ಸತ್ಪುರುಷರ ವಾಣಿ ಆಲಿಸಿದರೆ ಜೀವನ ಸಾರ್ಥಕ – ಹಾಸಿಂಪೀರ

Must Read

ಸಿಂದಗಿ: ಶರಣರ ಸತ್ಪುರುಷರ ವಾಣಿ ಆಲಿಸಿದರೆ ಮನುಷ್ಯನ ಜೀವನ ಸಾರ್ಥಕ ಎಂದು ಕಸಪಾ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ತಾಲೂಕಿನ ಚಟ್ಟರಕಿ ರೇಣುಕಾಚಾರ್ಯ ಮಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡ ಗೋಲಗೇರಿ ಗೊಲ್ಲಾಳೇಶ್ವರ ಪುರಾಣ ಮಹಾಮಂಗಲೋತ್ಸವ ಹಾಗೂ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶರಣರು ಸಾವಿರಾರು ವರ್ಷಗಳ ಕಾಲ ಬಾಳಿ ಬೆಳಗಿದವರು. ಭಾರತೀಯ ಸಂಸ್ಕೃತಿ ಆಧ್ಯಾತ್ಮಿಕ ಚಿಂತನೆಗಾಗಿ ಬೆಳಗಿ ಬಂದಿದ್ದು, ಇಲ್ಲಿ ಯೋಗಿ ತ್ಯಾಗಿಗಳ ಆಗಿ ಹೋಗಿದ್ದಾರೆ. ನಮ್ಮ ನೆಮ್ಮದಿಯ ಬದುಕಿಗೆ ಪುರಾಣ ಪ್ರವಚನ ಪೂರಕವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ, ಹಬ್ಬ ಹರಿದಿನಗಳು ಸಾಮರಸ್ಯ ಮೂಡಿಸುತ್ತಿವೆ ಎಂದರು.

ಈ ವೇಳೆ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ ಹಾಗೂ ಡಾ.ಬಾಬು ರಾಜೇಂದ್ರ ನಾಯಕ ಮಾತನಾಡಿ, ಜೀವನದಲ್ಲಿ ಆರೋಗ್ಯವೇ ಭಾಗ್ಯ. ನಾವುಗಳೆಲ್ಲ ಇಂದು ಹೆಚ್ಚಿನ ಗಮನವನ್ನು ಆರೋಗ್ಯದೆಡೆಗೆ ಹರಿಸಬೇಕು. ನಮ್ಮ ದೈನಂದಿನ ಬದುಕಿನಲ್ಲಿ ಆರೋಗ್ಯದ ಕಾಳಜಿಯ ಜೊತೆಗೆ ಆದ್ಯಾತ್ಮಿಕ ಚಿಂತನೆಗಳನ್ನು ಆಲಿಸಬೇಕು. ಅದ್ಯಾತ್ಮದ ಅರಿವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಚಟ್ಟರಕಿ ಗ್ರಾಮವನ್ನು ವ್ಯಸನ ಮುಕ್ತ ಗ್ರಾಮವನ್ನಾಗಿ ಮಾಡಿ ಆರೋಗ್ಯವಾಗಿರಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಆಲಮೇಲ ಶ್ರೀಮಠದ ಚಂದ್ರಶೇಖರ ಶಿವಾಚಾರ್ಯರು, ಬಂಥನಾಳ ಶ್ರೀಮಠದ ಡಾ.ವೃಷಭಲಿಂಗ ಮಹಾಶಿವಯೋಗಿಗಳು ಆಶೀವರ್ಚನ ನೀಡಿ ಮಾತನಾಡಿದರು.

ಈ ವೇಳೆ ಸಿದ್ದಾರೂಢ ಶಾಲೆಯ ಮಕ್ಕಳಿಂದ ನೃತ್ಯ, ಸಂಗೀತ ಕಾರ್ಯಕ್ರಮ ಜರುಗಿದವು. ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಅಭಿನವ ರುದ್ರಮುನಿ ಶಿವಾಚಾರ್ಯರು, ಸಿಂದಗಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಪಿ.ಆರ್.ಚೌಕಿಮಠ, ಸದಾಶಿವ ಹಿರೇಮಠ, ಶಂಕರಲಿಂಗಯ್ಯ ಹಿರೇಮಠ, ಅಯ್ಯನಗೌಡ ಪಾಟೀಲ, ನಾಗಪ್ಪ ಶಿವೂರ, ದೊಡ್ಡಪ್ಪಗೌಡ ಪಾಟೀಲ, ಭೀಮಾಶಂಕರ ಪಟ್ಟಣಶೆಟ್ಟಿ, ಗಂಗಮ್ಮ ಪಾಟೀಲ, ಗಂಗವ್ವ ಚಟ್ಟರಕಿ, ಮಹಾದೇವಿ ತಳವಾರ, ಸರಸ್ವತಿ ನಾಟೀಕಾರ, ಮಲ್ಲನಗೌಡ ಪಾಟೀಲ, ಅನಿತಾ ಬಡಿಗೇರ, ಶಕೀಲ ಲಾಳಸಂಗಿ, ಶರಣಬಸು ಬೂದಿಹಾಳ, ಹಣಮಂತ ಪೂಜಾರಿ, ಭೀಮನಗೌಡ ಬಿರಾದಾರ, ಮಡ್ಡಪ್ಪ ಹಳ್ಳಿ, ಬಸವರಾಜ ಬಿರಾದಾರ, ಜೆಟ್ಟೆಪ್ಪ ಭಾಸ್ಕರ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಚಂದ್ರಶೇಖರ ನಾಗರಬೆಟ್ಟ, ಸಂಗನಗೌಡ ಪಾಟೀಲ ಅಗಸಬಾಳ, ನವೀನ ಶೆಳ್ಳಗಿ ಸೇರಿದಂತೆ ಚಟ್ಟರಕಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಶ್ರೀಮಠದ ಭಕ್ತರು ಇದ್ದರು.

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group