ಸಿಂದಗಿ; ಕಾಂಗ್ರೆಸ್ ಪಕ್ಷದ ಹಿರಿಯರು ಮಾಜಿ ಸಚಿವ ಎಚ್.ವೈ.ಮೇಟಿ ಅವರು ಮೊದಲ ಬಾರಿಗೆ ಗುಳೇದಗುಡ್ಡ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು, ನಮ್ಮ ತಂದೆಯವರಿಗೆ ತುಂಬಾ ಆತ್ಮೀಯರಾಗಿದ್ದರು ನಮ್ಮ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಿದ್ದರು, ಅವರ ಜೀವನ ಸಮಾಜಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಎಲ್ಲ ಸಮಾಜದೊಂದಿಗೆ ಆತ್ಮೀಯತೆ ಹೊಂದಿದ್ದರು. ಇದು ಬರಿ ಕಾಂಗ್ರೆಸ್ ಪಕ್ಷಕ್ಕೆ ಅಷ್ಟೇ ನಷ್ಟ ಆಗಿಲ್ಲಾ ಅವರ ಲಕ್ಷಾಂತರ ಅಭಿಮಾನಿಗಳಿಗೆ ತುಂಬಲಾರದ ನಷ್ಟ ಎಂದು ಶಾಸಕ ಅಶೋಕ ಮನಗೂಳಿ ಸಂತಾಪ ಸೂಚಿಸಿದರು.
ನಗರದ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಾಲಯದಲ್ಲಿ ಶಾಸಕರು ಉತ್ತರ ಕರ್ನಾಟಕ ಹಿರಿಯ ನಾಯಕರಾದ ಎಚ್ ವಾಯ್ ಮೇಟಿ ರವರ ಅಗಲಿಕೆಗೆ ಸಂತಾಪ ಸಭೆಯಲ್ಲಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಹಿರಿಯರಾದ ಮಲ್ಲಣ್ಣ ಸಾಲಿ,ಸೋಮನಗೌಡ ಬಿರಾದಾರ, ವಾಯ್ ಸಿ ಮಯೂರ, ಮಡ್ದಪ್ಪ ಸೊನ್ನದ, ನೂರಾಹ್ಮದ ಅತ್ತಾರ, ಬಸವರಾಜ ಕಾಂಬಳೆ, ಪ್ರವೀಣ ಕಂಟಿಗೊಂಡ, ಅರವಿಂದ ಹಂಗರಗಿ, ಸಂಗನಗೌಡ ಬಿರಾದಾರ, ಹಾಸೀಮ ಆಳಂದ, ಸಂದೀಪ ಚೌರ, ಖಾದಿರ ಬಂಕಲಗಿ, ಶಾಂತಪ್ಪ ರಾಣಾಗೋಳ, ಯಾಕೂಬ ನಾಟೀಕಾರ, ಬಸೀರ ಮರ್ತುರ, ಸದ್ದಾಮ ಆಲಗೂರ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

