ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

Must Read

 

ಸಾಮ್ರಾಟನಾಗಿದ್ದು ಬೊಕ್ಕಸದ ರೊಕ್ಕವನು
ವೆಚ್ಚಮಾಡದೆ ಟೋಪಿ ಹೊಲಿದು ಮಾರಿ
ಬಂದ ಹಣದಲಿ ಬದುಕಿದೌರಂಗಜೇಬನೊಲು
ದುಡಿದು ದುಡ್ಡನು‌ ಬಳಸು – ಎಮ್ಮೆತಮ್ಮ

ಶಬ್ಧಾರ್ಥ
ಬೊಕ್ಕಸ – ಖಜಾನೆ, ಭಂಡಾರ.ವೆಚ್ಚಮಾಡು – ಖರ್ಚುಮಾಡು

ತಾತ್ಪರ್ಯ
ಮೊಘಲ ಸಾಮ್ರಾಜ್ಯದ ರಾಜನಾಗಿದ್ದ ಔರಂಗಜೇಬನು‌ ರಾಜ್ಯಭಂಡಾರದ ಹಣವನ್ನು ತನ್ನ ಸ್ವಂತ ಖರ್ಚಿಗಾಗಿ
ಉಪಯೋಗ ಮಾಡಿತ್ತಿದ್ದಿಲ್ಲ. ದಿನನಿತ್ಯ ಟೋಪಿ ಹೊಲಿದು
ಅವುಗಳನ್ನು ಮಾರಿ ಬಂದ ಹಣದಿಂದ ತನ್ನ ಉಪಜೀವನ
ನಡೆಸುತ್ತಿದ್ದನು. ಆತ ಕಟ್ಟಾ ಮುಸಲ್ಮಾನನಾಗಿದ್ದರೂ ಕೂಡ ಆತನಲ್ಲಿ ದುಡಿದು ಗಳಿಸಿದ ಹಣದಿಂದ ತನ್ನ ಜೀವನ
ನಡೆಸಬೇಕೆಂಬ ಒಂದು ಉತ್ತಮ ನಿಯಮವನ್ನು ಪಾಲಿಸುತ್ತಿದ್ದನು.ಕಣ್ಣಿನ‌ಗುಡ್ಡೆಯಲ್ಲಿ ಕಪ್ಪು ಬಿಳುಪು ಇರುವಂತೆ ಪ್ರತಿಯೊಬ್ಬ‌ ಮನುಷ್ಯನಲ್ಲಿ‌ ಒಳ್ಳೆಯ ಮತ್ತು ಕೆಟ್ಟ ಗುಣಗಳ ಮಿಶ್ರಣವಾಗಿರುತ್ತಾರೆ.ಯಾರೂ ಪೂರ ಕೆಟ್ಟವರಲ್ಲ‌ ಮತ್ತು ಪೂರ ಒಳ್ಳೆಯವರಲ್ಲ. ರಾಜ್ಯ ಭಂಡಾರದ‌ ಮಂತ್ರಿಯಾಗಿದ್ದ ಕಲ್ಯಾಣದ ಬಸವಣ್ಣನವರು ಅನ್ನದೊಳಗೊಂದಗುಳ ನೂಲಿನೊಳಗೊಂದೆಳೆಯ, ಚಿನ್ನದೊಳಗೊಂದೊರೆಯ ಕೊಂಡೆನಾದರೆ ಕೂಡಲಸಂಗಮದೇವ ನಿಮ್ಮಾಣೆ‌‌ ನಿಮ್ಮ ಪ್ರಮಥರಾಣೆ ಎಂದು‌ ಹೇಳಿ ಕಾಯಕದ ಮಹತ್ವ ಸಾರಿದ್ದಾರೆ. ಹಾಗೆ ನಾವು ಕಷ್ಟಪಟ್ಟು ದುಡಿದು ಗಳಿಸಿದ ಹಣದಿಂದ ಜೀವನಮಾಡಬೇಕೆ ಹೊರತು ಅನ್ಯಾಯದಿಂದ ಬಂದ ಹಣದಿಂದ‌ ಜೀವನ ನಡೆಸಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ರಾಜ್ಯ ಭಂಡಾರ ಬಳಸದ ಮೇಲಿನ
ರಾಜ ಮತ್ರು ಮಂತ್ರಿಗಳು ನಮಗೆ ಆದರ್ಶಪುರುಷರು.

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group