- Advertisement -
ಕಾಸರಗೋಡು- ಬೆಳಗಾವಿ ಜಿಲ್ಲೆಯ ಪತ್ರಕರ್ತರು, ಸಾಹಿತಿಗಳಾದ ಸಿ.ವೈ.ಮೆಣಸಿನಕಾಯಿಯವರನ್ನು ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಕರ್ನಾಟಕ ರಾಜ್ಯ ನಿರ್ದೆಶಕರಾಗಿ ಆಯ್ಕೆ ಮಾಡಲಾಗಿದೆ.
ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)
ಕನ್ನಡ ಭವನ ಪ್ರಕಾಶನ. ಕನ್ನಡ ಭವನ ಸಾರ್ವಜನಿಕ ವಾಚನಾಲಯ, ಕನ್ನಡ ಭವನ ಉಚಿತ ವಸತಿ, (ಕರ್ನಾಟಕದಿಂದ ಕಾಸರಗೋಡು ಕನ್ನಡ ಯಾತ್ರಾರ್ಥಿಗಳಿಗೆ ), ಕನ್ನಡ ಭವನ ಪ್ರಶಸ್ತಿ ಸಮಿತಿಗೆ, ಕನ್ನಡ ಭವನ ಬೃಹತ್ ಕಾರ್ಯಕ್ರಮ ಸಂಘಟನೆಗೆ, ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಸ್ಥೆಯ ಶಾಖೆ ಸಂಘಟಿಸುವ ಜವಾಬ್ದಾರಿಯನ್ನು ಮೆಣಸಿನಕಾಯಿಯವರು ನಿರ್ವಹಿಸಬೇಕೆಂದು ಆಯ್ಕೆ ಮಾಡಿರುವ ಕನ್ನಡ ಭವನದ ಸಂಸ್ಥಾಪಕರಾದ ಡಾ.ವಾಮನರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.