ಬೀದರ – ‘ಪುಷ್ಪ’ ಚಲನ ಚಿತ್ರದ ಮಾದರಿಯಲ್ಲಿ ಬೊಲೆರೋ ವಾಹನದ ಕೆಳಗಡೆ ಜಾಗ ಮಾಡಿ ಅದರಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ತಂಡವೊಂದನ್ನು ಬೀದರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸುಮಾರು ೨೧ ಲಕ್ಷ ರೂ. ಮೌಲ್ಯದ ೧೦೦ ಕೆಜಿ ರಕ್ತ ಚಂದನ ಕಟ್ಟಿಗೆಯನ್ನು ಜೀಪ್ ನ ಕೆಳಗಡೆ ಇನ್ನೊಂದು ಭಾಗ ಮಾಡಿ ಕಳ್ಳತನದಿಂದ ಸಾಗಿಸಲಾಗುತ್ತಿತ್ತು. ಇದಲ್ಲದೆ ಒಟ್ಟು ಒಂಬತ್ತು ಪ್ರಕರಣಗಳನ್ನು ಭೇದಿಸಿದ ಪೊಲೀಸರು ೭ ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೂರು ಮನೆಗಳ್ಳತನ ಪ್ರಕರಣದಲ್ಲಿ ೨೮ ಲಕ್ಷಕ್ಕು ಅಧಿಕ ಮೌಲ್ಯದ ಚಿನ್ನಾಭರಣಗಳು, ಒಂದು ಪಂಪ್ ಸೆಟ್ ಹಾಗೂ ಸರಗಳ್ಳತನ ಭೇದಿಸಿ ೫ ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳು ಹಾಗೂ ಬಸವಕಲ್ಯಾಣ, ಹುಮನಾಬಾದ, ಮನ್ನಾ ಏಖೆಳಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಭೇದಿಸಿ ಭರ್ಜರಿ ಬೇಟೆಯಾಡಿದ್ದಾರೆ ಬೀದರ ಪೊಲೀಸರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಎಸ್ ಪಿ ಪ್ರದೀಪ ಗುಂಟಿ ಮಾಹಿತಿ ಹಂಚಿಕೊಂಡರು.
ವರದಿ : ನಂದಕುಮಾರ ಕರಂಜೆ, ಬೀದರ