ಸಿಂದಗಿ: ಕುಸ್ತಿ ಕ್ರೀಡೆಗೆ ತನ್ನದೆಯಾದ ಇತಿಹಾಸವಿದೆ ೪೦-೫೦ ವರ್ಷಗಳ ಹಿಂದೆ ಕುಸ್ತಿ ಗರಡಿ ಮನೆ ತಯಾರಿಸಿದ ದಿ.ಆರ್.ಬಿ.ಬೂದಿಹಾಳ ಅವರು ದೇಶಿಯ ಕ್ರೀಡೆ ಕುಸ್ತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಿಂದಗಿಯನ್ನು ಕುಸ್ತಿ ಪಟುಗಳ ತವರು ಮನೆಯನ್ನಾಗಿ ಮಾಡಿದ್ದಾರೆ. ಅದು ನಶಿಸಿ ಹೋಗಬಾರದು ಅದನ್ನು ಮರು ಸ್ಥಾಪನೆ ಮಾಡಬೇಕೆನ್ನುವ ದಿಸೆಯಲ್ಲಿ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪಪೂ) ಬೆಂಗಳೂರು, ವಿಜಯಪುರ ಹಾಗೂ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಸಹಯೋಗದಲ್ಲಿ ಆಯೋಜಿಸಲಾದ ೨೦೨೫-೨೬ನೇ ಸಾಲಿನ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡಿ, ೨೭ ಜಿಲ್ಲೆಗಳಿಂದ ಸುಮಾರು ೬೪೫ ವಿದ್ಯಾರ್ಥಿಗಳು ಬಾಗವಹಿಸಿದ್ದು. ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಪಂದ್ಯಾವಳಿಯಿಂದ ಗ್ರಾಮೀಣ ಮಟ್ಟದ ಮಕ್ಕಳಿಗೆ ಪ್ರೇರೇಪಣೆ ನೀಡಿದಂತಾಗಿದೆ. ದೇಶಿಯ ಕ್ರೀಡೆಗಳಾದ ವ್ಹಾಲಿಬಾಲ, ಖೋಖೋ ಕಬಡ್ಡಿ, ಕುಸ್ತಿಯಂತಹ ಕ್ರೀಡೆಗಳು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇಶಿಯ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಮುಂಬರುವ ದಿನಗಳಲ್ಲಿ ರಾಷ್ಟ್ರ ಮಟ್ಟದ ವ್ಹಾಲಿಬಾಲ ಕ್ರೀಡಾಕೂಟ ಆಯೋಜಿಸುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಕೆ.ಹೊಸಮನಿ, ಪಪೂ ಕಾಲೇಜುಗಳ ದೈಹಿಕ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಟಿ.ಆರ್.ಬಸವರಾಜು ಮಾತನಾಡಿ, ಕ್ರೀಡೆಗಳ ಆಯೋಜನೆ ಮಾಡಬೇಕಾದರೆ ಶಿಕ್ಷಣ ಇಲಾಖೆ ಅಲ್ಪ ಸ್ವಲ್ಪ ನೀಡುತ್ತದೆ ಇದರಿಂದ ಕ್ರೀಡಾಕೂಟ ನಡೆಸುವುದು ಕಷ್ಟಕರ ಇಂತಹ ರಾಜಕಾರಣಿಗಳ ಸಹಕಾರದಿಂದ ಕ್ರೀಡಾಕೂಟ ನಡೆಸಲು ಸಾಧ್ಯವಾಗುತ್ತದೆ ಇದೇ ಕಾಲೇಜು ಆವರಣದಲ್ಲಿ ರಾಜ್ಯ ಮಟ್ಟದ ವ್ಹಾಲಿಬಾಲ ಕ್ರೀಡಾಕೂಟ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ ಸಾರಂಗಮಠದ ಉತ್ತರಾಧಿಕಾರಿ ಡಾ .ವಿಶ್ವಪ್ರಭು ಶಿವಾಚಾರ್ಯರು ಮಾತನಾಡಿ, ಕ್ರೀಡೆಗಳಲ್ಲಿ ಸೋಲು ಗೆಲುವನ್ನು ಲೆಕ್ಕಿಸದೆ ರಾಜ್ಯಮಟ್ಟದ ಕ್ರೀಡೆಯಲ್ಲಿ ಬಾಗವಹಿಸಿದ್ದೇನೆ ಎನ್ನುವ ಆತ್ಮತೃಪ್ತಿ ಹೊಂದಬೇಕು ಅಂದಾಗ ಗೆಲುವಿನ ಮೆಟ್ಟಿಲೆರಲು ಸಾಧ್ಯ. ದೇಶಿಯ ಕ್ರೀಡೆಗಳಲ್ಲಿ ದೇಹದ ಸತ್ವ ಅಡಗಿದೆ ಕಾರಣ ದೇಶೀಯ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ರಾಜಕಾರಣಿಗಳು ಸಿಗುವುದು ಬಹು ಕಡಿಮೆ ಇಂತಹ ಶಾಸಕ ಅಸೋಕ ಮನಗೂಳಿ ಅವರು ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಏಷಿಯನ್ ಫೆಡರಷನ್ ಸ್ಕೂಲ್ ಗೇಮ್ ನಲ್ಲಿ ಭಾಗವಹಿಸಲಿದ್ದ ರವಿ ರೆಬಿನಾಳ ಹಾಗೂ ತಾಲೂಕಿನ ಮಾಜಿ ಕುಸ್ತಿ ಪೈಲ್ವಾನರಿಗೆ ಮತ್ತು ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಬಾಗವಹಿಸಿದ ಜಯಶ್ರೀ ಕೂಚಬಾಳ, ಪ್ರಮೋದ ಮಾಣಸೂಣಗಿ, ಕುಮಾರಿ ಬೆಕಿನಾಳ ಅವರನ್ನು ಗೌರವಿಸಿ ಸನ್ಮಾನಿಸಿದರು
ಶಾಲಾ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್ ಹೆಬ್ಬಿ, ಕಾರ್ಯದರ್ಶಿ ಎಂ.ಬಿ.ಹೂಗಾರ, ಎಲ್.ಸಿ.ಹುಣಸಿಕಟ್ಟಿ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಕೆ. ಎಚ್. ಸೋಮಾಪೂರ, ಎಚ್.ಎಂ.ಉತ್ನಾಳ, ಪುರಸಭೆ ಉಪಾದ್ಯಕ್ಷ ಸಂದೀಪ ಚೌರ, ಆಲಮೇಲ ಪಪಂ ಅಧ್ಯಕ್ಷ ಸಾದಿಕ ಸುಂಬಡ, ಸೇರಿದಂತೆ ಅಡಳಿತ ಮಂಡಳಿ ಸದಸ್ಯರಾದ ಶಿವಪ್ಪಗೌಡ ಬಿರಾದಾರ, ವ್ಹಿ.ಬಿ.ಕುರಡಿ, ಬಿ.ಜಿ.ನೆಲ್ಲಗಿ ವಕೀಲರು, ವ್ಹಿ.ಎಸ್.ಪಾಟೀಲ ಕನ್ನೋಳ್ಳಿ ಇತರರು ವೇದಿಕೆ ಮೇಲಿದ್ದರು.
ಡಾ. ಪ್ರಕಾಶ, ಪೂಜಾ ಸಂಗಡಿಗರು ನಾಡಗೀತೆ ಹಾಡಿದರು. ಪ್ರಾಚಾರ್ಯ ಎ. ಆರ್. ಹೆಗ್ಗನದೊಡ್ಡಿ ಸ್ವಾಗತಿಸಿದರು. ದೈಹಿಕ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಶಾಂತೇಶ ದುರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು. ಕಾಂತು ಒಡೆಯರ ವಂದಿಸಿದರು.

