳವಡಿ ಸಂಸ್ಥಾನ ಕುರಿತು ನೀಲಗಂಗಾ ಚರಂತಿಮಠ, ಶಿರಸಂಗಿ ಸಂಸ್ಥಾನ ಕುರಿತು ಡಾ.ಪಿ.ಜಿ.ಕೆಂಪನ್ನವರ, ಚಚಡಿ ಸಂಸ್ಥಾನ ಕುರಿತು ಡಾ.ವೀರಭದ್ರಯ್ಯ ಹಿರೇಮಠ, ರಾಮದುರ್ಗ ಸಂಸ್ಥಾನ ಕುರಿತು ಡಾ.ಕೆ.ಆರ್.ಮೆಳವಂಕಿ, ತಲ್ಲೂರ ಸಂಸ್ಥಾನ ಕುರಿತು ಡಾ.ಗೀತಾಂಜಲಿ ಕುರಡಗಿ, ಮಂಗಸೂಳಿ ಸಂಸ್ಥಾನ ಕುರಿತು ಡಾ.ಎಂ.ಎಸ್.ಉಕ್ಕಲಿ ಹಾಗೂ ಡಾ.ಆರ್.ಬಿ.ಕೊಕಟನೂರ, ರುದ್ರಾಪುರ ಮತ್ತು ತುರಮರಿ ಸಂಸ್ಥಾನಗಳ ಕುರಿತು ಡಾ.ಮಹೇಶ ಅಂಗಡಿ, ಶಿಂಧಿಕುರಬೇಟ ಮತ್ತು ಕೌಜಲಗಿ ಸಂಸ್ಥಾನಗಳ ಕುರಿತು ಡಾ.ಸುರೇಶ ಹನಗಂಡಿ, ಕೊಕಟನೂರ ಸಂಸ್ಥಾನ ಕುರಿತು ಡಾ.ಮಹಾನಂದಿ ಗೊಂದಿ, ನೇಗಿನಹಾಳ ಸಂಸ್ಥಾನ ಕುರಿತು ಡಾ.ಮೀನಾಕ್ಷಿ ಅಶೋಕುಮಾರ್. ಅಮ್ಮಣಗಿ ಮತ್ತು ಮಸ್ತಿ ಸಂಸ್ಥಾನ ಕುರಿತು ಡಾ.ಆನಂದ ಜಕ್ಕಣ್ಣವರ, ನಿಪಾಣಿಕರ್ ಸಂಸ್ಥಾನ ಕುರಿತು ಡಾ.ವಿಜಯಮಾಲಾ ನಾಗನೂರಿ ವಿಷಯ ಮಂಡಿಸುವರು. ಪ್ರೊ. ಆರ್. ಎಂ. ಷಡಕ್ಷರಯ್ಯ ಹಾಗೂ ಯ. ರು. ಪಾಟೀಲ ಅವರು ಹಾಜರಿರುವರು. ಆಸಕ್ತರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಿಶ್ವವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -
- Advertisement -

Latest News

ಹಾಲವಾಣ(ಹೊಂಗಾರಕ)

ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು....
- Advertisement -

More Articles Like This

- Advertisement -
close
error: Content is protected !!
Join WhatsApp Group