ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

Must Read

 

ನೆನಪಿದೆಯೆ ನೀನಳುತ ಧರೆಗಿಳಿದು ಬಂದಾಗ
ಬಂಧುಬಾಂಧವರೆಲ್ಲ‌ ನಕ್ಕರಂದು
ನೆನಪಿರಲಿ‌ ಲೋಕವನು‌ ಬಿಡುವಾಗ ಜನರಳಲಿ
ನಗೆಮೊಗದಿ ನೀ ಸಾಗು – ಎಮ್ಮೆತಮ್ಮ

ಶಬ್ಧಾರ್ಥ
ಧರೆ = ಭೂಮಿ

ತಾತ್ಪರ್ಯ
ತಾಯಿಯ ಗರ್ಭದಲ್ಲಿ ಅನೇಕ ಹುಳುಗಳ ಕಡಿತದಿಂದ ಒದ್ದಾಡಿ ಮಲಮೂತ್ರದ ಹೊಲಸಿನಲ್ಲಿ ಹೊರಳಾಡಿ ಪ್ರಸೂತಿ ವಾಯು ಜೋರಾಗಿ ಬರಸಿಡಿಲಿನಂತೆ ಹೊಡೆಯೆ ನೋವಿನಿಂದ ಹೊರಬಂದೆ. ತಾಯಿಯ ಹೊಟ್ಟೆಯಲ್ಲಿ ಬೆಚ್ಚಗಿದ್ದು ಹೊರಬಂದ ಕೂಡಲೆ ತಣ್ಣನೆಯ ಅನುಭವವಾಗಲು, ಉಸಿರು ಮೊದಲ ಬಾರಿಗೆ ತೆಗೆದುಕೊಳ್ಳಲು ಕಷ್ಟವಾಗಲು ಮತ್ತು ಹಸಿವಿನಿಂದ‌ ಬಳಲುತ್ತ ಅಳತೊಳಗಿದೆ. ನಿನ್ನ ಬರುವಿಕೆಯನ್ನು ತಂದೆ ತಾಯಿ ಬಂಧುಬಾಂಧವರೆಲ್ಲ ಸಿಹಿಹಂಚಿ ಸಂತೋಷ ಹಂಚಿಕೊಂಡರು ಮತ್ತು ಮಂದಹಾಸ ಬೀರಿ ನಗತೊಡಗಿದರು.ಇಲ್ಲಿ‌ ಬಂದ ಮೇಲೆ ನೀನು ಸಾರ್ಥಕ‌ ಜೀವನವನ್ನು ನಡೆಸಿ‌ ನಾಲ್ಕುಮಂದಿಗೆ ಸಹಾಯ ಸೇವೆ ಮಾಡುತ್ತ ಮತ್ತು ಆಧ್ಯಾತ್ಮ ಸಿದ್ಧಿ ಪಡೆದು ಇಚ್ಛಾಮರಣಿಯಾಗಿ ಮರಣವನ್ನು ಗೆದ್ದು ನಗುಮುಖದಿಂದ ಸಂತೃಪ್ತಿಯಿಂದ ಹೋದರೆ,‌ಎಲ್ಲ ಜನರು ನಿನ್ನ ಸಹಾಯ ಸಹಕಾರವನ್ನು ನೆನೆಸಿಕೊಂಡು ಅಳುತ್ತಾರೆ. ಅದನ್ನೆ ಜನಪದರು ಹೀಗೆ ಹಾಡಿದ್ದಾರೆ. ಮಂದಿಮಕ್ಕಳೊಳಗ ಚಂದಾಗಿ ಇರಬೇಕು| ನಂದಿಯ ಶಿವನ ದಯದಿಂದ‌| ಹೋಗಾಗ| ಮಂದಿ ಬಾಯಾಗ ಇರಬೇಕ|| ಹಾಗೆ ನಾಕು ಮಂದಿಗೆ ಬೇಕಾದರೆ ಕೊನೆಗೆ ನಿನ್ನ ಹೊತ್ತೊಯ್ಯಲು ನಾಕು‌ ಮಂದಿ ಬರುತ್ತಾರೆ. ಕಣ್ಣೀರುಗರೆದು ಉತ್ತರಕ್ರಿಯೆ ನೆರವೇರಿಸುತ್ತಾರೆ.

ರಚನೆ ಮತ್ತು ವಿವರಣೆ                               ‌‌ ‌‌‌ ಎನ್.ಶರಣಪ್ಪ‌ ಮೆಟ್ರಿ
ಮೊ. 9449030990

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group