ಕಾಂಗ್ರೆಸ್ ಅಭ್ಯರ್ಥಿ ಪರ ಮತ ಬೇಟೆಗಾಗಿ ಮಯೂರ

Must Read

ಸಿಂದಗಿ: ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಯ ಪ್ರಚಾರ ಜೋರಾಗಿ ನಡೆಯುತ್ತಿದ್ದು ಸಿಂದಗಿ ಗದ್ದುಗೆ ಹಿಡಿಯಲು ಎಲ್ಲಾ ಅಭ್ಯರ್ಥಿಗಳು ನಾನಾ ರೀತಿ ಕಸರತ್ತು ನಡೆಸುತ್ತಿದ್ದು ಈಗ ಮತಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಬಾರಿ ಪೈಪೋಟಿ ನಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಪರ ಮತಬೇಟೆಗಾಗಿ ಕ್ಷೇತ್ರದಲ್ಲಿ ದಲಿತ ಮುಖಂಡ ವೈ ಸಿ ಮಯೂರ ಅವರು ತಮ್ಮ ಅಪಾರ ಬೆಂಬಲಿಗರಿಂದ ಪ್ರಚಾರದ ಅಖಾಡಕ್ಕೆ ಧುಮುಕ್ಕಿದ್ದಾರೆ.

ಕ್ಷೇತ್ರದ ಬಬಲೇಶ್ವರ, ಮೋರಟಗಿ, ಗೋಲಗೇರಿ, ಆಲಮೇಲ, ತಾಂಬಾ, ಸುರಗಿಹಳ್ಳಿ, ವಾಡೆ, ಬಂಥನಾಳ, ಕೆಂಗನಾಳ, ಶಿವಪೂರ ಸೇರಿದಂತೆ ಇತರೆ ಗ್ರಾಮಗಳಲ್ಲಿ ವೈ.ಸಿ.ಮಯೂರ ಅವರು ತಮ್ಮ ಬೆಂಬಲಿಗರೊಂದಿಗೆ ಪ್ರಚಾರದ ಮತಬೇಟೆ ಅಖಾಡದಲ್ಲಿ ಧುಮುಕ್ಕಿದ್ದು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ, ಅಲ್ಲದೆ ಈ ಬಾರಿ ಏನೇ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಸಿಂದಗಿಯಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎನ್ನುವುದು ತೋರಿಸಲು ಮುಂದಾಗಿದ್ದಾರೆ.

ಅಲ್ಲದೆ ಮಯೂರ ದಲಿತ ಪರ ಸಂಘಟನೆಯ ಮುಖಂಡರಾಗಿದರಿಂದ  ಗ್ರಾಮೀಣ ಭಾಗದಲ್ಲಿ ತಮ್ಮದೆಯಾದ ವರ್ಚಸ್ಸು ಹೊಂದಿದ್ದಾರೆ, ಮತ್ತು ಅಭಿಮಾಗಳ ಬಳಗ ಕೂಡಾ ಉತ್ತಮವಾಗಿದೆ ಎನ್ನಲಾಗಿದ್ದು  ಉಳಿದ ಎಲ್ಲಾ ಸಮಾಜದ ಜನರೊಂದಿಗೆ  ಉತ್ತಮವಾದ ಬಾಂಧವ್ಯ ಹೊಂದಿದ್ದಾರೆ ಹೀಗಾಗಿ ಅವರ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತದೆ ಎಂದು ಅವರ ಅಭಿಮಾನಿಗಳು ಆಸೆ ವ್ಯಕ್ತಪಡಿಸಿದ್ದಾರೆ,

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group