ಸಿಂದಗಿ: ಕನ್ನಡ ಭಾಷಾಭಿಮಾನದ ಜೊತೆಗೆ ಬದುಕಿನಲ್ಲಿ ನಿರಂತರ ಅಧ್ಯಯನ ಸಾತ್ವಿಕ ಹೋರಾಟ ಮಾಡಿದರೆ ಗುರಿಮುಟ್ಟಲು ಸಾಧ್ಯ. ವಿದ್ಯಾರ್ಥಿಜೀವನದಲ್ಲಿ ಸಾಹಿತ್ಯ ಓದುವುದು ಹಾಗೂ ಬರೆಯುವುದನ್ನೂ ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಸಾಹಿತ್ಯಾಭಿಮಾನ ಹಾಗೂ ಭಾಷಾಭಿಮಾನ ಮೂಡುತ್ತದೆ ಎಂದು ಪ್ರಾಧ್ಯಾಪಕ ಡಾ. ಮಿರಾಜ್ ಪಾಷಾ ಹೇಳಿದರು.
ಪಟ್ಟಣದ ಪಿ.ಇ.ಎಸ್ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಕನ್ನಡ ನಾಡಿನಲ್ಲಿ ಹಲವಾರು ಸಂತ ಶರಣರು, ವೀರಶೂರರು ನೆಲೆಸಿ ಹೋಗಿದ್ದಾರೆ ಅಂತಹ ವ್ಯಕ್ತಿಗಳ ಮಾರ್ಗದಲ್ಲಿ ನಾವು ಸಾಗುತ್ತಾ ನಾಡು ನುಡಿಯನ್ನು ಉಳಿಸಿಕೊಂಡು ಹೋಗಬೇಕಾಗಿರುವದು ನಮ್ಮೆಲ್ಲರ ಕರ್ತವ್ಯವಾಗಿದೆ.
ಸಮಾರಂಭದ ಉದ್ಘಾಟನೆಯನ್ನು ಎಂ.ಜೆ.ಎಫ್. ಲಾಯಿನ್ ಕೆ.ಎಚ್. ಸೋಮಾಪೂರ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಬಿ.ಪಿ. ಕರ್ಜಗಿಯವರು ವಹಿಸಿದ್ದರು. ಹಿರಿಯ ಉಪನ್ಯಾಸಕರಾದ ಪಿ.ಎಮ್. ಮಡಿವಾಳರ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್. ಕಡಣಿ, ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಬಿ. ಗೋಡಕರ ಉಪನ್ಯಾಸಕಿಯರಾದ ಎಂ.ಎಸ್. ಶ್ರೀಗಿರಿ, ಉಪಸ್ಥಿತರಿದ್ದರು. ಕು. ನಿಂಗಮ್ಮ ನಾಟೀಕಾರ ನಿರೂಪಿಸಿದರು.