ಮನುಷ್ಯನನ್ನು ಗುಣದಿಂದ ಅಳೆಯಬೇಕು – ಅರಭಾವಿಯ ಗುರುಬಸವಲಿಂಗ ಸ್ವಾಮಿಗಳ ಅಭಿಮತ

Must Read

ಮೂಡಲಗಿ: ‘ಮನುಷ್ಯನನ್ನು ಗುಣದಿಂದ ಅಳೆಯಬೇಕು ಹೊರತು ದುಡ್ಡು, ಅಧಿಕಾರ, ಅಂತಸ್ತಿನಿಂದಲ್ಲ’ ಎಂದು ಅರಭಾವಿಯ ದುರದುಂಡೀಶ್ವರ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮಿಗಳು ಹೇಳಿದರು.

ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಪುಣ್ಯಾರಣ್ಯ ಮಠದಲ್ಲಿ ಮಾಸಿಕ ಶಿವಾನುಭವ ಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಪ್ರಸ್ತುತ ಸಮಾಜವು ಗುಣವಂತರನ್ನು ಮರೆತು ಅಧಿಕಾರ ಮತ್ತು ಹಣವಂತರಿಗೆ ಬೆಲೆ ಕೊಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

ಇಂದು ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತ ಕುಟುಂಬಗಳಾಗುತ್ತಿದ್ದು ಇದರಿಂದ ತಂದೆ, ತಾಯಿ, ಸಹೋದರ, ಸಹೋದರಿಯರ ಸಂಬಂಧಗಳು ಕಳಚಿಕೊಳ್ಳುತ್ತಿವೆ ಎಂದರು.

ಸದಲಗಾದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ವೀರೇಶ ಪಾಟೀಲ ‘ಕೌಟುಂಬಿಕ ಮೌಲ್ಯಗಳು’ ವಿಷಯ ಕುರಿತು ಮಾತನಾಡಿ ತಂದೆ, ತಾಯಿ ತಮ್ಮ ಜವಾಬ್ದಾರಿಗಳನ್ನು ಮರೆಯುತ್ತಿರುವುದರಿಂದ ಮಕ್ಕಳ ಭವಿಷ್ಯದಲ್ಲಿ ಏರುಪೇರು ಆಗುತ್ತಲಿದೆ. ಕುಟುಂಬದ ವ್ಯವಸ್ಥೆ ಚೆನ್ನಾಗಿದ್ದರೆ ಮಕ್ಕಳು ಏಳ್ಗೆಯನ್ನು ಕಾಣುವರು ಎಂದರು.

ಘಟಪ್ರಭಾ ಪಿಎಸ್‌ಐ ಎಸ್.ಆರ್. ಕಣವಿ, ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರು ಮಹೇಶ ಬಾಗಡೆ ಮಾತನಾಡಿದರು.
ಯಲ್ಲಪ್ಪ ಗೌಡರ, ಲಕ್ಷ್ಮಣ  ಸಂಗೋಟಿ, ಆನಂದ ಹಣಜಾಗೋಳ ಅವರನ್ನು ಸನ್ಮಾನಿಸಿದರು.
ಅಪ್ಪಾಸಾಹೇಬ ಕುರುಬರ ತಂಡದಿಂದ ಸಂಗೀತ ಕಾರ‍್ಯಕ್ರಮ ಜರುಗಿತು. ಪ್ರೊ. ವಿ.ಕೆ. ನಾಯಿಕ ನಿರೂಪಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group