ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ – ಸಿದ್ಧಲಿಂಗ ಚೌಧರಿ

Must Read

ಸಿಂದಗಿ: ಮಕ್ಕಳು ದೇಶದ ಸಂಪತ್ತು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿದರೆ ಸಮಾಜದ ಆಸ್ತಿಯಾಗುತ್ತಾರೆ ಈ ನಿಟ್ಟಿನಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಹೇಳಿದರು

ಪಟ್ಟಣದ ಕಲ್ಯಾಣನಗರದಲ್ಲಿ ಕರ್ನಾಟಕ ಜನಸ್ಪಂದನ್ ಟ್ರಸ್ಟ್ ವಿಜಯಪುರ-ಸಿಂದಗಿ ಘಟಕ ಹಾಗೂ ಪ್ರಕಾಶ ಚವ್ಹಾಣ ಸ್ನೇಹಿತರ ಬಳಗದ ಸಹಯೋಗದಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಪೂರಕವಾದ ಶಿಕ್ಷಣ ಒದಗಿಸಬೇಕೆಂದು ನೆಹರು ಮಹದಾಸೆ ಹೊಂದಿದ್ದರು ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎಂಬ ಆಸೆಯನ್ನು ಹೊಂದಿದ್ದರು ಇಂದು ಮಕ್ಕಳಿಗಾಗಿ ಸರ್ಕಾರಗಳು ಸೌಲಭ್ಯಗಳನ್ನು ನೀಡುತ್ತಿವೆ ಮಕ್ಕಳು ಆಸಕ್ತಿಯಿಂದ ವಿದ್ಯೆ ಕಲಿತು ಅವರ ಆಶಯ ಈಡೇರಿಸಬೇಕೆಂದರಲ್ಲದೇ ಕನ್ನಡ ನಾಡು ನುಡಿ, ನೆಲ, ಜಲ ಮತ್ತು ಭಾಷೆಯೊಂದಿಗೆ ಸಮಗ್ರ ಸಂಸ್ಕೃತಿ ನಮ್ಮೆಲ್ಲರ ಮನೆ ಮನಗಳಲ್ಲಿ ಶಾಶ್ವತವಾಗಿ ಇರಬೇಕಾಗಿದೆ ಎಂದರು.

ಕರ್ನಾಟಕ ಜನಸ್ಪಂದನ್ ಟ್ರಸ್ಟ್ ಜಿಲ್ಲಾಧ್ಯಕ್ಷ ಮಹಾಂತೇಶ ನೂಲಾನವರ ಮಾತನಾಡಿ, ಮಕ್ಕಳು ನಮ್ಮ ದೇಶದ ಆಸ್ತಿಯಾಗಿದ್ದು ಮುಂದಿನ ಭವಿಷ್ಯ ಮಕ್ಕಳ ಕೈಯಲ್ಲಿದೆ ಚಾಚಾ ನೆಹರು ರವರ ತತ್ವ-ಸಿದ್ಧಾಂತ ಆಚಾರ-ವಿಚಾರಗಳನ್ನು ತಮ್ಮಲ್ಲಿ ಉಳಿಸಿಕೊಳ್ಳುವ ಮೂಲಕ ಅವರ ಆದರ್ಶ ಪಾಲಿಸುವ ಸಂಸ್ಕಾರಯುತ ಸಂಸ್ಕೃತಿಯೊಂದಿಗೆ ದೇಶಕಟ್ಟುವ ಪ್ರಜೆಗಳಾಗಲಿ ಎಂದು ಹಾರೈಸಿದರು.

ವೈದ್ಯರಾದ ಡಾ. ಬಸವರಾಜ ಚವ್ಹಾಣ ಮಾತನಾಡಿ, ಮಕ್ಕಳು ದೇಶದ ಭವಿಷ್ಯದ ಸಂಪತ್ತು ಪ್ರತಿಯೊಂದು ಮಗುವೂ ಅಧ್ಯಯನಶೀಲರಾಗಿ ಪುಸ್ತಕ ಪ್ರೇಮಿಗಳಾಗಬೇಕು. ಚಾಚಾ ನೆಹರು ಅವರಿಗೆ ಮಕ್ಕಳೆಂದರೆ ಪ್ರೀತಿ ನಿತ್ಯ ಮಕ್ಕಳ ಜೊತೆ ಕಾಲ ಕಳೆದು ಕಲ್ಮಶವಿಲ್ಲದ ಆ ಮಕ್ಕಳ ನಗುವಿನಲ್ಲಿ ನೆಮ್ಮದಿ ಕಾಣುತ್ತಿದ್ದರು ಹೀಗಾಗಿ ತಮ್ಮ ಜನ್ಮದಿನವನ್ನು ಮಕ್ಕಳಿಗಾಗಿ ಮೀಸಲಿಟ್ಟು ಮಕ್ಕಳ ದಿನಾಚರಣೆಯನ್ನು ಆಚರಿಸಲು ತಿಳಿಸಿ ಹೋಗಿದ್ದಾರೆ ನಾವು ಸಹ ಮಕ್ಕಳ ಜೊತೆ ಬೆರೆತು ಅವರ ಪ್ರೀತಿಯನ್ನು ಪಡೆಯೋಣ ಎಂದರು

ಈ ಸಂದರ್ಭದಲ್ಲಿ ರಾಗರಂಜಿನಿ ಸಂಚಾಲಕ ಡಾ. ಪ್ರಕಾಶ ಮೂಡಲಗಿ, ಪ್ರಕಾಶ ಚವ್ಹಾಣ, ಡಾ. ಅನೀಲ ನಾಯಕ, ಡಾ.ಶಿವಶಂಕರ ಚವ್ಹಾಣ, ಕಾರ್ಯಾಧ್ಯಕ್ಷ ಶರಣಪ್ಪ ಮೇತ್ರಿ, ಆರ್.ಡಿ.ಪವಾರ್, ತಾಲೂಕಾಧ್ಯಕ್ಷ ನವೀನ ಶೆಳ್ಳಗಿ, ಗೌರೀಶ ಹೈಯಾಳಕರ್, ಎಸ್.ಎಚ್.ಜಾಧವ, ರಮೇಶ ಜೋಶಿ, ಸೋಮು ವಸ್ತ್ರದ, ಭಾಗಣ್ಣ ತಮದೊಡ್ಡಿ, ರವಿಚಂದ್ರ ಮಣೂರ, ದಯಾನಂದ ಜಾಡರ್, ಸಿದ್ದನಗೌಡ ಪಾಟೀಲ, ಈರಣ್ಣ ಪಾಟೀಲ, ಸುಭಾಸ ಚವ್ಹಾಣ, ಈರಯ್ಯ ಮಠ, ಪ್ರವೀಣ ಚವ್ಹಾಣ ಸೇರಿದಂತೆ ಇನ್ನಿತರರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group