Homeಸುದ್ದಿಗಳುಮರುಳ ಶಂಕರ ದೇವರು ಅಂತರಂಗದ ತಿರುಳು ಹೊಂದಿದವರು - ಸುನಿತಾ ನಂದೆಣ್ಣವರ

ಮರುಳ ಶಂಕರ ದೇವರು ಅಂತರಂಗದ ತಿರುಳು ಹೊಂದಿದವರು – ಸುನಿತಾ ನಂದೆಣ್ಣವರ

ಬೆಳಗಾವಿ -_ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ದಿನಾಂಕ ೩ ರಂದು ವಾರದ ಸತ್ಸಂಗದ ಕಾರ್ಯಕ್ರಮದಲ್ಲಿ ಮಹಾ ಶರಣ ಮರುಳು ಶಂಕರ ದೇವರು ಒಬ್ಬ ಗುಪ್ತ ಭಕ್ತನಾಗಿದ್ದು ಹೊರಗೆ ಮರುಳುನಾಗಿದ್ದರು ಒಳಗೆ ಅಂತರಂಗದಲ್ಲಿ ಪರಿಪಕ್ವದ ತಿರುಳನ್ನು ಹೊಂದಿದವರು ಹುಚ್ಚನಾಗಿ ಕಂಡರೂ ಸದಾ ಎಚ್ಚರದಿಂದ ಇದ್ದವರು ಅಂಗವನ್ನೇ ಲಿಂಗವನ್ನಾಗಿ ಮಾಡಿ ಲಿಂಗಸಂಗಿ ನಿಸ್ಸಂಗಿಯಾದವರು, ಆಫ್ಘಾನಿಸ್ತಾನದಿಂದ ಬಸವಣ್ಣನವರ ಕಾಯಕ ದಾಸೋಹ ಶಿವಯೋಗ ಇವುಗಳ ಮಹತ್ವವನ್ನು ಅರಿತು ಕಲ್ಯಾಣಕ್ಕೆ ಬಂದವರು. ಪ್ರಸಾದ ದಾಸೋಹ ಕಾಯಕದಲ್ಲಿ ನಿರತರಾಗಿ ಪ್ರಸಾದಿಸ್ಥಲವೇ ಆದವರು ಪ್ರಸಾದದ ಕುಳಿಯಲ್ಲಿ ನಿಜ ನಿವಾಸದಂಗವ ನೋಡು ಗುಹೇಶ್ವರ ಲಿಂಗದಲ್ಲಿ ಸಂಗನ ಬಸವಣ್ಣಾ ಎಂದು ಅಲ್ಲಮ ಪ್ರಭುಗಳು ಬಣ್ಣಿಸಿದ್ದಾರೆ ಎಂದು ಸುನಿತಾ ನಂದೆಣ್ಣವರ ಇಂದಿನ ಉಪನ್ಯಾಸದಲ್ಲಿ ಹೇಳಿದರು.

ಶರಣರಾದ ಮೋಹನ ಮುನವಳ್ಳಿಯವರು ಮಾತನಾಡಿ,  ಸೊಲ್ಲಾಪುರದ ರಾಣಿ ಚಾಮಲಾದೇವಿಯು ಶರಣ ಸಿದ್ದರಾಮರ ಶರಣತ್ವದ ಪ್ರಭಾವಕ್ಕೆ ಒಳಗಾಗಿದ್ದವಳು ಅವಳು ಕೂಡಾ ಜನ ಹಿತ ಕಾರ್ಯಗಳನ್ನು ಕೈಗೊಂಡು ಅತ್ಯಂತ ಜನಪ್ರಿಯ ರಾಣಿಯಾಗಿದ್ದಳು ಅಲ್ಲದೆ ಶರಣ ಸಿದ್ದರಾಮರ ಸಮಾಜೋಧ್ಧಾರ ಕಾರ್ಯಗಳಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾಳೆ ಎಂದು ಹೇಳಿದರು.

ಶರಣೆ ಲಲಿತಾ ರುದ್ರಗೌಡರ, ತ್ರಿವೇಣಿ ಪಾಟೀಲ ಹಾಗೂ ಶರಣ ಮಹಾದೇವ ಕೊರಿ ವಚನ ಗಾಯನ ಮಾಡಿದರು ಅಧ್ಯಕ್ಷರು ಎಸ್ ಜೀ ಸಿದ್ನಾಳರು ವಚನ ವಾಚನ ಮಾಡಿದರು ಶರಣ ಕಟ್ಟಿಮನಿಯವರು ನಿರೂಪಣೆ ಮಾಡಿದರು. ಲಲಿತಾರುದ್ರಗೌಡರ, ಶೈಲೇಜಾ ಮುನವಳ್ಳಿ, ತ್ರಿವೇಣಿ ಪಾಟಿಲ ಪ್ರಾರ್ಥನೆ ನಡೆಸಿಕೊಟ್ಟರು. ಎಲ್ಲ ಶರಣ ಶರಣೆಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group