- Advertisement -
ಮೂಡಲಗಿ: ರಾಜ್ಯದ ಬೆಳಗಾವಿಯಲ್ಲಿ ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ನಿರ್ಮಾಣ ಕಾಮಗಾರಿಯನ್ನು ಬೇಗ ಆರಂಭಿಸಬೇಕೆಂದು ರಾಜ್ಯಸಭಾ ಸದಸ್ಯ ಮನವಿ ಸಲ್ಲಿಸಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಸಚಿವ ನಾರಾಯಣ ರಾಣೆ ಅವರನ್ನುಅವರು ಭೇಟಿಯಾಗಿ ಬೆಳಗಾವಿಯಲ್ಲಿ ಎಂ.ಎಸ್.ಎಂ.ಇ ಟೆಕ್ನಾಲಜಿ ಸೆಂಟರ್ ನಿರ್ಮಾಣಕ್ಕೆ ಈಗಾಗಲೇ 10 ಎಕರೆ ಸ್ಥಳವನ್ನು ಗುರುತಿಸಿದ್ದು, ಆ ಸ್ಥಳದಲ್ಲಿ ಆದಷ್ಟು ಬೇಗ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.