spot_img
spot_img

ಶೃದ್ಧಾ ಭಕ್ತಿಯಿಂದ ರಾಜ್ಯೋತ್ಸವ ಆಚರಿಸೋಣ – ತಹಶಿಲ್ದಾರ ಹಿರೇಮಠ

Must Read

spot_img
- Advertisement -

ಸಿಂದಗಿ: ಕನ್ನಡ ಸಂಸ್ಕೃತಿ, ಪರಂಪರೆಗೆ ಹೆಚ್ಚಿನ ಸ್ಥಾನಮಾನಗಳು ಇದ್ದರು ಅವೆಲ್ಲ ಇಂದು ಜಾಗತಿಕ ವಿದ್ಯಮಾನಗಳ ಮಧ್ಯೆ ಸಿಲುಕಿ ಸೊರಗುತ್ತಿವೆ ಅದನ್ನು ಬಡಿದ್ದೆಬ್ಬಿಸುವ ಕಾರ್ಯ ಪ್ರತಿ ಕನ್ನಡಿಗನದಾಗಿರಬೇಕು ಕನ್ನಡರಾಜ್ಯೋತ್ಸವ ಪ್ರತಿ ಕನ್ನಡಿಗನ ಹಾಗೂ ಕರುನಾಡಿನ ಹೆಮ್ಮೆಯ ದಿನ ಆ ದಿನದ ಕಾರ್ಯಕ್ರಮವನ್ನು ಶ್ರದ್ದಾ ಭಕ್ತಿಯಿಂದ ನಾವೆಲ್ಲ ಆಚರಿಸಬೇಕೆನ್ನುವ ನಿಟ್ಟಿನಲ್ಲಿ ಪಟ್ಟಣದಲ್ಲಿ ನವಂಬರ 1 ರಂದು ಅರ್ಥ ಪೂರ್ಣವಾದ ಕನ್ನಡರಾಜ್ಯೋತ್ಸವವನ್ನು ಆಚರಿಸಲು ಎಲ್ಲರು ಸಹಕರಿಸಬೇಕು ಎಂದು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.

ಪಟ್ಟಣದ ತಾಪಂ ಸಭಾ ಭವನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಕುರಿತು ಹಮ್ಮಿಕೊಂಡ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಸಾಹಿತಿಗಳು, ಜನಪದ ಸಾಹಿತಿಗಳು, ರೈತರು ಹಾಗೂ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಕಾರ್ಯಕ್ರಮದ ಮುಂಚಿತವಾಗಿ ಕನ್ನಡ ವಿಷಯದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ದ್ವಿತೀಯ ಪರಿಕ್ಷೇಯಲ್ಲಿ 100 ಕ್ಕೆ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ತಾಲೂಕಿನಲ್ಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತರಿಗೆ, ಕೃಷಿ ಜೊತೆಗೆ ಕನ್ನಡ ಸಂಸ್ಕೃತಿಯನ್ನು ಪಸರಿಸುವ ರೈತರಿಗೆ, ನಿವೃತ್ತ ಯೋಧರಿಗೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದ ನಂತರ ತಾಲೂಕಿನ ಎಲ್ಲ ಕನ್ನಡ ಮನಸ್ಸುಗಳು ಮತ್ತು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ತಾಲೂಕಿನ ಎಲ್ಲ ಪಿಡಿಓಗಳೂ ಗ್ರಾಪಂ ಯಲ್ಲಿ ಆಚರಿಸಿ ಶಾಲಾ ಮಕ್ಕಳಿಂದ ಪ್ರಭಾತಪೇರಿ ನಡೆಸಿ ಕನ್ನಡದ ಹಿರಿಮೆಯನ್ನು ಮೆರೆಯಬೇಕು ಎಂದು ಎಚ್.ಜಿ.ಪಪೂ ಕಾಲೇಜಿ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಸಲಹೆ ನೀಡಿದರು.

- Advertisement -

ಪಟ್ಟಣದ ಎಲ್ಲ ಸರಕಾರಿ ಬಸ್ಸುಗಳಿಗೆ, ಆಟೋಗಳಿಗೆ ಕನ್ನಡದ ಧ್ವಜ ಜೋಡಿಸುವದಲ್ಲದೆ ರಸ್ತೆಯ ಮಧ್ಯದಲ್ಲಿರುವ ವಿದ್ಯುತ್ ಕಂಬಗಳಿಗೆ ಬಂಟಿಂಗ್ಸ್ ಗಳನ್ನು ಅಳವಡಿಸಬೇಕು ಎಂದು ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗ ಚೌದರಿ ಹೇಳಿದರು.

ಪಟ್ಟಣದ ಕನ್ನಡಾಂಬೆ ವೃತ್ತದಿಂದ ವೇದಿಕೆಯವರೆಗೆ ಡೊಳ್ಳು ಕುಣಿತ, ಕೋಲಾಟ, ಲೇಜಿಮು, ಚಿಟ್ ಹಲಗೆ ಸೇರಿದಂತೆ ಜನಪದ ಕಲಾ ತಂಡಗಳು, ಕನ್ನಡಪರ ಸಂಗೀತವಾಧ್ಯಗಳನ್ನು ಅಳವಡಿಸುವಂತೆ ಎಲ್ಲ ಕನ್ನಡ ಮನಸ್ಸುಗಳಿಗೆ ವಿನಂತಿಸಿದರು.

ವೇದಿಕೆ ಮೇಲೆ ತಾಪಂ ಇಓ ರಾಮು ಅಗ್ನಿ, ಸಿಪಿಐ ಡಿ.ಹುಲಗೆಪ್ಪ, ತಾಪಂ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ ಇದ್ದರು.

- Advertisement -

ಸಭೆಯಲ್ಲಿ ಕಸಾಪ ಗೌರವಾದ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಲಿಂಬೆ ಅಭಿವೃದ್ದಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪುರ, ಸಿ.ಎಂ.ದೇವರಡ್ಡಿ, ಕೃಷಿ ಅಧಿಕಾರಿ ಡಾ. ಎಚ್.ವೈ.ಸಿಂಗೆಗೋಳ, ಅಕ್ಷರ ದಾಸೋಹ ಅಧಿಕಾರಿ ಎಸ್.ಎಸ್.ಕತ್ನಳ್ಳಿ, ಜಿಪಂ ಅಧಿಕಾರಿ ಅಶೋಕ ಪಾಟೀಲ, ನಿವೃತ್ತ ಯೋಧ ಶ್ರೀಶೈಲ ಯಳಮೇಲಿ, ಅಬಕಾರಿ ಅಧಿಕಾರಿ ಆರತಿ ಖೈನೂರ, ಸೇರಿದಂತೆ ಇತರರು ಇದ್ದರು. 

ಕಾರ್ಯಕ್ರಮವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಜಶೇಖರ ಕೊರವಾರ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group