ಬೀದರ – ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಮಟಕಾ ಬರೆದುಕೊಳ್ಳುತಿದ್ದ ದಂಪತಿಗಳಿಗೆ 4 ತಿಂಗಳ ಸಾದಾ ಶಿಕ್ಷೆ ಹಾಗೂ ನಗದು ದಂಡ ವಿಧಿಸಿ ಇಲ್ಲಿಯ ಪ್ರಧಾನ ಸಿವಿಲ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ತಾಲೂಕಿನ ಸಸ್ತಾಪೂರ ಗ್ರಾಮದ ನಿವಾಸಿ ಶಿವಾಜಿ ನಾಮದೇವರಾವ ಮುಳೆ ಹಾಗೂ ಈತನ ಪತ್ನಿ ಸುಜಾತಾ ಶಿವಾಜಿ ಮುಳೆ ಶಿಕ್ಷೆಗೆ ಗುರಿಯಾದ ದಂಪತಿಗಳಾಗಿದ್ದಾರೆ.
ಕಳೆದ 2015ರ ಏಪ್ರಿಲ್ 4ರಂದು ಸಸ್ತಾಪೂರ ಬಂಗ್ಲಾದಲ್ಲಿಯ ತಮ್ಮ ಕಿರಾಣಿ ಅಂಗಡಿಯಲ್ಲಿ ಸಾರ್ವಜನಿಕರಿಂದ ಮಟಕಾ ಚೀಟಿ ಬರೆದುಕೊಳ್ಳುತಿದ್ದಾಗ ಅಂದಿನ ಪ್ರಭಾರಿ ಪಿಎಸ್ಐ ಟಿ.ಎಸ್.ನಾಯಕ ನೇತೃತ್ವದಲ್ಲಿ ದಾಳಿ ನಡೆಸಿದ ನಗರ ಠಾಣೆ ಪೊಲೀಸ್ ರ ತಂಡ ಈ ಇಬ್ಬರು ದಂಪತಿಗಳನ್ನು ಬಂಧಿಸಿ ಅವರಿಂದ 4.53 ಲಕ್ಷ ರೂ. ಜಪ್ತಿ ಮಾಡಿಕೊಂಡಿತ್ತು.
ಪ್ರಕರಣದ ಕುರಿತು ಪಿಎಸ್ಐ ಖಾಜಾ ಹುಸೇನ್ ಅವರು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದರು.
ಪ್ರಕರಣದ ಕುರಿತು ವಾದ, ಪ್ರತಿವಾದ ಆಲಿಸಿದ ಇಲ್ಲಿಯ ಪ್ರಧಾನ ಸಿವಿಲ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಗಂಗವ್ವ ಆಯಟ್ಟಿ ಅವರು ಆರೋಪಿಗಳಿಗೆ 4 ತಿಂಗಳು ಸಾದಾ ಶಿಕ್ಷೆ ಹಾಗೂ 600 ರೂ. ನಗದು ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಫಿರ್ಯಾದಿ ಪರ ಸರ್ಕಾರಿ ಸಹಾಯಕ ಅಭಿಯೋಕರಾದ ಜಗದೇವಿ ಚೊಂಡೆ ವಾದ ಮಂಡಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ