spot_img
spot_img

ಜಿರೇನಿಯಂ ಮತ್ತು ಏರುಮಡಿ ಪದ್ಧತಿ ತಂತ್ರಜ್ಞಾನದಲ್ಲಿ ಬೆಳೆದ ಈರುಳ್ಳಿ ಬೆಳೆಗಳ ಕ್ಷೇತ್ರೋತ್ಸವ

Must Read

- Advertisement -

ಮೂಡಲಗಿ: ರೈತರು ವಿಜ್ಞಾನಿಗಳನ್ನು ಸಂಪರ್ಕಿಸಿ ಜಿರೇನಿಯಂ ಮತ್ತು ಈರುಳ್ಳಿ ಬೆಳೆಗಳ ಆಧುನಿಕ ತಂತ್ರಜ್ಞಾನಗಳಾದ ಹೆಚ್ಚಿನ ಇಳುವರಿ ಕೊಡುವ ತಳಿಗಳು, ಏರುಮಡಿ ಪದ್ಧತಿ, ಹನಿ ನೀರಾವರಿ, ರಸಾವರಿ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಹೆಚ್ಚಿನ ಆದಾಯ ಪಡೆಯಬಹುದೆಂದು ಅರಭಾವಿ ಕಿ.ರಾ.ಚ.ತೋ ಮಹಾವಿದ್ಯಾಲಯದ ಡೀನ್ ಡಾ. ಎಮ್.ಜಿ. ಕೆರುಟಗಿ ಹೇಳಿದರು.

ಅವರು ತಾಲೂಕಿನ ಅರಭಾವಿ ಕಿತ್ತೂರು ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಆಶ್ರಯದಲ್ಲಿ ಶುಕ್ರವಾರದಂದು ಜರುಗಿದ “ಜಿರೇನಿಯಂ (ಸುಗಂಧದ್ರವ್ಯ ಬೆಳೆ) ಹಾಗೂ ಏರುಮಡಿ ಪದ್ಧತಿ ತಂತ್ರಜ್ಞಾನದಲ್ಲಿ ಬೆಳೆದ ಈರುಳ್ಳಿ ಬೆಳೆಗಳ ಕ್ಷೇತ್ರೋತ್ಸವ” ಬಗ್ಗೆ ತರಬೇತಿಯನ್ನು  ಉದ್ಘಾಟಿಸಿ ಮಾತನಾಡಿ, ಜಿರೇನಿಯಂ ಬೆಳೆಯು ವರ್ಷಕ್ಕೆ 3-4 ಕಟಾವು ಮಾಡಬಹುದಾಗಿದ್ದು, ಅಂದಾಜು 30-35 ಟನ್ ಎಲೆ ಇಳುವರಿ ನಿರೀಕ್ಷಿಸಬಹುದಾಗಿದ್ದು, ಅದರಿಂದ ಸುಮಾರು 26ರಿಂದ 30ಲೀಟರ್ ಸುಗಂಧದ ಎಣ್ಣೆ ಇಳುವರಿ ಪಡೆಯಬಹುದು. ಪ್ರತಿ ಎಕರೆಗೆ 1.2 ರಿಂದ 1.5 ಲಕ್ಷ ನಿವ್ವಳ ಲಾಭ ಪಡೆಯಬಹುದೆಂದು ತಿಳಿಸಿದರು. 

ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಜೆ.ಎಸ್. ಹಿರೇಮಠ ಅವರು ಆಧುನಿಕ ಉತ್ಪಾದನಾ ತಾಂತ್ರಿಕತೆಗಳ ವಿಷಯದ ಬಗ್ಗೆ, ಡಾ. ಶಶಿಧರ ಎಮ್. ದೊಡ್ಡಮನಿ ಅವರು ಜಿರೇನಿಯಂ ಸುಗಂಧ ದ್ರವ್ಯ ಭಟ್ಟಿ ಇಳಿಸುವ ತಾಂತ್ರಿಕತೆ ಮತ್ತು ಪ್ರಾತ್ಯಕ್ಷಿಕೆಯನ್ನು ತೋರಿಸಿಕೊಟ್ಟರು. ಡಾ. ಸಚಿನಕುಮಾರ ನಂದೀಮಠ ಅವರು ಬೆಳೆಯ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು.

- Advertisement -

ಡಾ. ಚಂದ್ರಕಾಂತ ಕಾಂಬಳೆ ಅವರು ಏರುಮಡಿ ಪದ್ಧತಿಯಲ್ಲಿ ಈರುಳ್ಳಿ ಉತ್ಪಾದನಾ ತಾಂತ್ರಿಕತೆಗಳ ವಿಷಯದ ಬಗ್ಗೆ, ಡಾ. ಪ್ರಶಾಂತ ಎ ಅವರು  ಈರುಳ್ಳ್ಳಿ ಬೆಳೆಯಲ್ಲಿ ಸಮಗ್ರ ರೋಗಗಳ ನಿರ್ವಹಣೆ ಬಗ್ಗೆ, ಡಾ. ರೇಣುಕಾ ಹಿರೇಕುರಬರ ಕೀಟ ರೋಗ ಶಾಸ್ತ್ರ ಇವರು ಕೀಟಗಳ ಸಮಗ್ರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಶಿಕ್ಷಕರಾದ ಡಾ. ಕಾಂತರಾಜು ವಿ, ಡಾ. ಸುಮಂಗಲಾ ಕೌಲಗಿ, ಡಾ. ವಿಜಯ ಮಹಾಂತೇಶ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ಗೋಕಾಕ, ಮೂಡಲಗಿ, ರಾಯಬಾಗ, ತಾಲೂಕಿನ 42 ಜನ ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಡಾ. ಸಚಿನಕುಮಾರ ನಂದಿಮಠ, ಕಾರ್ಯಕ್ರವನ್ನು ನಿರೂಪಿಸಿದರು ಹಾಗೂ ಡಾ. ವಿಜಯಮಹಾಂತೇಶ ವಂದಿಸಿದರು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group