Homeಸುದ್ದಿಗಳುಮಡಿವಾಳ ಮಾಚಿದೇವನನ್ನು ಎಂದೂ ಮರೆಯಲಾಗದು - ಡಾ. ಇಟಗಿ

ಮಡಿವಾಳ ಮಾಚಿದೇವನನ್ನು ಎಂದೂ ಮರೆಯಲಾಗದು – ಡಾ. ಇಟಗಿ

ಬೆಳಗಾವಿ – ವಚನ ಸಾಹಿತ್ಯ ಸಂರಕ್ಷಣೆ ಹಾಗೂ ಶರಣರ ಸಂರಕ್ಷಣೆಯ ಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ ವೀರ ಗಣಾಚಾರಿ ಮಡಿವಾಳ ಮಾಚಿದೇವ ನಂತ ಶರಣನನ್ನು ಜಗತ್ತು ಎಂದೂ ಮರೆಯಲಾರದು ಎಂದು ಡಾ.ಅ.ಬ.ಇಟಗಿ ಹೇಳಿದರು.

ಲಿಂಗಾಯತ ಸಂಘಟನೆ ಬೆಳಗಾವಿ ಫ. ಗು ಹಳಕಟ್ಟಿ ಭವನದಲ್ಲಿ ಸಾಮೂಹಿಕ ವಾರದ ಪ್ರಾರ್ಥನೆಯಲ್ಲಿ ಉಪನ್ಯಾಸ ನೀಡುತ್ತಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಉಳಿವಿ ಮಾರ್ಗದ ಎಲ್ಲಾ ಶರಣರ ರಕ್ಷಿಸುವ ಜವಾಬ್ದಾರಿಯನ್ನು ಹೊತ್ತು, ನಿಜಶರಣ ಗುಣಗಳನ್ನು ಮೈಗೂಡಿಸಿಕೊಂಡು ಲಿಂಗ ನಿಷ್ಠೆ ಶರಣರ ಪಟ್ಟಿಗಳನ್ನು ಮಡಿ ಮಾಡುವ ಕಾಯಕ ಮಾಡುತ್ತಾ ಕಲ್ಯಾಣದಲ್ಲಿ ನೆಲೆ ನಿಂತು ಬದುಕಿದಂತ ಶರಣರಲ್ಲಿ ಇವರೂ  ಒಬ್ಬರು ಎಂದರು.

ಇದೇ ಸಂದರ್ಭದಲ್ಲಿ ನೂತನ ದಂಪತಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು

ಶಂಕರ ಗುಡಸರವರು ಮಾತನಾಡುತ್ತಾ, ಶರಣರ ವಚನ ಸಾಹಿತ್ಯ ನಿಜವಾದ ಜಗತ್ತನ್ನು ಬೆಳಗುವ ಸಾಮರ್ಥ್ಯವನ್ನು ಹೊಂದಿದೆ ಎಂದರು. 

ಬಾಳಗೌಡ ದೊಡ್ಡ ಬಂಗಿ, ಸುರೇಶ ನರಗುಂದ, ಕಮಲ ಗಣಾಚಾರಿ, ವಿಕೆ ಪಾಟೀಲ್, ವಿರುಪಾಕ್ಷಿ ದೊಡ್ಡಮನಿ, ಸಿದ್ದಪ್ಪ ಸಾರಾಪುರಿ, ಲಲಿತವಾಲಿ ಇಟಗಿ, ಜವಣಿ ದಂಪತಿಗಳು ಶಿವಾನಂದ ನಾಯಕ ಮುಂತಾದ ಶರಣರು ಪಾಲ್ಗೊಂಡಿದ್ದರು.

ಎಂ ವೈ ಮೆಣಸಿನಕಾಯಿ ಪರಿಚಯಿಸಿದರು ಸದಾಶಿವ ದೇವರಮನೆಯವರು ನಿರೂಪಣೆ ಮಾಡಿದರು.

RELATED ARTICLES

Most Popular

error: Content is protected !!
Join WhatsApp Group