spot_img
spot_img

ಲೂಸಿ ಸಾಲ್ಡಾನ ತ್ಯಾಗಮಯಿ – ಅಶೋಕಕುಮಾರ ಸಿಂದಗಿ

Must Read

spot_img
- Advertisement -

ಧಾರವಾಡ: ಲೂಸಿ ಸಾಲ್ಡಾನ ಬದುಕಿನುದ್ದಕ್ಕೂ ಅನೇಕ ಸಂಕಷ್ಟಗಳನ್ನು ಎದುರಿಸಿ ವೈಯಕ್ತಿಕ ಆಶೆಗಳನ್ನು ತ್ಯಜಿಸಿ ಸಾರ್ಥಕ ಜೀವನ ನಡೆಸುತ್ತಾ ಬಡ ಮಕ್ಕಳ ಶಿಕ್ಷಣಕ್ಕೆ ಜೀವನದ ಉದ್ದಕ್ಕೂ ಸಹಾಯ ಮಾಡಿದ ತ್ಯಾಗಮಯಿ ಎಂದು ಧಾರವಾಡ ನಗರ ಬಿಇಓ ಅಶೋಕಕುಮಾರ ಸಿಂದಗಿ ಹೇಳಿದರು.

ಅವರು ಆಂಜನೆಯ ನಗರದಲ್ಲಿ ನಡೆದ ಲೂಸಿ ಸಾಲ್ಡಾನ ಅವರ ಜೀವನಾಧಾರಿತ ನಾನು ಲೂಸಿ ಟೆಲಿಫಿಲ್ಮ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತಾ ಲೂಸಿ ಸಾಮಾನ್ಯರಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಮಹಿಳೆ. ನೂರಕ್ಕೂ ಹೆಚ್ಚು ಶಾಲೆಗಳಿಗೆ ದತ್ತಿದಾನ ನೀಡಿ ಸಾವಿರಾರು ಬಡ ಮಕ್ಕಳ ಕಲಿಕೆಗೆ ನೆರವಾದ ಪುಣ್ಯವಂತೆ. ಸಂಕಷ್ಟದ ನಡುವೆಯೂ ಸಾರ್ಥಕ ಬದುಕನ್ನು ಕಟ್ಟಿಕೊಂಡು ಸರ್ವರಿಗೂ ಸಹಾಯ ಮಾಡುತ್ತಾ ತ್ಯಾಗಮಯಿ ಜೀವನ ನಡೆಸಿದ ಮಹಾಮಾತೆ ಲೂಸಿ ಸಾಲ್ಡಾನ. ಇವರ ಜೀವನಾಧಾರಿತ ಟೆಲಿಫಿಲ್ಮ್ ತಯಾರಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ. ಈ ಫಿಲ್ಮ್ ಅನೇಕ ಸಾಧಕರಿಗೆ , ಸಾಧನೆ ಮಾಡಲು ತೊಡಗಿದವರಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿ ಆಗುವುದು. ಚಿತ್ರ ಅತ್ಯಂತ ಚೆನ್ನಾಗಿ ಮೂಡಿಬಂದು ಪ್ರೇಕ್ಷಕರ , ವೀಕ್ಷಕರ ಮನಗೆಲ್ಲಲಿ ಎಂದು ಹೇಳಿದರು.

ಇದಕ್ಕೂ ಮುನ್ನ ‘ನಾನು ಲೂಸಿ’ ಟೆಲಿಫಿಲ್ಮ್ ಗೆ ಕ್ಯಾಮರಾ ಚಾಲನೆ ನೀಡಿ ಮಾತನಾಡಿದ ಮಕ್ಕಳ ಮಹರ್ಷೀ ಶಂಕರ ಹಲಗತ್ತಿ ಧಾರವಾಡ ಕಲಾವಿದರ ಬೀಡು. ಸಂಸ್ಕೃತಿಗಳ ತವರೂರು. ಇಂತಹ ಪುಣ್ಯದ ಭೂಮಿಯಲ್ಲಿ ಶಿಕ್ಷಣಕ್ಕಾಗಿ ಬಡ ಮಕ್ಕಳ ಉದ್ದಾರಕ್ಕಾಗಿ ಜೀವನಪೂರ್ತಿ ಸಹಕಾರ ನೀಡುತ್ತಾ ಬಂದಿರುವ ಲೂಸಿ ಸಾಲ್ಡಾನ ಅವರ ಜೀವನ ಸಾಧನೆ ಆಧಾರಿಸಿ ಟೆಲಿಫಿಲ್ಮ್ ರಚಿಸಲು ಮುಂದಾಗಿರುವುದು ಅತ್ಯಂತ ಸಂತೋಷದ ವಿಷಯ. ಕಲಾವಿದರೆಲ್ಲಾ ಅತ್ಯುತ್ತಮ ವಾಗಿ ಅಭಿನಯಿಸಿ ಉತ್ತಮ ಚಿತ್ರ ಮಾಡಿ ಧಾರವಾಡದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುವಂತಾಗಲಿ ಎಂದು ಕರೆ ನೀಡಿದರು.

- Advertisement -

ಧಾರವಾಡ ಹುಬ್ಬಳ್ಳಿ ಸುತ್ತಮುತ್ತ ಈ ಚಿತ್ರ ಚಿತ್ರೀಕರಣಗೊಳ್ಳಲಿದೆ. ಚಿತ್ರದ ನಿರ್ದೇಶನ ಸಂತೋಷ ಜೆ ಛಾಯಾಗ್ರಹಣ ಬಸವರಾಜ ಗೋಕಾವಿ ನಿರ್ಮಾಣ ಮಲ್ಲಿಕಾರ್ಜುನ ಚರಂತಿಮಠ ನಿರ್ವಹಿಸುವರು. ಶಿಕ್ಷಕ ಸಾಹಿತಿ ವೈ.ಬಿ ಕಡಕೋಳ ಅವರ ಕಥೆ ಆಧಾರಿತ ಚಿತ್ರ ಇದಾಗಿದೆ.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಉಪ್ಪಿನ, ಕಲಾವಿದರಾದ ಭೈರವಿ , ಸಿದ್ದಣ್ಣ ಕುಂಬಾರ, ಪ್ರಕಾಶ ಕುಂಬಾರ, ರೇಖಾ ಮೊರಬ, ಎಂ.ಎಸ್ ಹೊಂಗಲ್.ನಂದಿನಿ ಸನಬಾಲ್, ವೀಣಾ .ಟಿ ,ಪೂಜಾ ವಾಲಿ , ನಿಂಗಪ್ಪ ಹಡಪದ, ಬಸವರಾಜ ಅಂಗಡಿ , ವಿಜಯ ಅಂಗಡಿ , ಮಂಜುಳಾ ಕಲ್ಯಾಣಿ , ನಿಖಿಲ್ ನಾಯ್ಕ , ವಿದ್ಯಾ ಸಣ್ಣಕ್ಕಿ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕ ಎಲ್ ಐ ಲಕ್ಕಮ್ಮನವರ ಸ್ವಾಗತಿಸಿ ನಿರೂಪಿಸಿದರು. ರಂಗನಾಥ ವಾಲ್ಮೀಕಿ ವಂದಿಸಿದರು.

- Advertisement -
- Advertisement -

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group