ಸದೃಢ ಭಾರತ ಕಟ್ಟೋಣ

Must Read

ಸದೃಢ ಭಾರತ ಕಟ್ಟೋಣ

ಸುತ್ತಲೂ ಸಾಂಕ್ರಾಮಿಕ ರೋಗದ ಕಗ್ಗತ್ತಲು,

ದಿನನಿತ್ಯವೂ ಸಾವುಗಳ ಆಕ್ರಂದನ ,
ಬಡವರ-ರೋಗಿಗಳ ಆಕ್ರಂದನ ,
ಶಾಲೆಯತ್ತ ತೆರಳದ ಮಕ್ಕಳು,
ಕೆಲಸಗಳ ಬಿಟ್ಟು ಜೀವದಾಸೆಗಾಗಿ
ಮನೆಯಲ್ಲಿ ಬಂಧಿಯಾದ ಶ್ರೀಸಾಮಾನ್ಯರು…..

ಯುವ ಜನರೇ , ಏತಕೆ ಆತಂಕ ?
ಕಗ್ಗತ್ತಲ ನೋಡಿ ಬೆಚ್ಚಬೇಡಿ ; ಬೆದರಬೇಡಿ ,
ನಾಳೆ ಅಭ್ಯುದಯದ ಸೂರ್ಯ ಉದಯಿಸುತ್ತಾನೆ ,
ಇಂದಿನ ಆತಂಕದ ಕಗ್ಗತ್ತಲ ನಿವಾರಿಸುತ್ತಾನೆ ,
ಆತಂಕಗಳ ತ್ಯಜಿಸಿ ,ಸುಂದರ ನಾಳೆಗಳ ನಂಬಿಕೆಯಿಡಿ…

ಭವಿಷ್ಯದ ಸಮಾಜ ನಿರ್ಮಾತೃಗಳು ನೀವು ,
ಸಮಾಜದ ಸುಭದ್ರ ಅಡಿಗಲ್ಲುಗಳು ನೀವು ,
ದುಃಖ,ಆತಂಕ,ಭಯಗಳ ಬಿಟ್ಟೇಳಿ,
ಉತ್ಸಾಹದ ಬುಗ್ಗೆಯಾಗಿ,
ನೀರಿನ ಸುಂದರ ಚಿಲುಮೆಯಂತೆ
ಸಂತಸದಿಂದ ಚಿಮ್ಮಿಬಿಡಿ..

ಭಾರತಕೊಂದು ಸುಂದರ ಇತಿಹಾಸವಿದೆ ,
ಕನಕ,ಪುರಂದರ,ಪುರಂದರದಾಸರ ಕೀರ್ತನೆಗಳ,
ಸರ್ವಜ್ಞ, ಬಸವಣ್ಣ ,ಅಕ್ಕಮಹಾದೇವಿ ವಚನಗಳ,
ಗಾಂಧೀಜಿ, ಟ್ಯಾಗೋರ್,ವಿಶ್ವೇಶ್ವರಯ್ಯ, ಕಲಾಂರ ಸಾಧನೆಗಳ
ಸುಂದರ,ಸುಭದ್ರ ,ಭವ್ಯ ಅಡಿಪಾಯವಿದೆ…

ಆರ್ಯಭಟ,ಸಿ.ವಿ.ರಾಮನ್ನರ ವೈಜ್ಞಾನಿಕ ಚಿಂತನೆ ,
ಮೈಸೂರು ಅರಸರ ಕಾಯಕತತ್ವ ,
ಪಾಟೀಲ ಪುಟ್ಟಪ್ಪ,ಅನಕೃ,,ಮನಾ ರಾಮಮೂರ್ತಿಗಳ
ಅಪ್ರತಿಮ ನಾಡಭಕ್ತಿ,ಭಾಷಾಪ್ರೇಮ
ನಿಮ್ಮನು ಉತ್ಸಾಹದ ಗಣಿಯಾಗಿ ಮಾಡಲಿ…

ಕಿತ್ತೂರು ಚೆನ್ನಮ್ಮ ,ಕೆಳದಿ ಚೆನ್ನಮ್ಮ ,
ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವರ
ಅಪ್ರತಿಮ‌ ರಾಷ್ಟ್ರಭಕ್ತಿ ನಿಮ್ಮದಾಗಲಿ,
ವ್ಯರ್ಥ ಸುತ್ತಾಟ ,ದುಶ್ಚಟಗಳಲಿ ಕಾಲಹರಣ ಕೈಬಿಡಿ,
ಕಾಯಕ ತತ್ವಕೆ ಮಹತ್ವ ಕೊಡಿ ,
ಸುಂದರ-,ಸಧೃಡ ಭಾರತವ ಕಟ್ಟೋಣ ,
ಜಾತಿ,ಮತ,ಧರ್ಮಗಳ ಮರೆತು
ಆರೋಗ್ಯಪೂರ್ಣ ಭಾರತವ‌ ರೂಪಿಸೋಣ….

(ಸ್ವಾತಂತ್ರ್ಯೋತ್ಸವದ ವಜ್ರಮಹೋತ್ಸವದ ಅಂಗವಾಗಿ ರಚಿಸಿದ ಕವನ)


ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group