ಸಿಂದಗಿ : ಮಾನವನು ನಿರಂತರವಾಗಿ ಧ್ಯಾನ ಮತ್ತು ಸತ್ಸಂಗ ಮಾಡುತ್ತ ತನ್ನಲ್ಲಿರುವ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮದ, ಮೋಹ, ಮತ್ಸರಗಳನ್ನು ನಾಶಗೊಳಿಸಿ ಸದ್ಗುಣಗಳೊಂದಿಗೆ ಶಾಂಭವಿಯ ಕೃಪೆ ಪಡೆದು ದೇವ ಮಾನವನಾಗಲು ಸಾಧ್ಯ ಎಂದು ಶಾಂತಯ್ಯ ಗುರಲಿಂಗಯ್ಯ ಹಿರೇಮಠ ಹೇಳಿದರು.
ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಹಿರೇಮಠದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಶ್ರೀ ದೇವಿ ಪುರಾಣದಲ್ಲಿ ದೇವಿ ಪಾರಾಯಣ ಮಾಡುವ ಮೂಲಕ ಮಾತನಾಡಿ ಗ್ರಾಮ ಹಿರೇಮಠದ ಕುಟುಂಬಸ್ಥರು ನಡೆಸುತ್ತಿರುವ ದೇವಿ ಪಾರಾಯಣ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡುತ್ತಾ ಬಂದಿದಾರೆ .ಶ್ರೀ ದೇವಿ ಪುರಾಣ ಮಹಾ ಮಂಗಲೋತ್ಸವ ದಿನದಂದು ಸಾವಿರದಾ ಎಂಟು ಮುತೈದೆಯರ ಪಾದ ಪೂಜೆ ಉಡಿ ತುಂಬುವ ತದನಂತರ ಮಹಾ ಪ್ರಸಾದ ನೆರವೇರಿಸುತ್ತ ಬಂದಿರುವ ಪ್ರಕಾರ ಈ ವರ್ಷವು ಶ್ರೀ ಕ್ಷೇತ್ರ ಚಿಕ್ಕಸಿಂದಗಿ ಹಿರೇಮಠದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ
ಅ 8 ಮಂಗಳವಾರರಂದು ಸಂಜೆ 7ಕ್ಕೆ ಪುಣ್ಯ ತಾಣ ಚಿಕ್ಕಸಿಂದಗಿ ಹಿರೇಮಠದ ಸಿರಿದಾತೆ ಶ್ರೀದೇವಿ ಸುಪ್ರಭಾತ ಹಾಗೂ ಭಕ್ತಿ ಗೀತೆ ಧ್ವನಿ ಸುರುಳಿ ಬಿಡುಗಡೆಗೆ ತಾಲೂಕಿನ ಜನಪ್ರಿಯ ಶಾಸಕರು, ಮಾಜಿ ಶಾಸಕರು ಹಾಗೂ ವಿವಿದ ಮಠದ ಶ್ರೀಗಳು ಹಿರೇಮಠದ ಸಮಸ್ತ ಸದ್ಭಕ್ತರು ಭಾಗವಹಿಸುವರು.
ಅ 10 ಗುರುವಾರ ರಂದು ಶ್ರೀದೇವಿ ಪುರಾಣ ಮಹಾಮಂಗಲ ನಿಮಿತ್ತ ಮುಂಜಾನೆ 11ರಿಂದ ಮುತೈದೆಯರ ಪಾದ ಪೂಜೆ ಉಡಿತುಂಬುವ ಅದ್ದೂರಿ ಕಾರ್ಯಕ್ರಮದ ನಂತರ ರಾತ್ರಿ 10 ಕ್ಕೆ ನಾಟಕ “ಮಗ ಹೋದರು ಮಾಂಗಲ್ಯ ಬೇಕು” ಅರ್ಥಾತ್ ಹೆತ್ತವಳ ಹಾಲು ವಿಷವಾಯಿತು ಸುಂದರ ಸಾಮಾಜಿಕ ನಾಟಕ ಜರುಗುವದು ಎಂದು ಹಿರೇಮಠ ಬಂಧುಗಳು ತಿಳಿಸಿದರು.